ಡೈಲಿ ವಾರ್ತೆ: 15/ಆಗಸ್ಟ್/ 2025

ಎಸ್.ಡಿ.ಟಿ.ಯು ಆಟೋ ಚಾಲಕರ ಯೂನಿಯನ್ ಮಂಗಳೂರು ನಗರ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಮಂಗಳೂರು ಅ15 : ಎಸ್.ಡಿ.ಟಿ.ಯು ಆಟೋ ಚಾಲಕರ ಯೂನಿಯನ್ ಮಂಗಳೂರು ನಗರ ಸಮಿತಿ ಹಾಗೂ ಎಸ್.ಡಿ.ಟಿ.ಯು ಕಚ್ಚಿ ಪಾರ್ಕ್ ಬಂದರ್ ಜಂಟಿಯಾಗಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಎಸ್.ಡಿ.ಟಿ.ಯು ಮಂಗಳೂರು ನಗರ ಸಮಿತಿ ಅಧ್ಯಕ್ಷರಾದ ಇಲ್ಯಾಸ್ ಬೆಂಗರೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಬಂದರು ಪೋಲಿಸ್ ಠಾಣಾಧಿಕಾರಿ ಭರತ್ ಕುಮಾರ್ ರವರು ಧ್ವಜಾರೋಹಣ ನೆರೆವೆರಿಸಿ ಸಂದೇಶ ನೀಡಿದರು.
ಎಸ್.ಡಿ.ಟಿ.ಯು ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ಇರ್ಫಾನ್ ಕಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯ ಪ್ರಭಾಷಣ ಮಾಡಿದರು.

ಈ ಸಂಧರ್ಭದಲ್ಲಿ ಎಸ್.ಡಿ.ಟಿ.ಯು ಮಂಗಳೂರು ನಗರ ಘಟಕ ಅಧ್ಯಕ್ಷರಾದ ಇಕ್ಬಾಲ್ ಬಿಪಿ, ಕಾರ್ಯದರ್ಶಿ ಅನ್ಸಾರ್ ಕುದ್ರೋಳಿ, ಉಪಾಧ್ಯಕ್ಷರಾದ ಮುಸ್ತಫಾ ಪರ್ಲಿಯಾ ಕಚ್ಚಿ ಪಾರ್ಕ್ ಕಾರ್ಯದರ್ಶಿ ಲತೀಫ್ ವಿಕೆ ಕೋಶಾಧಿಕಾರಿ ಬಶೀರ್ ತನ್ನೀರುಬಾವಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅನ್ಸಾರ್ ಕುದ್ರೋಳಿ ಸ್ವಾಗತಿಸಿ ಮುಸ್ತಫಾ ಪರ್ಲಿಯಾ ಧನ್ಯವಾದಗೈದರು.