ಡೈಲಿ ವಾರ್ತೆ: 05/JAN/2024

ಉಡುಪಿ: ಮುಸ್ಲಿಂ ಜಮಾಅತ್ ನಿಂದ ವಿಚಾರ ಸಂಕಿರಣ

ಉಡುಪಿ: ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿ ಜನವಿರೋಧಿ ಕಾನೂನುಗಳನ್ನು ಜಾರಿಗೆ ತಂದು ದೇಶದ ನಾಗರಿಕರ ಬದಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಸರಕಾರಗಳ ವಿರುದ್ಧ ದೇಶದ ಅಲ್ಪಸಂಖ್ಯಾತರು. ಹಿಂದುಳಿದ ವರ್ಗಗಳು. ದಲಿತರು ಒಗ್ಗಟ್ಟಿನಿಂದ ಹೋರಾಟ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಈ ದೇಶದ ದಲಿತ ದಮನಿತ ಅಲ್ಪಸಂಖ್ಯಾತರು ಎರಡನೆ ದರ್ಜೆಯ ಪ್ರಜೆಗಳಾಗಬಹುದೆಂದು ಚಿಂತಕರಾದ ಶಿವಸುಂದರ್ ರವರು ಹೇಳಿದರು.

ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಸಮಿತಿಯು ಕಟಪಾಡಿಯ ಚೊಕ್ಕಾಡಿ ನೂರುಲ್ ಇಸ್ಲಾಂ ಹನಫೀ ಜಾಮಿಯ ಮಸೀದಿಯ ವಠಾರದಲ್ಲಿ ಹಮ್ಮಿಕೊಂಡ “ಬದಲಾಗುತ್ತಿರುವ ಭಾರತ ಮತ್ತು ನಾಗರಿಕ ಸಮಾಜದ ಮುಂದಿರುವ ಸವಾಲುಗಳು ಎನ್ನುವ ವಿಷಯವಾಗಿ ನಡೆಸಿದ ವಿಚಾರ ಸಂಕಿರಣವನ್ನು ಉದ್ದೇಶಿಸಿ ವಿಷಯ ಮಂಡಿಸಿದ ಅವರು 2014 ರ ನಂತರ ಈ ದೇಶದಲ್ಲಿ ನಡೆಯುತ್ತಿರುವ ತಾರತಮ್ಯ ನೀತಿಗಳು ಧರ್ಮ ಜಾತಿಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ನಾವೆಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕೆಂದು ಅವರು ಕರೆ ನೀಡಿದರು. ಉಡುಪಿ ಜಿಲ್ಲಾ ಉಲಮಾ ಒಕ್ಕೂಟದ ಕೋಶಾಧಿಕಾರಿ
ಅಬ್ದುಲ್ಲತೀಫ್ ಫಾಳಿಲಿ ನಾವುಂದ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾಧ್ಯಕ್ಷರಾದ ಬಿಎಸ್ಎಫ್ ಮುಹಮ್ಮದ್ ರಫೀಕ್ ಅಧ್ಯಕ್ಷತೆ ವಹಿಸಿದ್ದರು.
ಸುನ್ನಿ ಉಲಮಾ ಒಕ್ಕೂಟ,ಸುನ್ನಿ ಸಂಯುಕ್ತ ಜಮಾಅತ್, ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ಸೆಸ್ಸೆಫ್, ಎಸ್ ಜೆ ಎಮ್,ಎಸ್ ಎಂ ಎ ಹಾಗೂ ಇನ್ನಿತರ ಸುನ್ನಿ ಸಂಘಟನೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಡ್ವೊಕೇಟ್ ಇಲ್ಯಾಸ್ ನಾವುಂದ ಸ್ವಾಗತಿಸಿದರು. ವೈ ಬಿ ಸಿ ಬಶೀರ್ ಆಲಿ ಮೂಳೂರು ನಿರೂಪಿಸಿದರು. ಜಿಲ್ಲಾ ಪ್ರದಾನ ಕಾರ್ಯದರ್ಶಿ ಸುಭಾನ್ ಅಹ್ಮದ್ ಹೊನ್ನಾಳ ಧನ್ಯವಾದ ಸಲ್ಲಿಸಿದರು