ಡೈಲಿ ವಾರ್ತೆ: 16/NOV/2023
ನ.20 ರಂದು ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘ ದರ್ಬೆ – ಪುತ್ತೂರು ಇದರ 14 ನೇ ನೂತನ ಶಾಖೆ ಬಿ.ಸಿ.ರೋಡಿನಲ್ಲಿ ಉದ್ಘಾಟನೆ.
ಬಂಟ್ವಾಳ : ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ದರ್ಬೆ ಪುತ್ತೂರು ಇದರ 14 ನೇ ನೂತನ ಶಾಖೆ ಬಿ.ಸಿ.ರೋಡಿನ ಪಾರ್ಕ್ ಸ್ಕ್ವೇರ್ ನ ಪ್ರಥಮ ಮಹಡಿಯಲ್ಲಿ ನ.20 ರಂದು ಸೋಮವಾರ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಸವಣೂರು ಸೀತಾರಾಮ ರೈ ತಿಳಿಸಿದರು.
ಅವರು ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಬ್ಯಾಂಕ್ ನ ಕಚೇರಿಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಉದ್ಘಾಟಿಸಲಿದ್ದು, ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದಾರೆ.
ರೊಟೇರಿಯನ್ ಪ್ರಕಾಶ್ ಕಾರಂತ ಭದ್ರತಾ ಕೊಠಡಿಯನ್ನು , ಮೊಡಂಕಾಪು ಚರ್ಚ್ ನ ರೆ! ಫಾ!ವೆಲೇರಿನ್ ಎಸ್. ಡಿ.ಸೋಜ ಕಂಪ್ಯೂಟರ್ ಉದ್ಘಾಟನೆ, ಪೊಳಲಿ ವ್ಯ.ಸೇ.ಸ.ಬ್ಯಾಂಕ್ ನ ನಿರ್ದೇಶಕ ಅಬೂಬಕ್ಕರ್ ಅಮ್ಮುಂಜೆ ಠೇವಣಿ ಪತ್ರ ಬಿಡುಗಡೆ ಮಾಡಲಿದ್ಧಾರೆ ಎಂದು ಅವರು ತಿಳಿಸಿದರು.
ಪುತ್ತೂರು ತಾಲೂಕಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘ ಸುಳ್ಯ, ಕಡಬದಲ್ಲಿ ಒಟ್ಟು 13 ಶಾಖೆಗಳನ್ನು ಹೊಂದಿದೆ. 14 ನೇ ಶಾಖೆಯನ್ನು ಬಿ.ಸಿ.ರೋಡಿನಲ್ಲಿ ಆರಂಭಿಸಲಾಗುತ್ತದೆ. ಈ ನೂತನ ಶಾಖೆಯಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಸಹಕಾರಿ ಬ್ಯಾಂಕಿನ ವ್ಯಾಪ್ತಿಯಲ್ಲಿ ಬರುವ ಸರಕಾರಿ ಶಾಲೆಯಲ್ಲಿ 7 ರಿಂದ 10 ನೇತರಗತಿಯಲ್ಲಿ ಕಲಿಯುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಸಹಾಯಧನ ನೀಡಲಾಗುತ್ತದೆ. ಈವರೆಗೆ ಒಟ್ಟು 1067 ಮಕ್ಕಳಿಗೆ 21,73,000 ರಷ್ಟು ಮೊತ್ತವನ್ನು ವಿತರಿಸಿದೆ.
ಸಂಘವು ಈ ಸಾಲಿನಲ್ಲಿ ಒಟ್ಟು 605 ಕೋಟಿ ವ್ಯವಹಾರ ನಡೆಸಿ,1 ಕೋಟಿ, 51 ಲಕ್ಷ ಲಾಭಾಂಶ ಗಳಿಸಿದೆ. ಶೇ 15℅ ಡಿವಿಡೆಂಡ್ ನ್ನು ಸದಸ್ಯರಿಗೆ ನೀಡಲಾಗಿದೆ. ಸಂಘದ ಕೇಂದ್ರ ಕಚೇರಿಗೆ ಸವಣೂರಿನಲ್ಲಿ 0.75 ಸೆಂಟ್ಸ್ ಜಾಗ ಖರೀದಿ ಮಾಡಿ ಕಟ್ಟಡದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಎನ್.ಸುಂದರ ರೈ, ಮಹಾ ಪ್ರಬಂಧಕ ವಸಂತ್ ಜಾಲಾಡಿ, ಶಾಖಾ ವ್ಯವಸ್ಥಾಪಕ ವಿನೋದ್ ಕುಮಾರ್ ಶೆಟ್ಟಿ, ನಿರ್ದೇಶಕರುಗಳಾದ ಬಿ.ಮಹಾಬಲ ರೈ ಬೋಳಂತೂರು, ಅಶ್ವಿನ್ ಎಲ್ ಶೆಟ್ಟಿ ಸವಣೂರು ಮತ್ತಿತರರು ಉಪಸ್ಥಿತರಿದ್ದರು.