ಡೈಲಿ ವಾರ್ತೆ: 15/NOV/2023
ಮಂಚಿ : ೭೦ನೇ ಅಖಿಲ ಭಾರತ ಸಹಕಾರ ಸಪ್ತಾಹ -೨೦೨೩ ಇದರ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಹಕಾರ ಸಪ್ತಾಹದ ಉದ್ಘಾಟನೆ.
ಬಂಟ್ವಾಳ : ಸಂಘಟನೆಯಲ್ಲೂ ಸೇವೆಯಲ್ಲೂ ತಾವು ಮುಂದೆ ಎಂಬುದನ್ನು ಸಹಕಾರಿ ಸಂಘ ತೋರಿಸಿಕೊಟ್ಟಿದೆ, ಸಮಾಜದ ಬೆಳವಣಿಗೆಗೆ ಸಹಕಾರಿ ಕ್ಷೇತ್ರ ಅಗತ್ಯ. ಸ್ವಾಭಿಮಾನ ಮತ್ತು ನೆಮ್ಮದಿಯ ಬದುಕಿಗಾಗಿ ಸಹಕಾರಿ ವ್ಯವಸ್ಥೆಯ ಪಾತ್ರ ಮಹತ್ವದ್ಸು. ಮಂಚಿ ಸಹಕಾರ ಸಂಘ ಕಾರ್ಯಕ್ರಮವನ್ನು ಬಹಳಷ್ಟು ವಿಜ್ರಂಭಣೆಯಿಂದ ನಡೆಸಿರುವುದು ತುಂಬಾ ಸಂತಸ ತಂದಿದೆ ಎಂದು ವಿಧಾನಸಭಾ ಅಧ್ಯಕ್ಷರಾದ ಯು. ಟಿ. ಖಾದರ್ ರವರು ಹೇಳಿದರು.
ಅವರು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿ (ನಿ.) ಬೆಂಗಳೂರು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ನಿ.) ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ (ಲಿ.) ಮಂಗಳೂರು ಹಾಗೂ ಮಂಚಿ ವ್ಯವಸಾಯ ಸೇವಾ ಸಹಕಾರ ಸಂಘ ನಿ. ಮಂಚಿ ಕುಕ್ಕಾಜೆ ಮತ್ತು ಬಂಟ್ವಾಳ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ೭೦ನೇ ಅಖಿಲ ಭಾರತ ಸಹಕಾರ ಸಪ್ತಾಹ -೨೦೨೩ ಇದರ ಅಂಗವಾಗಿ ಕುಕ್ಕಾಜೆಯಲ್ಲಿರುವ ಮಂಚಿ ವ್ಯವಸಾಯ ಸೇವಾ ಸಹಕಾರ ಸಂಘದ ವಠಾರದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸಹಕಾರಿ ಕ್ಷೇತ್ರ ದೇಶದ ಬೆಳವಣಿಗೆಗೆ ದೊಡ್ಡ ಮಟ್ಟದ ಕೊಡುಗೆ ನೀಡಿದೆ. ಹಿರಿಯರ ಪರಂಪರೆಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ದೂರದರ್ಶಿತ್ವ ಇಟ್ಟುಕೊಂಡು ಸಹಕಾರಿಯನ್ನು ಹುಟ್ಟುಹಾಕಿದ ಹಿರಿಯರನ್ನು ನಾವು ನೆನೆಸಿಕೊಳ್ಳುವುದು ಅತೀ ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ, ಸಹಕಾರ ತತ್ವದಲ್ಲಿ ಸಹಕಾರಿ ಬ್ಯಾಂಕುಗಳು ನಡೆಯುತ್ತಿದೆ. ದ.ಕ.ಜಿಲ್ಲೆಯ ಸಹಕಾರಿ ಸಂಸ್ಥೆಗಳು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಸಹಕಾರಿ ಕ್ಷೇತ್ರಕ್ಕೆ ಅನೇಕ ಕೊಡುಗೆಗಳನ್ನು ನೀಡಿದ ಮಹಾನ್ ವ್ಯಕ್ತಿಗಳು ದ.ಕ.ಜಿಲ್ಲೆಯವರು ಎಂದು ಹೇಳಲು ಅತೀವ ಸಂತಸವಾಗಿದೆ ಎಂದರು.
ಮಾಜಿ ಸಚಿವ ರಮಾನಾಥ ರೈ ಸಹಕಾರ ಸಪ್ತಾಹದ ಮೆರವಣಿಗೆ ಯನ್ನು ಉದ್ಘಾಟಿಸಿದರು. ದ.ಕ ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಧ್ವಜಾರೋಹಣ ಗೈದರು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಟಿ. ಜಿ. ರಾಜಾರಾಮ ಭಟ್ ‘ಸಹಕಾರ ಸಂಘ ಸಂಸ್ಥೆಗಳಲ್ಲಿನ ಇತ್ತೀಚಿನ ಬೆಳವಣಿಗೆ’ ವಿಚಾರದ ಕುರಿತು ಉಪನ್ಯಾಸ ನೀಡಿದರು.
ದ.ಕ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಸ್ಕ್ಯಾಡ್ಸ್‌ನ ಅಧ್ಯಕ್ಷ ರವೀಂದ್ರ ಕಂಬಳಿ, ಕ್ಯಾಂಪ್ಕೊ ನಿರ್ದೇಶಕ ಎಸ್.ಆರ್. ಸತೀಶ್ಚಂದ್ರ , ಭೂ ಅಭಿವೃದ್ಧಿ ಬ್ಯಾಂಕ್ ಬಂಟ್ವಾಳ ಇದರ ಅಧ್ಯಕ್ಷ ಅರುಣ್ ರೋಶನ್ ಡಿಸೋಜ, ಮಂಗಳೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಜೆ. ಸುಧೀರ್ ಕುಮಾರ್, ಸಹಕಾರಿ ಯೂನಿಯನ್ ನ ನಿರ್ದೇಶಕಿ ಸಾವಿತ್ರಿ ರೈ, ವಿಟ್ಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷ ಇಬ್ರಾಹಿಂ ಜಿ. ಎಮ್., ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಉಮ್ಮರ್ ಎಂ.ಬಿ., ಬಂಟ್ವಾಳ ಸಹಕಾರ ಅಭಿವೃದ್ಧಿ ಅಧಿಕಾರಿ ಗೋಪಾಲ ಎನ್. ಜೆ., ಸಹಕಾರ ಸಂಘಗಳ ವಲಯ ಮೇಲ್ವಿಚಾ ಯೋಗೀಶ ಹೆಚ್, ಪ್ರಮುಖರಾದ ಸವಿತಾ ಶೆಟ್ಟಿ, ಹೀರೇಮಠ್, ಮಂಚಿ ವ್ಯವಸಾಯ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ವಿಶ್ವನಾಥ ನಾಯ್ಕ್ ಎನ್, ಮುಖ್ಯಕಾರ್ಯ ನಿರ್ವಹಣಾಧಿಕಾರಿ ನಾರಾಯಣ ಪಿ., ನಿರ್ದೇಶಕರಾದ ಅಬ್ದುಲ್ ರಹಿಮಾನ್, ಭಾಗೀರಥಿ ಎಮ್, ಮೋಹನದಾಸ ಶೆಟ್ಟಿ, ಕೇಶವ ರಾವ್ ಎನ್, ದಿವಾಕರ ನಾಯಕ್, ಸುಧಾಕರ ರೈ, ನಿಶ್ಚಲ್ ಜಿ. ಶೆಟ್ಟಿ, ದೇವಿಪ್ರಸಾದ್ ಎಮ್, ಫಿಲೋಮಿನಿ, ಸಂದ್ಯಾಕುಮಾರಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
*ಸಾಧಕರಿಗೆ ಸನ್ಮಾನ.*
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರುಗಳಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಐ. ನೇಮು ಪೂಜಾರಿ, ಪ್ರಗತಿಪರ ಕೃಷಿಕ ಬಾಲಾಜಿಬೈಲು ವಿಠಲ ರೈ, ಮೋಂತು ಅಲ್ಬುಕರ್ಕ್, ಸಿ.ಹೆಚ್. ಮಹಮ್ಮದ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವಕಮಂಡಲ ಇರಾ ಹಾಗೂ ಭಾರತ್ ಫ್ರೆಂಡ್ಸ್ ಕ್ಲಬ್ ಇರಾ ಇದರ ಅಧ್ಯಕ್ಷರು, ಮಂಚಿ ಸೇವಾ ಸಹಕಾರ ಸಂಘದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್ ಪ್ರತಾಪ್ ಪಿ., ರವೀಂದ್ರ ಶೆಟ್ಟಿ, ರಾಮಕೃಷ್ಣ ಭಟ್ ಕಜೆ, ಮಂಚಿ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷರುಗಳಾದ ಪಿ.ಎಂ.ಕೊಡಂಗೆ, ಸಾಯಿನಾಥ ಪೂಂಜ, ಕಯ್ಯೂರು ನಾರಾಯಣ ಭಟ್, ಚಂದ್ರಹಾಸ ಕರ್ಕೇರ, ನವೋದಯ ಸಂಘದ ಪ್ರೇರಕಿ ತುಳಸಿ ಪಿ.ಇವರನ್ನು ಗೌರವಿಸಲಾಯಿತು.
ಮಂಚಿ ಸೇವಾ ಸಹಕಾರ ಸಂಘದ ನಿರ್ದೇಶಕ ಚಂದ್ರಹಾಸ ಕರ್ಕೇರ ಪ್ರಾಸ್ತಾವಿಕ ಮಾತನಾಡಿ ಸೊನ್ನೆ ಯಿಂದ ಮೇಲೆ ಬಂದ ಸಹಕಾರಿ ನಮ್ಮದು. ೭೦ನೇ ಸಹಕಾರಿ ಸಪ್ತಾಹದೊಂದಿಗೆ ನಮ್ಮ ಸಹಕಾರಿಯ ೭೦ನೇ ವಾರ್ಷಿಕೋತ್ಸವವನ್ನು ಆಚರಿಸುವಂತಾಗಿದೆ. ಹಲವಾರು ಹಿರಿಯರ ಕಠಿಣ ಪರಿಶ್ರಮದ ಫಲವಾಗಿ ೧೯೫೩ರಲ್ಲಿ ಸಂಸ್ಥೆಯ ಹುಟ್ಟಾಗಿದೆ. ೧೯೯೬ರ ಬಳಿಕ ಸಂಸ್ಥೆ ಏಳಿಗೆ ಕಾಣಲು ಸಾಧ್ಯವಾಯಿತು. ಸಂಘದ ಅಭಿವೃದ್ಧಿ ಎಲ್ಲರು ಜೊತೆಯಾಗಿ ಸಾಗಿದಾಗ ಮಾತ್ರ ಸಾಧ್ಯ. ಸೊಸೈಟಿಯಲ್ಲಿ ಪಕ್ಷ ಭೇದ ಮರೆತು ಕೆಲಸಮಾಡುತ್ತಿದ್ದೇವೆ. ೨೦ ಜನರಿಂದ ಆರಂಭವಾದ ಸಹಕಾರಿಯಲ್ಲಿ ಇದೀಗ ೩೭೨೧ ಸದಸ್ಯರಿದ್ದಾರೆ. ಕಳೆದ ವಾರ್ಷಿಕ ವರ್ಷದಲ್ಲಿ ೧ಕೋಟಿ ಹದಿನೈದು ಲಕ್ಷ ಲಾಭ ಬಂದಿದೆ ಎಂದರು.
ಮಂಚಿ ವ್ಯವಸಾಯ ಸೇವಾ ಸಹಕಾರ ಸಂಘ ಅಧ್ಯಕ್ಷ ಬಿ. ಉಮ್ಮರ್ ಸ್ವಾಗತಿಸಿ ಬ್ಯಾಂಕ್ ನಡೆದು ಬಂದ ಹಾದಿ ಹಾಗೂ ಯಶಸ್ಸಿನ ಬಗ್ಗೆ ಮಾಹಿತಿ ನೀಡಿದರು. ಮಂಚಿ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ದಿವಾಕರ ನಾಯಕ್ ವಂದಿಸಿದರು.
ಕುಕ್ಕಾಜೆ ಮಂಚಿ ಮಹಾದೇವ ವಿವಿದೋದ್ಧೇಶ ಸಹಕಾರ ಸಂಘ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪುಷ್ಪರಾಜ್ ಮತ್ತು ಮುತ್ತಯ್ಯ ಮರಾಟೆ ಕಾರ್ಯಕ್ರಮ ನಿರೂಪಿಸಿದರು.