ಡೈಲಿ ವಾರ್ತೆ: 26/NOV/2023
ಬೀಜಾಡಿ ಮೀನುಗಾರರ ಸಹಕಾರಿ ಸಂಘಕ್ಕೆ ರಾಜ್ಯ ಮಟ್ಟದ ಅವಳಿ ಪ್ರಶಸ್ತಿ
ಕುಂದಾಪುರ: ಬೀಜಾಡಿ ಮೀನುಗಾರರ ಸಹಕಾರಿ ಸಂಘ ನಿಯಮಿತ ಬೀಜಾಡಿ, ಈ ಸಂಸ್ಥೆಯು ಮಾರಿಬಲೆ ಮೀನುಗಾರರ ಸಹಕಾರದೊಂದಿಗೆ ದಿನಾಂಕ 08/11/1960 ರಲ್ಲಿ ನೋಂದಣೆಯಾಗಿದ್ದು ಆರು ದಶಕಗಳ ಇತಿಹಾಸವನ್ನು ಹೊಂದಿದೆ.
ಈ ಸಂಸ್ಥೆಯ ಪ್ರಾರಂಭದಲ್ಲಿಯೇ ಮೀನುಗಾರರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರಾಥಮಿಕ ಶಾಲೆಯೊಂದನ್ನು ತೆರೆಯುವಲ್ಲಿ ಊರಿನವರೊಂದಿಗೆ ಪ್ರಮುಖಪಾತ್ರ ವಹಿಸಿದ ವಿಕೈಕ ಸಂಸ್ಥೆ ನಮ್ಮದಾಗಿರುತ್ತದೆ. ಮೀನುಗಾರರಿಗೆ ಎ. ಆರ್. ಸಿ. ಸಿ ಯಾಂತ್ರಿಕ ಬೋಟ್ ಸರ್ಕಾರದಿಂದ ನೀಡುವುದರ ಮೂಲಕ 1976-77ರ ಮೀನುಕ್ಷಾಮದಲ್ಲಿ ಬರಪರಿಹಾರ ಒದಗಿಸಿಕೊಟ್ಟ ಕೀರ್ತಿ, ಸಂಘದ ಇತಿಹಾಸದಲ್ಲಿ ಸುಮಾರು 800ಕ್ಕೂ ಮಿಕ್ಕಿ ಮೀನುಗಾರರ ಕುಟುಂಬಕ್ಕೆ ವಸತಿ ಸೌಲಭ್ಯಕ್ಕೆ ಸಹಕಾರ, ಇತ್ತೀಚಿನ ದಿನಗಳಲ್ಲಿ ಕೇಂದ್ರ ಕಛೇರಿಗೆ ನವೀಕೃತ ಸ್ವಂತ ಕಟ್ಟಡ ಮತ್ತು ಸ್ಥಳ, ಕೇಂದ್ರ ಕಛೇರಿ ಸೇರಿ 4 ಶಾಖೆಯನ್ನು ಹೊಂದಿದೆ. ಸಂಘದಲ್ಲಿ ಸುಮಾರು 15,626 ಸದಸ್ಯರನ್ನು ಹೊಂದಿದ್ದು ಬ್ಯಾಂಕಿಂಗ್ ವ್ಯವಹಾರ, ನ್ಯಾಯಬೆಲೆ ಅಂಗಡಿ, ಮೀನುಗಾರಿಕಾ ಕಾಲೇಜಿನಲ್ಲಿ ವ್ಯಾಸಂಗಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಹಕಾರ, ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ಪುರಸ್ಕಾರ, ಸಂಸ್ಥೆಯಲ್ಲಿ 700ಕ್ಕೂ ಹೆಚ್ಚು ಸ್ವ-ಸಹಾಯ ಗುಂಪುಗಳ ಆಯೋಜನೆಯೊಂದಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವಲ್ಲಿ ಸಹಕಾರದೊಂದಿಗೆ ಪ್ರೋತ್ಸಾಹ, ಮೀನುಗಾರಿಕೆಯಲ್ಲಿ ಮೃತಪಟ್ಟ ಅದೆಷ್ಟೋ ಕುಟುಂಬಕ್ಕೆ ವಿಮಾ ಪರಿಹಾರ, ಇನ್ನಿತರ ಸರಕಾರದಿಂದ ಸಿಗುವ ಸೌಲಭ್ಯವನ್ನು ಒದಗಿಸಿಕೊಟ್ಟಿರುವುದಲ್ಲದೆ, ಅನೇಕ ಸಾಮಾಜಿಕ ಕಾರ್ಯಗಳ ಸಾಧನೆಯನ್ನು ಗುರುತಿಸಿ ವಿಶ್ವ ಮೀನುಗಾರಿಕಾ ದಿನಾಚರಣೆಯ ಅಂಗವಾಗಿ ದಿನಾಂಕ 21/11/2023ರಂದು ರಾಜ್ಯ ಸರಕಾರದಿಂದ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ
ಬೀಜಾಡಿ ಮೀನುಗಾರರ ಸಹಕಾರಿ ಸಂಘಕ್ಕೆ ಮೀನುಗಾರಿಕಾ ವಲಯದಲ್ಲಿ” ಅತ್ಯುತ್ತಮ ಮೀನುಗಾರರ ಸಹಕಾರಿ ಸಂಘ ಪ್ರಶಸ್ತಿ”ಯನ್ನು ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ.ಸಿದ್ದರಾಮಯ್ಯನವರು ಪ್ರಶಸ್ತಿ ಪ್ರಧಾನ ಮಾಡಿದರು. ಹಾಗೂ ದಿನಾಂಕ 18-11-2023 ರಂದು ಮಂಗಳೂರಿನಲ್ಲಿ ನಡೆದ ಅಖಿಲ ಭಾರತ ರಾಜ್ಯ ಮಟ್ಟದ ಸಹಕಾರಿ ಸಪ್ತಾಹದಲ್ಲಿ ಬೀಜಾಡಿ ಮೀನುಗಾರರ ಸಹಕಾರಿ ಸಂಘಕ್ಕೆ ಮಾನ್ಯ ಸಹಕಾರಿ ಸಚಿವರಾದ ಕೆ.ಎನ್. ರಾಜಣ್ಣರವರು ಸಹಕಾರಿ ವಲಯದ ಪರವಾಗಿ “ಅತ್ಯುತ್ತಮ ಮೀನುಗಾರರ ಸಹಕಾರಿ ಸಂಘ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ
ಎಂದು ಈ ಹಿಂದೆ ಸಂಸ್ಥೆಗಾಗಿ ದುಡಿದ ಎಲ್ಲಾ ಗೌರವಾನ್ವಿತ ಮಾಜಿ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರಿಗೂ, ಮತ್ತು ಸರ್ವ ಸದಸ್ಯರಿಗೂ ತಿಳಿಸಲು ಸಂತೋಷಪಡುತ್ತೇವೆ.
ಅಧ್ಯಕ್ಷರು / ಉಪಾಧ್ಯಕ್ಷರು / ನಿರ್ದೇಶಕರು / ಮುಖ್ಯ ಕಾರ್ಯನಿರ್ವಹಣಾಧಿಕಾರಿ / ಸಿಬ್ಬಂದಿವರ್ಗ.
ಬೀಜಾಡಿ ಮೀನುಗಾರರ ಸಹಕಾರಿ ಸಂಘ ನಿ., ಬೀಜಾಡಿ ಕೋಟೇಶ್ವರ.