ಸಾಂದರ್ಭಿಕ ಚಿತ್ರ

ಡೈಲಿ ವಾರ್ತೆ: 10/Jan/2024

ಎದೆ ಹಾಲು ಗಂಟಲಲ್ಲಿ ಸಿಲುಕಿ ಎರಡೂವರೆ ತಿಂಗಳ ಮಗು ಮೃತ್ಯು.!

ಕಾಸರಗೋಡು: ಎದೆ ಹಾಲು ಗಂಟಲಲ್ಲಿ ಸಿಲುಕಿ ನವಜಾತ ಶಿಶು ಮೃತಪಟ್ಟ ದಾರುಣ ಘಟನೆ ಕಾಸರಗೋಡು ಜಿಲ್ಲೆಯ ಬಂಬ್ರಾಣದಲ್ಲಿ ನಡೆದಿದೆ.

ಅಬ್ದುಲ್ ಅಝೀಝ್ -ಖದೀಜಾ ದಂಪತಿಯ ಎರಡೂವರೆ ತಿಂಗಳ ಪುತ್ರಿಯ ಗಂಟಲಲ್ಲಿ ಹಾಲು ಸಿಲುಕಿ ಮೃತಪಟ್ಟಿದೆ. ಮಲಗಿಕೊಂಡು ಎದೆ ಹಾಲು ಕುಡಿದ ಮಗು ನಂತರ ಬಹಳ ಹೊತ್ತಾದರೂ ಎಚ್ಚರಗೊಳ್ಳಲಿಲ್ಲ.
ಗಾಬರಿಯಾದ ಮನೆಯವರು ಕುಂಬಳೆಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಗೆ ತಲುವ ಮೊದಲೇ ಮಗು ಮೃತಪಟ್ಟಿದೆ ಎಂದು ಪರೀಕ್ಷೆ ನಡೆಸಿದ ವೈದ್ಯರು ತಿಳಿಸಿದ್ದಾರೆ. ಕುಂಬಳೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.