ಡೈಲಿ ವಾರ್ತೆ: 24/DEC/2023

ವಿನ್ ಲೈಟ್ ಸ್ಪೋಟ್ಸ್ ಕ್ಲಬ್ ಪಾರಂಪಳ್ಳಿ ಪಡುಕರೆ ವತಿಯಿಂದ ಗೌರವ ಸನ್ಮಾನ, ಅಶಕ್ತರಿಗೆ ಸಹಾಯ ಹಾಗೂ ಯಕ್ಷಗಾನ ಕಾರ್ಯಕ್ರಮ

ಕೋಟ: ವಿನ್ ಲೈಟ್ ಸ್ಪೋಟ್ಸ್ ಕ್ಲಬ್ ಪಾರಂಪಳ್ಳಿ ಪಡುಕರೆ ಇದರ ವತಿಯಿಂದ ನಾಲ್ಕನೇ ಬಾರಿಗೆ ಅಶಕ್ತರ ಸಹಾಯಕ್ಕಾಗಿ ಗೌರವ ಸನ್ಮಾನ ಮತ್ತು ಯಕ್ಷಗಾನ ಕಾರ್ಯಕ್ರಮವು ಡಿ. 23 ರಂದು ಶನಿವಾರ ಪಾರಂಪಳ್ಳಿ ಗುಡ್ಡಿಶಾಲಾ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವು ವಿನ್ ಲೈಟ್ ಸ್ಪೋಟ್ಸ್ ಕ್ಲಬ್ ಪಾರಂಪಳ್ಳಿ ಪಡುಕರೆ ಇದರ ಅಧ್ಯಕ್ಷ ಗಿರೀಶ್ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಬೆಂಗಳೂರು ಶೇಖರ ಆಸ್ಪತ್ರೆಯ ಖ್ಯಾತ ಮೂಳೆ ಎಲುಬು ಮತ್ತು ಕೀಲು ತಜ್ಞರಾದ ಡಾ. ವಿಷ್ಣುಮೂರ್ತಿ ಐತಾಳ್, ಮಂಗಳೂರು ಕೆಎಂಸಿ ಆಸ್ಪತ್ರೆಯ ಡಾ. ಮಧುಸೂದನ್ ಉಪಾಧ್ಯ, ಖ್ಯಾತ ಈಜುಪಟು ಗೋಪಾಲ್ ಖಾರ್ವಿ ಇವರನ್ನು ನಿವೃತ್ತ ಅಧ್ಯಾಪಕ ಶ್ರೀಧರ್ ಉಪಾಧ್ಯರವರು ಸನ್ಮಾನಿಸಿದರು. ಅಲ್ಲದೆ ನಾಲ್ಕು ಜನ ಅಶಕ್ತರಿಗೆ ತಲಾ 25 ಸಾವಿರ ರೂ. ಅಂತೆ ಒಟ್ಟು 1 ಲಕ್ಷ ರೂ. ಸಹಾಯಧನ ನೀಡಲಾಯಿತು.
ಹಾಗೂ ಎಸ್ಎಸ್ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇ. 97 ಅಂಕ ಗಳಿಸಿದ ಶ್ರವಣ್ ಉಪಾಧ್ಯರನ್ನು ಪುರಸ್ಕರಿಸಲಾಯಿತು.
ನಂತರ ಲಕ್ಕಿಡೀಪ್ ಡ್ರಾ. ಗೊಳಿಸಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯೆ ಶ್ರೀಮತಿ ರೇಖಾ ಕೇಶವ ಕರ್ಕೆರ, ಕೋಟ ಸಿಎ ಬ್ಯಾಂಕ್ ನಿರ್ದೇಶಕ ರಾಜೇಶ್ ಉಪಾಧ್ಯ, ಬಾ.ಹಿ. ಪ್ರಾ. ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಪ್ರವೀಣ್ ಉಪಾಧ್ಯ ವಿ. ಲೈ. ಸ್ಪೋ. ಕ್ಲಬ್ ಕಾರ್ಯದರ್ಶಿ ಸುಧಾಕರ್ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮಂಜುನಾಥ್ ಗುಂಡ್ಮಿ ನಿರೂಪಿಸಿ ವಂದಿಸಿದರು.


ನಂತರ ಶ್ರೀ ಪೆರ್ಡೂರು ಮೇಳದವರಿಂದ “ಗಂಗೆ ತುಂಗೆ ಕಾವೇರಿ” ಎಂಬ ಯಕ್ಷಗಾನ ನಡೆಯಿತು.