
ಡೈಲಿ ವಾರ್ತೆ: ಫೆ./03/2026
ಕಾರ್ಕಳ| ಹಾಡಿಯಲ್ಲಿ ಇಟ್ಟ ಸ್ಪೋಟಕಕ್ಕೆ ನಾಯಿ ಬಲಿ: ನೀರೆ ಗ್ರಾಮದಲ್ಲಿ ಅಮಾನುಷ ಪ್ರಾಣಿ ಹಿಂಸೆ ಆರೋಪ

ಕಾರ್ಕಳ: ಕಾರ್ಕಳ ತಾಲೂಕು ನೀರೆ ಗ್ರಾಮದ ನಾಟ್ಲ ದರ್ಖಾಸ್ ಮನೆಯ ಸಮೀಪದ ಹಾಡಿಯಲ್ಲಿ ಅಪರಿಚಿತರು ಇಟ್ಟಿದ್ದ ಸ್ಪೋಟಕವನ್ನು ನಾಯಿ ತಿಂದು ಸ್ಪೋಟಗೊಂಡ ಪರಿಣಾಮ ನಾಯಿ ಮೃತಪಟ್ಟಿರುವ ಅಮಾನುಷ ಘಟನೆ ನಡೆದಿದೆ.
ರವೀಂದ್ರ ಪೂಜಾರಿ (62) ಅವರ ಮನೆಯಲ್ಲಿ ಸಾಕಿದ್ದ ನಾಯಿ ಫೆ.1ರಂದು ಸಂಜೆ ಮನೆಯಿಂದ ಹೊರಗಡೆ ಹೋಗಿ ಮರಳಿರಲಿಲ್ಲ. ದಿನಾಂಕ 02 ರಂದು ಬೆಳಿಗ್ಗೆ ಮನೆಯ ಸಮೀಪದ ಹಾಡಿಯಲ್ಲಿ ನಾಯಿ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಲೆ ಹಾಗೂ ಮುಖ ಭಾಗ ಸಂಪೂರ್ಣವಾಗಿ ಛಿದ್ರಗೊಂಡಿತ್ತು.
ಪ್ರಾಣಿ ಹಿಂಸೆ ಮಾಡುವ ಉದ್ದೇಶದಿಂದ ಅಪರಿಚಿತರು ಸ್ಪೋಟಕ ಇಟ್ಟಿರುವ ಶಂಕೆಯ ಹಿನ್ನೆಲೆಯಲ್ಲಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 21/2026 ಅಡಿಯಲ್ಲಿ BNS ಕಲಂ 325 ಹಾಗೂ Prevention of Cruelty to Animals Act, 1960 ರ ಕಲಂ 11(D) (3)(4) ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.