



ಡೈಲಿ ವಾರ್ತೆ: 25/DEC/2023




ಮಣೂರು ಪಡುಕರೆಯಲ್ಲಿ ಮಾರ್ನಿಂಗ್ ಕ್ರಿಕೆಟ್ರಸ್ ಅವರಿಂದ ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮ
ಕೋಟ: ಪಡುಕರೆ ಮಣೂರುನಲ್ಲಿ ಧರ್ಮ ರತ್ನಾಕರ ಆನಂದ್ ಸಿ ಕುಂದರ್ ರವರ ಮಾರ್ಗದರ್ಶನದಲ್ಲಿ ಪ್ರಶಾಂತ್ ಪಡುಕರೆ ಇವರ ಮುಂದಾಳತ್ವದಲ್ಲಿ
ಮಾರ್ನಿಂಗ್ ಕ್ರಿಕೆಟರ್ಸ್ ತಂಡದಿಂದ ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮ ನಡೆಯಿತು.
ಮಾರ್ನಿಂಗ್ ಕ್ರಿಕೆಟರ್ಸ್ ತಂಡದವರು ಆನಂದ್ ಸಿ ಕುಂದರ್ ಅವರು ಹೇಳಿದ ಮಾತಿಗೆ ಬೆಲೆ ಕೊಟ್ಟು ಬೆಳಿಗ್ಗೆ ಕ್ರಿಕೆಟ್ ಆಡಿ ನಂತರ ತಾವು ಆಡುವ ಗ್ರೌಂಡ್ ನ ಸುತ್ತಲೂ ಪ್ಲಾಸ್ಟಿಕ್ ವಸ್ತುಗಳನ್ನು ಎತ್ತುವ ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮವನ್ನು ಹಮ್ಮಿಕೊಂಡರು.
ಈ ಸಂದರ್ಭದಲ್ಲಿ ಪ್ರಶಾಂತ್ ಪಡುಕರೆ, ಅಧ್ಯಕ್ಷ ಉದಯ ಪಡುಕರೆ ಹಾಗೂ ಕ್ರಿಕೆಟ್ ಸದ್ಯಸರು ಸಹಕರಿಸಿದರು.

