ಡೈಲಿ ವಾರ್ತೆ: 19/NOV/2023

ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಭದ್ರತಾ ಲೋಪ: ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಅಪ್ಪಿಕೊಂಡ ಆಸ್ಟ್ರೇಲಿಯನ್ ವ್ಯಕ್ತಿ

ಅಹಮದಾಬಾದ್‌: ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ನಡೆಯುತ್ತಿರುವ ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ ಪಂದ್ಯದಲ್ಲಿ ದೊಡ್ಡ ಭದ್ರತಾ ಲೋಪವಾಗಿದ್ದು ಆಸ್ಟ್ರೇಲಿಯನ್ ವ್ಯಕ್ತಿ ಕ್ರೀಡಾಂಗಣಕ್ಕೆ ನುಗ್ಗಿದ್ದಾನೆ.


ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್‌ ಮಾಡುತ್ತಿದ್ದಾಗ 14ನೇ ಓವರ್‌ನಲ್ಲಿ ಮೈದಾನದ ಒಳಗಡೆ ಆಸ್ಟ್ರೇಲಿಯನ್ ವ್ಯಕ್ತಿ (ಪ್ಯಾಲೆಸ್ತೀನ್‌ ಬೆಂಬಲಿಗ) ನುಗ್ಗಿದ್ದಾನೆ. ಒಳಗಡೆ ನುಗ್ಗಿದ ಆತ ನೇರವಾಗಿ ಕೊಹ್ಲಿ ಬಳಿ ಹೋಗಿ ತಬ್ಬಿಕೊಳ್ಳಲು ಮುಂದಾಗಿದ್ದಾನೆ.

ಪ್ಯಾಲೆಸ್ತೀನ್‌ ಮಾಸ್ಕ್‌ ಧರಿಸಿದ್ದ ಆತನ ಟೀಶರ್ಟ್‌ನಲ್ಲಿ ʼStop Bombing Palestine’ ಎಂಬ ಬರಹ ಇತ್ತು. ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಮೈದಾನದಿಂದ ಹೊರಗಡೆ ಕರೆದುಕೊಂಡು ಹೋಗಿದ್ದಾರೆ. ಒಳಗಡೆ ನುಗ್ಗಿದ ವ್ಯಕ್ತಿ ಹೆಸರು ಜಾನ್‌ ಆಗಿದ್ದ ಆಸ್ಟ್ರೇಲಿಯಾದಿಂದ ಬಂದಿದ್ದ. ಜಾನ್‌ ಪಿಚ್‌ ಪರೀಕ್ಷೆ ಮಾಡಲು ನಿಯೋಜನೆಗೊಂಡಿದ್ದ ವ್ಯಕ್ತಿ ಎಂದು ಈಗ ವರದಿಯಾಗಿದೆ. ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.