ಡೈಲಿ ವಾರ್ತೆ: 29/NOV/2023

ಕುಂದಾಪುರ NNO ಕಮ್ಯೂನಿಟಿ ಸೆಂಟರ್ ಗೆ ಕರ್ನಾಟಕ ಸರಕಾರದ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜಿಮ್ ಭೇಟಿ

ಕುಂದಾಪುರ: NNO ಕಮ್ಯೂನಿಟಿ ಸೆಂಟರ್ ಕುಂದಾಪುರ ಕ್ಕೆ ಕರ್ನಾಟಕ ಸರಕಾರ ದ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜಿಮ್ ರವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ ಅಲ್ಪಸಂಖ್ಯಾತರಿಗೆ ಹಲವಾರು ಸವಲತ್ತುಗಳು ಕೇಂದ್ರ ಹಾಗೂ ರಾಜ್ಯಸರ್ಕಾರದಿಂದ ಸಿಗುತ್ತದೆ. ನಾವು ಆಯಾ ತಾಲೂಕಿನಲ್ಲಿ ಕಮ್ಯುನಿಟಿ ಸೆಂಟರ್ ಮೂಲಕ ಜನರಿಗೆ ಮಾಹಿತಿ ನೀಡಬೇಕು ಇದರಿಂದ ಜನರಿಗೆ ಅನುಕೂಲ ವಾಗುತ್ತೆ. ಅಲ್ಲದೆ ಸೇವೆ ಯಿಂದ ನಮಗೆ ತೃಪ್ತಿ ಸಿಗುತ್ತೆ. ಜನರ ಪರಿಚಯವಾಗುತ್ತೆ ನಾವು ಜನರೊಂದಿಗೆ ಬೆರೆಯಬೇಕು ಅವರಿಗೆ ಸಹಾಯ ಮಾಡಬೇಕು. ಆಗ ದೇವರು ಸಹ ನಮಗೆ ನಮ್ಮ ಕಷ್ಟದ ಸಂದರ್ಭದಲ್ಲಿ ಇನ್ನೊಬ್ಬರ ಮೂಲಕ ಸಹಾಯ ಮಾಡುತ್ತಾನೆ ಎಂದು ಹೇಳಿದರು.

ಏನ್ ಏನ್ ಒ ಕಮ್ಯುನಿಟಿ ಸೆಂಟರ್ ಅಯುಷ್ಮಾನ್ ಕಾರ್ಡ್ ಶಿಕ್ಷಣದಲ್ಲಿ ವಂಚಿತರಾ ದವರನ್ನು ಮತ್ತೆ ಕರೆದು ಶಿಕ್ಷಣ ನೀಡುವಲ್ಲಿ ಸಹಕಾರ ಮಾಡಿದೆ.
ಸರ್ಕಾರಿ ಉದ್ಯೋಗ ಆರೋಗ್ಯ ತಪಾಸಣಾ ಕಾರ್ಯಕ್ರಮ ಸ್ಕೋಲರ್ಷಿಪ್ ಮಾಡುವಲ್ಲಿ ಸಹಕಾರ ಹೀಗೆ ಹತ್ತು ಹಲವು ಕಾರ್ಯಕ್ರಮ ಮಾಡುದರ ಮೂಲಕ ಈ ಸಂಸ್ಥೆ ಜನರಿಗೆ ಹತ್ತಿರವಾಗಿದೆ ಈ ಸಂಸ್ಥೆಗೆ ನನ್ನಿಂದ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿಡುತ್ತೇನೆ ಎಂದು
ಮಾತನಾಡಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಅಧ್ಯಕ್ಷ ಮುಸ್ತಾಕ್ ಅಹ್ಮದ್. ಕೇಂದ್ರ ಸಮಿತಿಯ ಸಂಘಟನ ಕಾರ್ಯದರ್ಶಿ ಹುಸೇನ್ ಹೈಕಾಡಿ. ಗೌರವ ಅಧ್ಯಕ್ಷ ಮೊಹಮ್ಮದ್ ರಫೀಕ್ ಗಂಗೊಳ್ಳಿ. ಟ್ರಸ್ಟ್ ಸದ್ಯಸ್ಯರಾದ ಪಿರ್ ಸಾಹೇಬ್ ಉಡುಪಿ. ಮಾಜಿ ಉಪಾಧ್ಯಕ್ಷ ರಾದ ಎಮ್ ಪಿ ಮೊಹಿದಿನಬ್ಬ ಕಾಪು. ಉಪಾಧ್ಯಕ್ಷ ಅಬು ಮೊಹಮ್ಮದ್ ಕುಂದಾಪುರ. ಜಿಲ್ಲಾ ಪ್ರದಾನ ಕಾರ್ಯದರ್ಶಿ ಝಹಿರ್ ಅಹ್ಮದ್. ಜಿಲ್ಲಾ ಸದ್ಯಸ್ಯರಾದ ಶಾಬಾನ್ ಹಂಗಳೂರ್.ನಿಹಾರ್ ಅಹ್ಮದ್ ಕುಂದಾಪುರ. ಅಬ್ದುಲ್ ಖಾದರ್ ಮೂಡ್ ಗೋಪಾಡಿ. ಮೊಹಮ್ಮದ್ ಗುಲ್ವಾಡಿ. ಉಸ್ಮಾನ್ ಪಳ್ಳಿ. ಅಕ್ರಮ್ ಉಡುಪಿ. ಏನ್ ಏನ್ ಒ ಕಮ್ಯೂನಿಟಿ ಸೆಂಟರ್ ನ ಉಪಾಧ್ಯಕ್ಷ ರಾದ ಜಮಾಲ್ ಗುಲ್ವಾಡಿ ಇನ್ನಿತರರು ಉಪಸ್ಥಿತರಿದ್ದರು.