ಡೈಲಿ ವಾರ್ತೆ: 16/DEC/2023
– ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ, ಕುಂದಾಪುರ
ಇಂದು ಕೈಲ್ಕೆರೆ ಶಾಲಾ ವಾರ್ಷಿಕೋತ್ಸವ…..!’ ವೇದಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅನಾವರಣ….!” ನೃತ್ಯ ನಾಟಕ ಮತ್ತು ವೈವಿಧ್ಯಮಯ ಸಂಭ್ರಮಕ್ಕೆ ಕಿರಿಯ ಪ್ರಾಥಮಿಕ ಶಾಲೆ ಸಾಕ್ಷಿ….!’
ಸುದ್ದಿ :ಮೊಳಹಳ್ಳಿ: ಸಂಭ್ರಮದ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಇಂದು ಕೈಲ್ಕೆರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಿಶೇಷವಾಗಿ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಬೆಳಗ್ಗೆ ಧ್ವಜಾರೋಹಣ ಕಾರ್ಯಕ್ರಮ ಮತ್ತು ಸಂಜೆ ವೇದಿಕೆ ಕಾರ್ಯಕ್ರಮ ಮತ್ತು ಶಾಲಾ ಹಳೆ ವಿದ್ಯಾರ್ಥಿಗಳಿಂದ ವಿವಿಧ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನಾಟಕೋತ್ಸವ ನಡೆಯಲಿದೆ. ಗ್ರಾಮ ಪಂಚಾಯತ್ ಅಧ್ಯಕ್ಷರು ಸೇರಿದಂತೆ,ಗ್ರಾಮದ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.
ಭಾಗದಲ್ಲಿ ಸ್ವಚ್ಛಂದ ಪರಿಸರದಲ್ಲಿ ಕರಾವಳಿಯ ಸಂಸ್ಕೃತಿಯನ್ನೇ ಬಿಂಬಿಸುವಂತಹ ಗ್ರಾಮೀಣ ಭಾಗದ ಸುಂದರ ಶಾಲೆಯದು, ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಸಮಾಜದಲ್ಲಿ ಅತ್ಯುನ್ನತ ಪ್ರಜೆಗಳಾಗಿ ಮಾಡಿದ ಶೈಕ್ಷಣಿಕ ವಿದ್ಯಾ ಕಾಶಿ…!” ಪ್ರಕೃತಿಯ ಮಧ್ಯೆ ತನ್ನದೇ ಆದಂತಹ ವೈಶಿಷ್ಟ್ಯವನ್ನ ಸಾರುತ್ತ ಬದುಕು ಮತ್ತು ಭವಿಷ್ಯದ ನಡುವಿನ ಶೈಕ್ಷಣಿಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಅದಲ್ಲದೆ ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ ಕೈಹಿಡಿದು ಮುನ್ನಡೆಸಿದ ಅಕ್ಷರವನ್ನು ಕಲಿಸಿದೆ ಬದುಕಿನ ದಾರಿಯನ್ನ ಮತ್ತೆ ನೆನಪಿಸುವಂತೆ ಮಾಡಿದೆ ಇದೀಗ ನಾವೆಲ್ಲ ಕಲಿತ ಶಾಲೆಗೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಮಧುವಣಗಿತ್ತಿಯಂತೆ ಸಿಂಗಾರಗೊಂಡು, ಅದ್ದೂರಿ ಕಾರ್ಯಕ್ರಮಕ್ಕೆ ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉತ್ಸವಕ್ಕೆ ಅದ್ದೂರಿ ಸಿದ್ದತೆ ನಡೆಯುತ್ತಿದೆ.
“ಸುಂದರ ಪ್ರಕೃತಿಯ ಮಧ್ಯೆ ಶೈಕ್ಷಣಿಕ ಹಾದಿಯನ್ನ ಮುನ್ನಡೆಸುತ್ತಿರುವ ಸರ್ಕಾರಿ ಶಿಕ್ಷಣ ಸಂಸ್ಥೆ ಅದು. ಕರಾವಳಿಯ ಕಡಲತಡಿಯ ಶೈಕ್ಷಣಿಕ ಬೋಧನೆಯ ಕೇಂದ್ರ ಸ್ಥಾನ, ಗ್ರಾಮೀಣ ಭಾಗದ ನೂರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡಿದ ಮೂಲಸ್ಥಾನ…, ಶೈಕ್ಷಣಿಕ ತಳಹದಿಯ ಗ್ರಾಮೀಣ ಭಾಗದಲ್ಲಿ ತನ್ನನ್ನ ಪುಟ್ಟ ಶಾಲೆ ಎಂದು ಕರೆದರು. ನನಗೆ ಜಾಗವಿಲ್ಲದಂತಹ ಅಂದಿನ ಪರಿಸ್ಥಿತಿಯಲ್ಲಿ ನಾನು ಎಲ್ಲೋ ಹುಟ್ಟಿ ಎಲ್ಲೋ ನೆಲೆಯದೆ. ಆದರೆ ನನಗಿರುವಂತಹ ಆತ್ಮಸ್ಥೈರ್ಯ, ಬೇರೆ ಯಾವ ಸರಕಾರಿ ಇಲಾಖೆಗೂ ಇರಲಾರದು ಅಂದುಕೊಂಡಿದ್ದೇನೆ. ಆದರೂ ನನ್ನ ಹುಟ್ಟು, ನನ್ನ ಜೀವನ, ಇವೆಲ್ಲವೂ ಕಲ್ಪಿತವಾಗಿರುವುದು ನನ್ನ ಅಸಂಖ್ಯಾತ ಶಿಕ್ಷಣ ಅಭಿಮಾನಿಗಳು… ಗ್ರಾಮೀಣ ಭಾಗದಲ್ಲಿ ಹುಟ್ಟಿ, ಗ್ರಾಮೀಣ ಜನರ ಬುದ್ಧಿವಂತಿಕೆಯ ಮಟ್ಟವನ್ನ ನಾನು ದೂರಿಂದಲೇ ಪರೀಕ್ಷಿಸುತ್ತಾ, ಅವರಿಗೆ ಉತ್ತಮವಾದ ಬೋಧನೆಯ ಶಿಕ್ಷಣವನ್ನ ನೀಡುವುದು ನನ್ನ ಆಧ್ಯ ಕರ್ತವ್ಯವಾಗಿತ್ತು. ತೊದಲು ನುಡಿಯ ಕಂದಮ್ಮಗಳಿಗೆ ಶಿಕ್ಷಣವನ್ನು ಕೊಟ್ಟೆ, ಸಂಸ್ಕೃತಿಯನ್ನ ಕೊಟ್ಟೆ, ಆಚಾರ ವಿಚಾರಗಳನ್ನು ಕೊಟ್ಟೆ, ಆದರೆ ಏನು ಮಾಡೋಣ, ಆರ್ಥಿಕ ಪರಿಸ್ಥಿತಿ ನಲುಗಿ ಹೋದಾಗ, ಬಡತನವೇ ಈ ಗ್ರಾಮದಲ್ಲಿ ಆವರಿಸಿದಾಗ ದೈವ ದೇವರುಗಳ ದೃಷ್ಟಿಯಿಂದ, ಊರಿನವರ ಹಾಗೂ ಗಣ್ಯ ವ್ಯಕ್ತಿಗಳ ಸಹಕಾರದಿಂದ ನನ್ನನ್ನು ಬೆಳೆಸಿ, ಪೋಷಿಸಿ, ನನಗೊಂದು ಇರಲು ನೆಲೆ ಮಾಡಿಕೊಟ್ಟರು. ನೆಲೆ ಮಾಡಿ ನನಗೊಂದು ಅರ್ಥಗರ್ಭಿತವಾದ ಸ್ಥಾನ ಕೊಟ್ಟು, ನನಗೆ ಉ. ಜಿ. ಪಂ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೈಲ್ಕೆರೆ ಎಂದು ನಾಮಕರಣ ಮಾಡಿದರು. ಅಲ್ಲಿಂದ ನನ್ನ ಹುಟ್ಟಿನ ಜೀವನ ಪ್ರಾರಂಭವಾಯಿತು. ನನಗೆ ಇನ್ನೊಂದು ಅಡ್ಡ ಹೆಸರು ಅಥವಾ ಮೂಲ ಹೆಸರು ಎಂದರೆ ಮಾವಿನ ಕಟ್ಟೆ. ನನ್ನ ಹುಟ್ಟು ಹೆಸರು ಮಾವಿನಕಟ್ಟೆಯಾದರೂ ನನ್ನ ಮೂಲ ಹೆಸರು ಕೈಲ್ಕೆರೆ ಎನ್ನುವುದೇ ಸಂತಸ. ಕೈಲ್ ಕೆರೆ ದಕ್ಷಿಣ ಭಾಗಕ್ಕೆ ಹೊಂದಿಕೊಂಡಿರುವ ಕೈಲ್ಕೆರೆ ಉಪ ಗ್ರಾಮದ “ಕೆಂಚಮ್ಮ ದೇಗುಲ” ಮತ್ತು ಮೊಳಹಳ್ಳಿ ಗ್ರಾಮದ ಮೊಳಹಳ್ಳಿ ಶಿವರಾಯ, ಬಂಟ ಈ ಕ್ಷೇತ್ರದ ಮಹಿಮೆಯಿಂದಲೇ ಗ್ರಾಮದ ಉನ್ನತೀಕರಣಕ್ಕೆ ಸಾಕ್ಷಿಯಾಗಿದೆ ಸಂಭ್ರಮದ ವಾತಾವರಣ…!”
ಹೌದು ವಿದ್ಯಾಭಿಮಾನಿಗಳೇ, ಇಂದು ನಾವು ಸಂಭ್ರಮದಿಂದ ವರದಿ ಮಾಡಲು ಹೊರಟಿರುವ ವಿಚಾರ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ” ಕೈಲ್ಕೆರೆ”ಯ ಇತಿಹಾಸದ ತಳಹದಿ. ಏಕೆಂದರೆ, ಶಾಲೆಯ ಹುಟ್ಟು, ಬೆಳವಣಿಗೆ ಆರ್ಥಿಕತೆ, ವಿದ್ಯಾಭ್ಯಾಸ, ಇವೆಲ್ಲವೂ ನಮ್ಮ ಜೊತೆಗಿನ ಅವಿನಾಭಾವ ಸಂಬಂಧವನ್ನ ಬೆಸೆದು ಹೋಗುತ್ತದೆ.
ಇಲ್ಲಿನ ಗ್ರಾಮೀಣ ಜನರ ಬೆಳೆ ಭತ್ತ ,ತೆಂಗು ,ಅಡಿಕೆ, ತರಕಾರಿ ಸಸ್ಯಗಳು ನಾವು ಬೆಳೆಯುವ ಪ್ರಮುಖ ಬೆಳೆಗಳಲ್ಲಿ ಇವುಗಳು ಅಗ್ರಪಂತಿಯಲ್ಲಿರುತ್ತವೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಬಹು ದೊಡ್ಡ ಗ್ರಾಮ ಎಂದು ಹೆಗ್ಗಳಿಕೆಗೆ ಪಾತ್ರವಾದ ಮತ್ತು ಸುವರ್ಣ ಗ್ರಾಮೋದಯ ಎನ್ನುವ ಬಿರುದಾಂಕಿತ, ಸಹಕಾರಿ ಸಂಘದ ಪಿತಾಮಹ ಮೊಳಹಳ್ಳಿ ಶಿವರಾವ್ ಅವರ ಹುಟ್ಟೂರು ಹುಟ್ಟೂರಾಗಿರುವ ಮೊಳಹಳ್ಳಿ ಗ್ರಾಮದ ನಾಲ್ಕನೇ ವಾರ್ಡ್ ನಲ್ಲಿರುವ ಉಡುಪಿ ಜಿಲ್ಲಾ ಪಂಚಾಯತ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೈಲ್ಕೆರೆ, ಕುಂದಾಪುರ ತಾಲೂಕು, ಈ ಶಾಲೆಯ ಸಂಭ್ರಮದ ವಾರ್ಷಿಕೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಡಿ. 16 ರಂದು ಶನಿವಾರ ಕೈಲ್ಕೆರೆ ಶಾಲೆಯಲ್ಲಿ ಸಂಭ್ರಮದ ವಾರ್ಷಿಕೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ದೊರೆಯಲಿದೆ.
ಕೈಲ್ಕೆರೆ ಶಾಲೆಯ ಇತಿಹಾಸ:-
ಹಳ್ಳಿಗಾಡಿನ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಪರಿಸ್ಥಿತಿ ನಲುಗಿ ಹೋದಂತಹ ಸಂದರ್ಭದಲ್ಲಿಯೇ, ಊರ ಮಕ್ಕಳ ಅನುಕೂಲಕ್ಕಾಗಿ, ಕೈಲ್ಕೆರೆ ಯ ರೈಸ್ ಮಿಲ್ಲಿನ ಸಣ್ಣ ಕಟ್ಟಡ ಒಂದರಲ್ಲಿ 10/09/1953 ರಲ್ಲಿ ಕೃತಕ ಶಾಲೆಯನ್ನು ಆರಂಭಿಸಲಾಯಿತು. ತದನಂತರದಲ್ಲಿ ಶಿಕ್ಷಣ ಪ್ರೇಮಿಗಳಾದ ದಿ. ಶಿವರಾಮ ಹೆಗಡೆಯವರ ಮುತುವರ್ಜಿಯೊಂದಿಗೆ,1956 ರಲ್ಲಿ ಮೊದಲು ಸಣ್ಣ ಕಟ್ಟಡದಲ್ಲಿ ಶಾಲೆ ಪ್ರಾರಂಭವಾಯಿತು. ತದನಂತರದಲ್ಲಿ,ಅವರ ಅಧೀನದಲ್ಲಿರುವ ಸ್ವಂತ ಜಾಗದಲ್ಲಿ ಶಾಲೆಯನ್ನ ಕಟ್ಟಲು ದೇಣಿಗೆಯಾಗಿ ಶಾಲೆಗೆ ನೀಡಿದರು. ಅಷ್ಟರಲ್ಲಿ,ಸರ್ಕಾರದ ಅನುಮತಿಯೊಂದಿಗೆ ಉಡುಪಿ ಜಿಲ್ಲಾ ಪಂಚಾಯತ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೈಲ್ಕೆರೆ ಎಂದು ನಾಮಕರಣ ಗೊಂಡಿತ್ತು. ಕೈಲ್ಕೆರೆ ಶಾಲೆಯ ಪ್ರಾರಂಭದ ದಿನದಲ್ಲಿ ಮೊದಲು ಹಳ್ನಾಡು ಸಂಜೀವ್ ಶೆಟ್ಟಿ ಎನ್ನುವರು ಮುಖ್ಯೋಪಾದ್ಯರಾಗಿ ನೇಮಕ ಆದರು. ಏಕೋಪಾಧ್ಯಾಯ ಶಿಕ್ಷಕರಾಗಿ ಕಾರ್ಯನಿರ್ವಹಿಸುವ ಹಂತದಲ್ಲಿ 100 ಮಕ್ಕಳಿಗೆ ಪ್ರತಿಷ್ಠಿತವಾಗಿ ವಿದ್ಯಾಭ್ಯಾಸವನ್ನು ಕಲಿಸಿದ್ದರು. ಶ್ರೀ ಮಹಾಲಿಂಗ ಮತ್ತು ಚಿತ್ತೆಗಾರ ಶಿಕ್ಷಕರು ಈ ಶಾಲೆಯಲ್ಲಿ ಸೇವೆ ಸಲ್ಲಿಸಿ, ಇನ್ನಷ್ಟು ಪ್ರಾಬಲ್ಯತೆ ಮತ್ತು ಶಿಕ್ಷಣದ ಹಂಬಲವನ್ನ ತುಂಬಿದರು. ಸಂಜೀವ ಶೆಟ್ಟಿ ಅವರ ವರ್ಗಾವಣೆಯ ನಂತರ ಮುಖ್ಯೋಪಾಧ್ಯಾಯರಾಗಿ ರತ್ನಾಕರ್ ಶೆಟ್ಟಿ ಅವರು ಈ ಶಾಲೆಗೆ ಬಂದ ನಂತರ, ವಿಶಿಷ್ಟ ರೀತಿಯಲ್ಲಿ ಬೋಧನಾ ಕ್ರಮ, ಮಕ್ಕಳಲ್ಲಿನ ಕೌಶಲ್ಯ, ಶಿಸ್ತುಬದ್ಧ ಶೈಕ್ಷಣಿಕ ತಳಹದಿ, ಶಾಲೆಯ ಸುಂದರ ಬೋಧನಾ ಕ್ರಮ, ಇವೆಲ್ಲವನ್ನ ಕಲ್ಪಿಸುವಲ್ಲಿ ವಿಶಿಷ್ಟ ಪರಿಕಲ್ಪನೆ ವಾರ್ಷಿಕೋತ್ಸವ ನಡೆಯಲು ಸಂಭ್ರಮ ಮನೆ ಮಾಡಿದೆ.