ಡೈಲಿ ವಾರ್ತೆ: 17/Jan/2024
ವಿಜ್ಞಾನ ಪ್ರಯೋಗ ಕಾರ್ಯಾಗಾರ ಅಟಲ್ ಟಂಕರಿಂಗ್ ಫೆಸ್ಟ್ 2023-24 ಧೃತಿಗೆಡದೇ ಸಾಗಿದಾಗ ಯಶಸ್ಸು ಖಚಿತ: ಪ್ರಕಾಶ ಬಾಳಿಗಾ
ಬಂಟ್ವಾಳ : ಯಾವುದೇ ಸಂದರ್ಭದಲ್ಲಿ ಧೃತಿಗೆಡದೇ ಸಾಗಿದಾಗ ಯಶಸ್ಸು ಖಚಿತ. ಗೆಲುವು ಅರಸಿಕೊಂಡು ಬರುತ್ತದೆ.
ಎಂದು ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ ಬಾಳಿಗಾ ತಿಳಿಸಿದರು. ಅವರು ಬುಧವಾರ ಮಾಣಿಯ ಕರ್ನಾಟಕ ಪ್ರೌಢಶಾಲೆಯಲ್ಲಿ ಮಾಣಿ ವಿದ್ಯಾವರ್ಧಕ ಸಂಘ ಕರ್ನಾಟಕ ಪ್ರೌಢಶಾಲೆ ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಏಳು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗಾಗಿ ನಢದ ವಿಜ್ಞಾನ ಪ್ರಯೋಗ ಪ್ರಾತ್ಯಕ್ಷಿಕೆ ಅಟಲ್ ಟಂಕರಿಂಗ್ ಫೆಸ್ಟ್ 2023-24 ಉದ್ಘಾಟಿಸಿ ಮಾತನಾಡಿದರು.
ಇಂದು ಆಧುನಿಕ ತಂತ್ರಜ್ಞಾನದ ಜತೆ ಸಾಗುವ ಅನಿವಾರ್ಯ ಇದ್ದು ಕಾರ್ಯಾಗಾರದ ಸದುಪಯೋಗ ಮಾಡಿಕೊಳ್ಳುವಂತೆ ಶಿಕ್ಷಕರಿಗೆ ಕತೆ ನೀಡಿದರು.
ಮಾಣಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಉಪನ್ಯಾಸಕಿ ವೇದಾವತಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮೆಲ್ವಿನ್ ಮಾರ್ಟಿಸ್ ಸಿಕ್ವೆರಾ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಪುಷ್ಪರಾಜ ಹೆಗ್ಡೆ, ನಿವೃತ್ತ ಮುಖ್ಯ ಶಿಕ್ಷಕ ಬಿ. ಕೆ. ಭಂಡಾರಿ, ಮಂಗಳೂರಿನ ತಾಂತ್ರಿಕ ಸಂಸ್ಥೆಯ ಶ್ರೀಕಾಂತ್ ವಿಟ್ವಾರ , ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್ ಚೆನ್ನಪ್ಪ ಗೌಡ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಸಾರಿಕಾ ಮೊದಲಾದವರು ಉಪಸ್ಥಿತರಿದ್ದರು.
ಅನಂತಾಡಿ, ನೇರಳಕಟ್ಟೆ, ಪಾಟ್ರಕೋಡಿ,ಕುದ್ರೆಬೆಟ್ಟು, ಪೆರಾಜೆ, ಕೆದಿಲ, ಗಡಿಯಾರ,ಶೇರ, ಸತ್ತಿಕಲ್ಲು, ಮಾಣಿ, ಬರಿಮಾರು ಮತ್ತು ಕಡೇಶಿವಾಲಯ ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.
ಚೆನ್ನಪ್ಪ ಗೌಡ ಸ್ವಾಗತಿಸಿದರು. ಗಂಗಾಧರ ಗೌಡ ವಂದಿಸಿದರು. ಜಯರಾಮ ಕಾಂಚನ ಕಾರ್ಯಕ್ರಮ ನಿರೂಪಿಸಿದರು.