ಡೈಲಿ ವಾರ್ತೆ: 03/DEC/2023

ವರದಿ: ವಿದ್ಯಾಧರ ಮೊರಬಾ

ಚಿಕ್ಕಮಂಗಳೂರಿನಲ್ಲಿ ಪೊಲೀಸರಿಂದ ವಕೀಲರೊಬ್ಬರ ಮೇಲೆ ಹಲ್ಲೆ : ವಕೀಲರ ಸಂಘದಿಂದ ಮನವಿ

ಅಂಕೋಲಾ : ಚಿಕ್ಕಮಂಗಳೂರು ಜಿಲ್ಲೆಯ ವಕೀಲರಾದ ಪ್ರೀತಮ ಅವರ ಮೇಲೆ ನ.30 ರಂದು ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ್ದನ್ನು ಇಲ್ಲಿಯ ವಕೀಲರ ಸಂಘದವರು ಖಂಡಿಸಿ ಶನಿವಾರ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ ತಿಳಿಸಿದಂತೆ ಕರ್ನಾಟಕ ರಾಜ್ಯದಲ್ಲಿ ಪದೇ ಪದೇ ವಕೀಲರ ಮೇಲೆ ಹಲ್ಲೆಯಾಗುತ್ತಿರುವು ದನ್ನು ಖಂಡಿಸಿ, ಇಂದು ನಮ್ಮ ವಕೀಲರ ಸಂಘದ ಎಲ್ಲಾ ಸದಸ್ಯರು ಸೇರಿ ಸಭೆ ನಡೆಸಿ ಸರ್ವಾನು ಮತ ದಿಂದ ನಿರ್ಧರಿಸಲಾಯಿತು.

ವಕೀಲರು ತನ್ನ ಪಕ್ಷಗಾರರ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿರುವುದರಿಂದ ಅವರಿಗೆ ತಮ್ಮ ಕೆಲಸ ನಿರ್ವ ಹಿಸುವಾಗ ರಕ್ಷಣೆಯ ಅಗತ್ಯವಿರುತ್ತದೆ. ಆದ್ದರಿಂದ ವಕೀಲರ ಸಂರಕ್ಷಣಾ ಅಧಿನಿಯಮವನ್ನು ಅತೀ ಶೀಘ್ರ ದಲ್ಲಿ ಜಾರಿಗೆ ತರುವಂತೆ ಒತ್ತಾಯ.
ವಕೀಲರ ಮೇಲೆ ಇನ್ನು ಮುಂದೆ ಹಲ್ಲೆ ನಡೆಯದಂತೆ ತಡೆಯಲು ಸೂಕ್ತ ಕ್ರಮಕ್ಕಾಗಿ ಹಾಗೂ ಕಾಯಿದೆ ತಿದ್ದುಪಡಿಗಾಗಿ ಕೂಡಲೇ ಕ್ರಮ ಜರುಗಿಸುವಂತೆ ಗೌರವಾನ್ವಿತ ಮುಖ್ಯ ಮಂತ್ರಿಗಳು, ಗೌರವಾನ್ವಿತ ಗೃಹ ಸಚಿವರಿಗೆ ಮನವಿ.
ಈ ಹಿಂದೆ ರಾಜ್ಯದಲ್ಲಿ ವಕೀಲರ ಮೇಲೆ ಹಲ್ಲೆ ಮತ್ತು ದೌರ್ಜನ್ಯ ನಡೆದಿದ್ದನ್ನು ನೆನಪಿಸಿಕೊಂಡು ಈಗ ನಡೆಯುತ್ತಿರುವ ಹಲ್ಲೆ ಮತ್ತು ದೌರ್ಜನ್ಯದ ಪ್ರಮಾಣ ಇನ್ನೂ ಹೆಚ್ಚಿನ ರೀತಿಯಲ್ಲಿ ಆಗಬಾರದೆಂಬ ಸದು ದ್ದೇಶದಿಂದ ಹಾಗೂ ಎಲ್ಲ ಕಕ್ಷಿಗಾರರಿಗೆ ಈ ಬಗ್ಗೆ ಎಚ್ಚರ ಇರುವಂತೆ ಮಾಡಲು ಮತ್ತು ಆ ಬಗ್ಗೆ ಕ್ರಮ ಜರುಗಿಸಲು ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಅಧಿಕಾರ ನೀಡಲಾಯಿತು.
ವಕೀಲರ ಸಂಘದ ಅಧ್ಯಕ್ಷ ವಿನೋದ ಶಾನಬಾಗ ಮನವಿ ಓದಿದರು. ಗ್ರೇಡ್-2 ತಹಸೀಲ್ದಾರ್ ಜಿ.ಬಿ. ಕುಲಕಣ ್ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ವಕೀಲರಾದ ಬಿ.ಡಿ.ನಾಯ್ಕ, ನಾಗಾನಂದ ಬಂಟ, ಉಮೇಶ ನಾಯ್ಕ, ಬಿ.ಟಿ.ನಾಯಕ, ಆರ್.ಟಿ.ಗೌಡ, ಸುರೇಶ ಬಾನವಳಿಕರ್, ಜಿ.ಎಂ.ನಾಯ್ಕ, ಗುರು ವಿ. ನಾಯ್ಕ, ಪಿ.ಆರ್.ನಾಯ್ಕ, ಜಗದೀಶ ಹಾರವಾಡೇಕರ್, ಎಸ್.ಜಿ.ನಾಯ್ಕ, ಮೌನೇಶ, ಪ್ರತಿಭಾ ನಾಯ್ಕ, ಮಮತಾ ಕೆರೆಮನೆ, ತೇಜು ಬಂಟ ಸೇರಿದಂತೆ ಹಲವರು ಉಪಸ್ಥಿತರಿದ್ದರು.