ಡೈಲಿ ವಾರ್ತೆ: 07/JAN/2024

ಸುಳ್ಯ: ಬ್ಯಾನರ್ ಹರಿದ ಪ್ರಕರಣ – ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

ಸುಳ್ಯ: ಅಯೋಧ್ಯೆ ಪ್ರತಿಷ್ಠೆ ಸಲುವಾಗಿ ಸುಳ್ಯ ನಗರದ ರಸ್ತೆ ಬದಿ ಹಾಕಿದ ಬ್ಯಾನರ್ ಹರಿದು ಹಾಕಿದ ಕಿಡಿಗೇಡಿಗಳನ್ನು ಬಂಧಿಸಲು ವಿಫಲವಾದ ಪೊಲೀಸ್ ಇಲಾಖೆ ವಿರುದ್ಧ ಬೃಹತ್ ಪ್ರತಿಭಟನೆ ಸುಳ್ಯ ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಜ.7ರ ಭಾನುವಾರ ನಡೆಯಿತು.

ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ರಾಮ ಭಕ್ತರು ಹಾಕಿದ ಬ್ಯಾನರನ್ನು ಹರಿದು ಹಾಕಿ ರಾಮಂದಿರವನ್ನೇ ಕಟ್ ಮಾಡುವ ಉದ್ದೇಶ ಏನಿದೆ ಅವರಿಗೆ. ಕೃತ್ಯದ ಹಿಂದಿರುವವರ ಬಗ್ಗೆ ಸೂಕ್ತ ತನಿಖೆ ನಡೆಸಿ ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು. ಶಾಂತಿ ಸುವ್ಯವಸ್ಥೆಗೆ ಕೈಜೋಡಿಸಬೇಕು. ಪೊಲೀಸ್ ಇಲಾಖೆ ಆರೋಪಿಗಳನ್ನು ಕೂಡಲೇ ಬಂಧಿಸಲಿ ಎಂದು ಆಗ್ರಹಿಸಿದರು.

ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ, ಹಿಂದುತ್ವಕ್ಕೆ ಧಕ್ಕೆ ಆದಾಗ ಹೋರಾಟ ನಡೆಸಿದ ಊರು ಸುಳ್ಯ. ಇದೀಗ ಮತ್ತೆ ಮತ್ತೆ ಹಿಂದೂಗಳನ್ನು ಕೆದಕುವ ಕೆಲಸ ನಡೆಯುತ್ತಿದೆ. ತಪ್ಪು ಯಾರು ಮಾಡಿದ್ದರು ಅವರನ್ನು ಹಿಂದೂ ಸಮಾಜ ಖಂಡಿಸುತ್ತದೆ. ಬ್ಯಾನರ್ ಹಾಕಿದನ್ನು ಹರಿದ ವಿರುದ್ಧ ಹಾಗೂ ಆರೋಪಿಗಳನ್ನು ಕೂಡಲೇ ಬಂಧಿಸಲು ಪ್ರತಿಭಟನೆ ನಡೆಸಲಾಗಿದೆ. ಮುಂದಿನ ಮೂರು ದಿನಗಳಲ್ಲಿ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ಮುಂದೆ ಸುಳ್ಯ ತಾಲೂಕು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆ ಎಂದರು.