
ಡೈಲಿ ವಾರ್ತೆ: ಫೆ./02/2026
ಕೋಟ ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರವೃಂದ ಸುವರ್ಣ ಮಹೋತ್ಸವ ಸಮಾರೋಪ, ಸನ್ಮಾನ ಕಾರ್ಯಕ್ರಮ

ಕೋಟ: ಇಲ್ಲಿನ ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ ಇದರ ವಾರ್ಷಿಕ ಜಾತ್ರೋತ್ಸವದ ಹಿನ್ನಲ್ಲೆಯಲ್ಲಿ ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರವೃಂದ ಕೋಟ ಸುವರ್ಣ ಮಹೋತ್ಸವದ ಅಂಗವಾಗಿ ಏಳು ದಿನಗಳ ಕಾಲ ಹಮ್ಮಿಕೊಂಡ ಸಾಂಸ್ಕೃತಿಕ ಹಾಗೂ ಸನ್ಮಾನ ಕಾರ್ಯಕ್ರಮ ಸಮಾರೋಪಗೊಂಡಿತು.
ಈ ದಿಸೆಯಲ್ಲಿ ಭಾನುವಾರದ ಪೆರ್ಡೂರು ಮೇಳದ ಬಯಲಾಟದ ವೇದಿಕೆಯಲ್ಲಿ ಸುವರ್ಣ ಮಹೋತ್ಸವಕ್ಕೆ ಸಹಕರಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರವೃಂದದ ಅಧ್ಯಕ್ಷ ರಾಜು ದೇವಾಡಿಗ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್,ಕೋಟದ ರಾಜಶೇಖರ ದೇಗುಲದ ಅಧ್ಯಕ್ಷ ಜಿ.ಪ್ರಭಾಕರ್ ಅಡಿಗ,ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಸದಸ್ಯರಾದ ಕೆ.ಅನಂತಪದ್ಮನಾಭ ಐತಾಳ್,ಕೋಟ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ.ಶೆಟ್ಟಿ, ಉದ್ಯಮಿಗಳಾದ ವಿಠ್ಠಲ್ ಪೂಜಾರಿ ರಜತಾದ್ರಿ,ಉಮೇಶ್ ಪೂಜಾರಿ,ರಮೇಶ್ ಫ್ರಭು,ಮಿತ್ರವೃಂದದ ಕಾರ್ಯದರ್ಶಿ ಜಿ.ಎಸ್ ಆನಂದ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಸಾದ್ ಬಿಲ್ಲವ ನಿರೂಪಿಸಿದರೆ ,ಚಂದ್ರ ಪೂಜಾರಿ ಸ್ವಾಗತಿಸಿದರು. ಚಂದ್ರ ಆಚಾರ್ ವಂದಿಸಿದರು.
ನಂತರ ಪೆರ್ಡೂರು ಮೇಳದ ಕಲಾವಿದರಿಂದ ಯಕ್ಷಗಾನ ಚದುರಂಗ ಪ್ರಸಂಗ ಪ್ರದರ್ಶನಗೊಂಡಿತು.