ಡೈಲಿ ವಾರ್ತೆ: 19/NOV/2023

ಮಾಬುಕಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ) ಇವರ ನೇತೃತ್ವದಲ್ಲಿ ವಿಪ್ರವೇದಿಕೆ ಐರೋಡಿ – ಬಾಳ್ಕುದ್ರು ಮತ್ತು ಲಯನ್ಸ್ ಕ್ಲಬ್ ಬ್ರಹ್ಮಾವರ – ಬಾರ್ಕೂರು ಇವರ ಸಹಯೋಗದಲ್ಲಿ ಬೃಹತ್ ವೈದ್ಯಕೀಯ ಶಿಬಿರ

ಕೋಟ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಾಬುಕಳ (ರಿ) ಇವರ ನೇತೃತ್ವದಲ್ಲಿ ವಿಪ್ರವೇದಿಕೆ ಐರೋಡಿ – ಬಾಳ್ಕುದ್ರು ಮತ್ತು ಲಯನ್ಸ್ ಕ್ಲಬ್ ಬ್ರಹ್ಮಾವರ – ಬಾರ್ಕೂರು ಇವರ ಸಹಯೋಗದಲ್ಲಿ
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದವರ
ವಿವಿಧ ವಿಭಾಗದ ತಂಡದೊಂದಿಗೆ ಮಾಬುಕಳ ಧೂಳಂಗಡಿ ಶಾಲೆಯಲ್ಲಿ ಬೃಹತ್ ವೈದಿಕೀಯ ಶಿಬಿರ ನಡೆಯಿತು.

ಹೃದಯ ರೋಗ ತಜ್ಙ ಡಾ. ವಾಸವ್ ಹಾಗೂ ಸ್ತ್ರೀ ರೋಗ ತಜ್ಙೆ ಡಾ.ಮೃದುಲ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶಿಬಿರದ ಮಹತ್ವದ ಬಗ್ಗೆ ಮಾತನಾಡಿದರು.

ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಆನಂದ ಗಾಣಿಗ ಸ್ವಾಗತಿಸಿದರು. ಸಮಿತಿಯ ಗೌರವಾಧ್ಯಕ್ಷ ಶ್ರೀಪತಿ ಅಧಿಕಾರಿ ಪ್ರಾಸ್ತಾವಿಕ ಮಾತನಾಡಿದರು.
ಈ ಸಂಧರ್ಭದಲ್ಲಿ ಡಾ. ಹೃಷಿಕೇಶ್ ಕ್ಯಾನ್ಸರ್ ಕಾಯಿಲೆಯ ಬಗ್ಗೆ ಜಾಗೃತ ಮಾಹಿತಿ ನೀಡಿದರು.
ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಗಿರೀಶ್ ಮೈಯ್ಯ ಪ್ರಾರ್ಥಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಸಂತೋಷ್ ಕುಮಾರ ಶೆಟ್ಟಿ ,
ಲಯನ್ ಆನಂದ ಗಾಣಿಗ ವಿಪ್ರವೇದಿಕೆಯ ಸುರೇಶ ಅಡಿಗ ಮುಂತಾದವರು ಉಪಸ್ಥಿತರಿದ್ದರು.
ಗಣೇಶೋತ್ಸವ ಸಮಿತಿಯ ಉಮೇಶ ಕುಂದರ್ ಕಾರ್ಯಕ್ರಮ ನಿರ್ವಹಿಸಿದರು.
ವಿಪ್ರವೇದಿಕೆಯ ಕಾರ್ಯದರ್ಶಿ ಕೃಷ್ಣಮೂರ್ತಿ ಮಕ್ಕಿತ್ತಾಯ ವಂದಿಸಿದರು.
ಮಣಿಪಾಲ ಆಸ್ಪತ್ರೆಯ ಸರ್ಜರಿ ವಿಭಾಗದ ಶ್ರೀ ಕೇಶವ ಗಾಣಿಗರು
ಇವೆಲ್ಲವನ್ನು ಸಂಯೋಜಿಸಿದರು.