
ಡೈಲಿ ವಾರ್ತೆ: 20/NOV/2025
ಶಬರಿಮಲೆ ಮಾಲೆ ಹಾಕಿದ್ದಕ್ಕೆ ವಿದ್ಯಾರ್ಥಿಯನ್ನ ಶಾಲೆಯಿಂದ ಹೊರಹಾಕಿದ ಪ್ರಿನ್ಸಿಪಾಲ್

ಚಿಕ್ಕಮಗಳೂರು: ಶಬರಿಮಲೆ ಮಾಲೆ ಧರಿಸಿದ್ದಕ್ಕೆ ವಿದ್ಯಾರ್ಥಿಯೋರ್ವನನ್ನ ಪ್ರಿನ್ಸಿಪಾಲ್ ಕಾಲೇಜಿನಿಂದ ಹೊರಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕು ಬಾಳೆಹೊನ್ನೂರಿನ ಕಡ್ಲೆಮಕ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿ ಇದೇ ಮೊದಲ ಬಾರಿಗೆ ಶಬರಿಮಲೆ ಮಾಲೆ ಧರಿಸಿ ಕಾಲೇಜಿಗೆ ಹೋಗಿದ್ದ.
ಕಾಲೇಜು ಆಡಳಿತ ಮಂಡಳಿ ಮಾಲೆ ತೆಗೆದು ಒಳಗೆ ಬಾ, ಇಲ್ಲ ಬೇಡ ಎಂದು ಆತನನ್ನ ಕಾಲೇಜಿನಿಂದ ಹೊರಹಾಕಿದೆ. ಮಾಲೆ-ವಸ್ತ್ರ-ಸರ ಎಲ್ಲಾ ತೆಗೆದು ಒಳಗೆ ಬಾ ಎಂದು ಆಗ್ರಹಿಸಿದ್ದಾರೆ.
ಹೀಗೆ ಮಾಲೆ ಧರಿಸಿ ಬರುವುದರಿಂದ ಕಾಲೇಜಿನಲ್ಲಿ ಜಾತಿ-ಭೇದ ಮಾಡ್ತೀರಾ ಎಂದು ಮಾಲೆ ತೆಗೆದು ಬರುವಂತೆ ತಾಕೀತು ಮಾಡಿ, ಎಲ್ಲಾ ಬಿಚ್ಚಿ ಬ್ಯಾಗಿನಲ್ಲಿಟ್ಟು ಒಳಗೆ ಬಾ ಎಂದು ಕಾಲೇಜಿನ ಕ್ಯಾಂಪಸ್‌ನಿಂದ ಹೊರಕಳಿಸಿದ್ದಾರೆ.
ಮಾಲೆ ತೆಗಿ ಎಂದಾಗ ಮಾಲಾಧಾರಿ ನಾನು ತೆಗೆಯುವುದಿಲ್ಲ ಎಂದು ಹೇಳಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಹೋದ ಹಿರಿಯ ಮಾಲಾಧಾರಿಗಳು ಹಾಗೂ ಪೊಲೀಸರು ಕಾಲೇಜು ಆಡಳಿತ ಮಂಡಳಿಯ ಮನವೊಲಿಕೆ ಮಾಡಿ ಪುನಃ ವಿದ್ಯಾರ್ಥಿಯನ್ನ ಕಾಲೇಜಿಗೆ ಕಳಿಸಿದ್ದಾರೆ. ಪೊಲೀಸರು ಹಾಗೂ ಮಾಲಾಧಾರಿಗಳು ಹೋದ ಮೇಲೆ ಕಾಲೇಜು ಆಡಳಿತ ಮಂಡಳಿ ಕೂಡ ಸುಮ್ಮನಾಗಿ, ವಸ್ತ್ರವನ್ನ ಸೊಂಟಕ್ಕೆ ಕಟ್ಟಿಕೊಳ್ಳುವಂತೆ ಸೂಚಿಸಿದೆ. ಕಾಲೇಜಿನ ಪ್ರಿನ್ಸಿಪಾಲ್ ಜಾತಿ-ಧರ್ಮವನ್ನ ಬಿಂಬಿಸುವಂತೆ ಕಾಲೇಜಿಗೆ ಬರುವಂತಿಲ್ಲ.
ಈ ಬಗ್ಗೆ ಸರ್ಕಾರದಿಂದ ಸರ್ಕ್ಯೂಲರ್ ಕೂಡ ಇದೆ ಎಂದಿದ್ದಾರೆ. ಆದರೆ, ಮಾಲಾಧಾರಿ ಗುರುಸ್ವಾಮಿ, ಪೊಲೀಸರು ಹೋದ ಬಳಿಕ ಪರಿಸ್ಥಿತಿ ಶಾಂತವಾಗಿದೆ.