ಡೈಲಿ ವಾರ್ತೆ: 17/DEC/2023
ವಿಟ್ಲ ಕೇಂದ್ರ ಜುಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಅಶ್ರಫ್ ಮುಹಮ್ಮದ್ ಪೊನ್ನೋಟು
ಬಂಟ್ವಾಳ : ವಿಟ್ಲ ಕೇಂದ್ರ ಜುಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಅಶ್ರಫ್ ಮುಹಮ್ಮದ್ ಪೊನ್ನೋಟು
ಆಯ್ಕೆಯಾಗಿದ್ದಾರೆ.
ಇಬ್ರಾಹಿಂ ಮೇಗಿನಪೇಟೆ ಇವರ ಅಧ್ಯಕ್ಷತೆಯಲ್ಲಿ ನಡೆದ ವಿಟ್ಲ ಕೇಂದ್ರ ಜುಮಾ ಮಸೀದಿಯ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ವಿ.ಎಸ್.ಇಬ್ರಾಹಿಂ ಹಾಗೂ ಮಹಮ್ಮದ್ ಗಮಿ, ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಶಾಫಿ, ಕಾರ್ಯದರ್ಶಿಯಾಗಿ ಅಬೂಬಕರ್ ಅನಿಲಕಟ್ಟೆ, ಕೋಶಾಧಿಕಾರಿಯಾಗಿ ಶರೀಫ್ ಪೊನ್ನೋಟು, ಲೆಕ್ಕ
ಪರಿಶೋಧಕರಾಗಿ ಇಕ್ಬಾಲ್ ಶೀತಲ್ ಹಾಗೂ ಹಮೀದ್ ಬದ್ರಿಯಾ ಇವರನ್ನು ಸರ್ವಾನುಮತದಿಂದ ಆಯ್ಕೆಯಾದರು.
17 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಯಿತು.