ಡೈಲಿ ವಾರ್ತೆ: 18/Jan/2024

ಹೊರನಾಡು ಕನ್ನಡತಿ ಗೊಣಸಗಿ ಸವಿತಾ ಇನಾಮದಾರ ದೇಸಾಯಿ ಅವರಿಗೆ ಸತ್ಕಾರ

ಬೆಳಗಾವಿ: ” ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ.), ಬೆಳಗಾವಿ ವತಿಯಿಂದ ಅಂತಾರಾಷ್ಟ್ರೀಯ ಖ್ಯಾತಿಕವಯತ್ರಿ, ಸಾಹಿತಿ, ಅನುವಾದಕಿ, ನಾಟಕ ನಿರ್ದೇಶಕಿಯಾಗಿರುವ ದೆಹಲಿ ಹೊರನಾಡು ಕನ್ನಡತಿ ಗೊಣಸಗಿ ಸವಿತಾ ಇನಾಮದಾರ ದೇಸಾಯಿ ಇವರು ಬೆಳಗಾವಿಗೆ ಭೆಟ್ಟಿ ನೀಡಿದ ಸಂದರ್ಭದಲ್ಲಿ ಇವರನ್ನು ಬೆಳಗಾವಿಯ ಗುರುಪ್ರಸಾದ್ ನಗರದ ದೇಸಾಯಿ ಮ್ಯೂಜಿಕಲ್ಸ್ ಸಂಸ್ಥೆಯಲ್ಲಿ ಸತ್ಕರಿಸಲಾಯಿತು .

ಈ ಸಂದರ್ಭದಲ್ಲಿ ಅವರು ಹೊರನಾಡು ಮತ್ತು ದೇಶ ವಿದೇಶಗಳಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಸತ್ಕಾರವನ್ನು ಹೊಂಬೆಳಕು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸ.ರಾ. ಸುಳಕೂಡೆ, ಕಾರ್ಯದರ್ಶಿ ಆರ್. ಬಿ. ಬನಶಂಕರಿ, ನಿರ್ದೇಶಕ ಡಾ. ಶಾಂತಾರಾಮ್ ಹೆಗಡೆ, ದೇಸಾಯಿ ಮ್ಯೂಜಿಕಲ್ಸ್ ಸಂಸ್ಥೆಯ ಶ್ರೀಮತಿ/ಶ್ರೀ. ಜಿ. ಎಲ್. ದೇಸಾಯಿ, ಕ.ಸಾ.ಪ. ಕಾರ್ಯದರ್ಶಿ ಶ್ರೀ. ಎಂ.ವಾಯ್. ಮೆಣಸಿನಕಾಯಿ ಹಾಗೂ ವಿದ್ಯಾಮಂದಿರದ ಸಂಚಾಲಕರಾದ ಶ್ರೀಮತಿ ಶಾರದಾ ಕುಲಕರ್ಣಿ ಹಾಗೂ ಇತರರು ನೆರವೇರಿಸಿದರು.