ಡೈಲಿ ವಾರ್ತೆ: 29/DEC/2023

ವರದಿ: ವಿದ್ಯಾಧರ ಮೊರಬಾ

ಬೇಲೇಕೇರಿಯಲ್ಲಿ ಮಹಿಳೆಯೊಬ್ಬಳ ಕೈಹಿಡಿದು ಅವಮಾನಿಸಿದ ವ್ಯಕ್ತಿ ನಾಪತ್ತೆ: ಪ್ರಕರಣ ದಾಖಲು ಆರೋಪಿ ಶೋಧನೆಗೆ ಮುಂದಾದ ಪಿಎಸ್‍ಐ ಸುಹಾಸ್

ಅಂಕೋಲಾ: ತಾಲೂಕಿನ ಬೇಲೇಕೇರಿಯ ನಡೆದ ದತ್ತ ಜಯಂತಿ ದಹಿಕಾಂಲ ಉತ್ಸವ ದಿನ ಮಹಿಳೆಯೊಬ್ಬಳ ಸೀರೆ ಎಳೆದು ಮತ್ತು ಕೈಹಿಡಿದು ಅವಮಾನಿಸಿದ ವ್ಯಕ್ತಿಯೊಬ್ಬನು ಸ್ಥಳದಿಂದ ನಾಪತ್ತೆಯಾದ ಘಟನೆ ಕುರಿತು ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಬುಧವಾರ ರಾತ್ರಿ ಪ್ರಕರಣ ದಾಖಲಾಗಿದೆ.

ಪ್ರಗತಿಪರ ಬೋಟ್ ಯುನಿಯನ್ ಅಧ್ಯಕ್ಷ ಬೇಲೇಕೇರಿಯ ಮಂಜುನಾಥ ಗಣಪತಿ ಬಾನಾವಳಿಕರ (35) ಎಂಬಾತನೇ ಘಟನಾ ಸ್ಥಳದಿಂದ ನಾಪತ್ತೆಯಾದ ವ್ಯಕ್ತಿಯಾಗಿರುತ್ತಾನೆ. ಈತನು ಡಿ.27ರಂದು ಬೇಲೇಕೇರಿ ಯಲ್ಲಿ ನಡೆದ ದತ್ತ ಜಯಂತಿ ದಹಿಕಾಂಲ ಉತ್ಸವದಲ್ಲಿ ಪಕ್ಕದ ಗ್ರಾ. ಪಂ. ವ್ಯಾಪ್ತಿಯ ಮಹಿಳೆಯೊಬ್ಬಳು ಉತ್ಸ ವದ ಕಟ್ಟೆಯ ಹತ್ತಿರ ಶ್ರೀ ದತ್ತಾತ್ರೇಯ ದೇವರಿಗೆ ಹಣ್ಣು ಕಾಯಿ ಮಾಡಿಸಿ ವಾಪಸ್ ಬರುತ್ತಿದ್ದ ಸಂದರ್ಭ ದಲ್ಲಿ ಮಂಜುನಾಥ ಬಾನಾವಳಿಕರ ಆಕೆಯ ಸೀರೆ ಎಳೆದು ಮತ್ತು ಕೈಯಲ್ಲಿರುವ ದೇವರ ಕಾಯಿ ಪ್ರಸಾದ ವನ್ನು ಎಸೆದು ಕೊಂಕಣ ಭಾಷೆಯಲ್ಲಿ ಅವಾಚ್ಯ ಶಬ್ಧಗಳಿಂದ ಬೈದು ಅವಮಾನಿಸಿರುವ ಕುರಿತು ಆಕೆ ನೀಡಿದ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾಳೆ.

ಪಿಎಸ್‍ಐ ಸುಹಾಸ್ ಆರ್., ಅವರು ಮಂಜುನಾಥ ಬಾನಾವಳಿಕರ ವಿರುದ್ದ ಐಪಿಸಿ ಕಲಂ 323,354,504, 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿಲು ಶೋಧನೆ ನಡೆಸುತ್ತಿದ್ದಾರೆ. ಮಂಜುನಾಥ ಬಾನಾವಳಿಕರ ಈತನಿಗೆ ಅಂದಾಜು 12 ವರ್ಷದ ಗಂಡು ಮಗ ಇದ್ದಾನೆ. 10 ವರ್ಷದ ಹಿಂದೆ ಆತನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಪ್ರಕರಣ ಕೂಡ ದಾಖಲಾಗಿತ್ತು ಎನ್ನಲಾಗಿದೆ.