ಡೈಲಿ ವಾರ್ತೆ: 20/NOV/2025

ಮಣೂರು ಮಹಾಲಿಂಗೇಶ್ವರ ವೈಭವದ ದೀಪೋತ್ಸವ ಸಂಪನ್ನ

ಕೋಟ: ಇಲ್ಲಿನ ಮಣೂರು ಹೇರಂಬ ಶ್ರೀ ಮಹಾಗಣಪತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ಬುಧವಾರ ಸಂಪನ್ನಗೊಂಡಿತು.
ದೀಪೋತ್ಸವದ ಅಂಗವಾಗಿ ರಂಗಪೂಜೆ, ಅಗಲು ರಂಗಪೂಜೆ, ಶ್ರೀರಾಮ ಮಹಿಳಾ ಭಜನಾ ತಂಡ, ಶ್ರೀಮಹಾಲಿಂಗೇಶ್ವರ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ಜರಗಿತು.ಭಕ್ತ ಸಮೂಹ
ದೇಗುಲದ ಸುತ್ತ ಹಣತೆಗಳನಿಟ್ಟು ದೀಪ ಪ್ರಜ್ವಲಿಸಿ ಧಾರ್ಮಿಕ ಕೈಂಕರ್ಯದಲ್ಲಿ ಭಾಗಿಯಾದರು.

ದೇಗುಲದ ಮುಕಾಂಬಿಕಾ ಪುಷ್ಕರಣ ಯಲ್ಲಿ ತೆಪೋತ್ಸವ,ಪನ್ಯಾರ ಸೇವೆ ವಿರತಣೆ , ಸಿಡಿಮದ್ದು ಪ್ರದರ್ಶನ ನಡೆಯಿತು.
ಈ ಸಂದರ್ಭ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ದೇಗುಲದ ಅರ್ಚಕ ರವಿ ಐತಾಳ್ ನೇತೃತ್ವದಲ್ಲಿ ನೆರವೇರಿತು.

ದೇಗುಲದ ಅಧ್ಯಕ್ಷ ಸತೀಶ್ ಎಚ್. ಕುಂದರ್, ಪ್ರಮುಖರಾದ ರಾಧಾಕೃಷ್ಣ ಉರಾಳ್, ಅಶೋಕ್ ಶೆಟ್ಟಿ ಕೊಳ್ಳೂರು, ಎಂ.ದಿವ್ಯಾ ಪ್ರಭು, ಸುಫಲ ಶೆಟ್ಟಿ , ದಿನೇಶ್ ಆಚಾರ್, ಅಚ್ಯುತ ಹಂದೆ, ಕೃಷ್ಣ ದೇವಾಡಿಗ, ಚಂದ್ರ ಹರ್ತಟ್ಟು, ಹಾಗೂ ಜೀರ್ಣೋದ್ಧಾರ ಸಮಿತಿಯ ಅರುಣಾಚಲ ಮಯ್ಯ,
ಎಂ.ಎನ್ ಮಧ್ಯಸ್ಥ, ರಾಜೇಂದ್ರ ಉರಾಳ, ಶಿವರಾಮ್ ಶೆಟ್ಟಿ ವಿಷ್ಣುಮೂರ್ತಿ ಮಯ್ಯ, ಗೋಪಾಲ್ ಪೈ, ಮಹೇಶ್ ಹೊಳ್ಳ ಭಾರತಿ ವಿ. ಮಯ್ಯ, ಚಂದ್ರಿಕಾ ಭಟ್,ನಾಗರಾಜ್ ,ಜಯರಾಮ ಆಚಾರ್,ಗೋಪಾಲಕೃಷ್ಣ ಮಯ್ಯ,ನರಸಿಂಹ ತಿಂಗಳಾಯ,ಗಿರೀಶ ದೇವಾಡಿಗ ಸೇರಿದಂತೆ ಅನೇಕ ಗಣ್ಯರು ಭಾಗಿಯಾದರು.