ಡೈಲಿ ವಾರ್ತೆ: 03/DEC/2023
ವರದಿ: ವಿದ್ಯಾಧರ ಮೊರಬಾ
ಅಂಕೋಲಾ ಕ್ರಿಸ್ತಮಿತ್ರ ಆಶ್ರಮದಲ್ಲಿ ನಡೆದ ವಕೀಲರ ದಿನಾಚರಣೆ – ವಕೀಲರು ಸಮಾಜದಲ್ಲಿ ಆಗು – ಹೋಗುವ ವಿದ್ಯಾಮಾನಗಳ ತಿಳಿದುಕೊಳ್ಳಿ- ನ್ಯಾ. ಮನೋಹರ ಎಂ
ಅಂಕೋಲಾ : ವಕೀಲ ವೃತ್ತಿ ಸಾಮಾಜಿಕ ಜವಾಬ್ದಾರಿಯ ಸೇವೆಯಾಗಿದ್ದು, ಸಮಾಜದಲ್ಲಿ ಆಗು-ಹೋಗುವ ವಿದ್ಯಾಮಾನಗಳ ಬಗ್ಗೆ ತಿಳುವಳಿಕೆಯ ಅನುಭವ ಕಂಡುಕೊಂಡಿದ್ದರೆ, ತನ್ನ ಕಕ್ಷಿದಾರರಿ ಗೆ ಪರಿಪೂರ್ಣವಾದ ನ್ಯಾಯ ನೀಡಲು ಸಾದ್ಯ ಎಂದು ಇಲ್ಲಿನ ಜೆ.ಎಂ.ಎಫ್.ಸಿ.ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮನೋಹರ ಎಂ., ಹೇಳಿದರು.
ಕಾರವಾರ ರಸ್ತೆಗೆ ಹೊಂದಿಕೊಂಡ ಕ್ರಿಸ್ತಮಿತ್ರ ಆಶ್ರಮದಲ್ಲಿ ಭಾನುವಾರ ವಕೀಲರ ಸಂಘದವರು ವಕೀಲರ ದಿನಾಚರಣೆ ನಿಮಿತ್ತ ಆಯೋಜಿಸಿದ ಆಶ್ರಮದ ನಿವಾಸಿಗಳಿಗೆ ಭೋಜನೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ವಕೀಲರು ಬಡವರ, ವೃದ್ಧರ, ವಿದ್ಯಾರ್ಥಿಗಳ, ಆಶಕ್ತರ, ನೊಂದವರ ಸಮಸ್ಯೆಗಳ ಬಗ್ಗೆ ಹೀಗೆ ಜನಸಾಮಾನ್ಯರಿಗೆ ಸಹಾಯವಾಗುವ ರೀತಿಯಲ್ಲಿ ಪ್ರಾಮಾಣ ಕತೆ, ಧೈರ್ಯ, ಶ್ರಮ ಹಾಗೂ ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಳ್ಳುವ ಜತೆ ಕೇವಲ ಪ್ರತಿಫಲಕ್ಕಾಗಿ ವೃತ್ತಿ ನಿರ್ವಹಿಸದೆ ಮಾನವೀಯ ನೆಲೆಯಲ್ಲಿಯೂ ಸೇವೆ ನೀಡಿ. ಈ ಮೂಲಕ ಒಳ್ಳೆಯ ವಕೀಲರಾಗಿ ಗುರುತಿಸಿಕೊಳ್ಳಬಹು ದಾಗಿದೆ ಎಂದರು.
ಇನ್ನೋರ್ವ ಸಿವಿಲ್ ನ್ಯಾಯಾಧೀಶ ಪ್ರಶಾಂತ ಬಾದವಾಡಗಿ ಮಾತನಾಡಿ, ವಕೀಲರ ಸೇವೆ ಸಮಾಜಕ್ಕೆ ಒಂದು ಅಮೂಲ್ಯ ಸೇವೆ. ಸ್ವಾತಂತ್ರ್ಯ ಹೋರಾಟದಿಂದ ಇಂದಿನವರೆಗೂ ಅನೇಕ ಹೋರಾಟಗಳಲ್ಲಿ ವಕೀಲರು ಮುಂಚೂಣ ಯಲ್ಲಿರುತ್ತಾರೆ. ವಕೀಲ ವೃತ್ತಿಯು ಗೌರವಯುತ ಹುದ್ದೆಯಾಗಿದ್ದು, ಕಕ್ಷಿದಾರರ ಜತೆ ಸಾಮರಸ್ಯ ಕಾಪಾಡುವುದರ ಜತೆಗೆ ಅವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ನಿರ್ವಹಿಸಿಬೇಕಿದೆ. ಈ ಆಶ್ರಮದಲ್ಲಿ ವಾಸಿಸುವ ನಿವಾಸಿಗಳಿಗೆ ವೃದ್ಧಾಪ ವೇತನ ಸೇರಿದಂತೆ ಸರ್ಕಾರದ ಯೋಜನೆಯ ಸೌಲ ಭ್ಯಗಳ ಕುರಿತು ತಹಸೀಲ್ದಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದರು.
ಆಶ್ರಮದ ವ್ಯವಸ್ಥಾಪಕ ಜಾನ್ ವರ್ಗೀಸ್ ಮಾತನಾಡಿ, ಆಶ್ರಮದ ನಿವಾಸಿಗಳಿಗೆ ಇದುವರೆಗೂ ಆಧಾರ ಕಾರ್ಡ ಲಭ್ಯವಾಗಿಲ್ಲದಿರುವುದು ವೃಧ್ಯಾಪ್ಯ ವೇತನ ಸಿಗುತ್ತಿಲ್ಲ. ಈ ಕುರಿತು ಗಮನ ಹರಿಸುವಂತೆ ವಿನಂತಿಸಿದರು.
ನೋಟರಿ ಸಂಘಗಳ ಜಿಲ್ಲಾಧ್ಯಕ್ಷ ನಾಗಾನಂದ ಬಂಟ ಮಾತನಾಡಿದರು. ವಕೀಲರಾದ ಉಮೇಶ ಎನ್. ನಾಯ್ಕ, ಸುರೇಶ ಬಾನವಳಿಕರ ನಿರ್ವಹಿಸಿದರು. ಮಮತಾ ಕೆರೆಮನೆ, ಸಿಬ್ಬಂದಿ ಪ್ರಮೋದ, ಆಶ್ರಮದ ಮೇಲ್ವಿಚಾರಕ ಥಾಮಸ್ ಜಾನ್ ಉಪಸ್ಥಿತರಿದ್ದರು.