ಡೈಲಿ ವಾರ್ತೆ: 19/Jan/2024

ಕನ್ನಡ ಭಾಷೆ ಹಾಲು ಜೇನಿನಂತೆ:
ಡಾ. ಎ. ಕೆ. ಚಿಕ್ಕಮಠ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಹಾಗೂ ಐಕ್ಯೂಎ ಎಸ್ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಕರ್ನಾಟಕ ಏಕೀಕರಣ ಇತಿಹಾಸ ಕುರಿತು ಸವಿಸ್ತಾರವಾಗಿ ಉಪನ್ಯಾಸ ನೀಡುತ್ತಾ ಕನ್ನಡ ಭಾಷೆ ಪುರಾತನವಾದದ್ದು ಇದರ ಚೆಲುವು ಕಾಮನ ಬಿಲ್ಲು ಮುರಿದು ಬಿದ್ದಂತೆ ಸೌಂದರ್ಯಯುತವಾಗಿ ಇದೆ ಇಲ್ಲಿನ ರಾಜರು ಸಾಹಿತಿ ಕವಿಗಳು ಸಂಶೋಧಕರು ಇದರ ಇತಿಹಾಸವನ್ನು ಸುಮಾರು 2000 ವರ್ಷಗಳ ಹಿಂದಿನ ಸಂಗತಿಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವ ಹಾಗೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇತಿಹಾಸ ಸಹ ಪ್ರಾಧ್ಯಾಪಕರಾದ ಡಾ. ಸಿ ಬಿ ತಾಬೂಜಿಯವರು ವಹಿಸಿಕೊಂಡು ಮಾತನಾಡುತ್ತಾ ಕನ್ನಡದ ಕಂದ ಎಲ್ಲರ ಮನದಲ್ಲಿ ನೆಲೆಯೂರ ಬೇಕು ಎಂದು ಹೇಳಿದರು ಸಂಯೋಜಕರಾದ ಪ್ರೊ ಅಂಬರೀಶ್ ರೇವತಗಾವ್ ಅವರು ಅತಿಥಿಗಳಾಗಿ ಭಾಗವಹಿಸಿ ಕನ್ನಡದ ಹಿರಿಮೆಯನ್ನು ಕೊಂಡಾಡಿದರು ಕನ್ನಡದ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಕೌಶಲ್ಯ ಡಿಯವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿಕೊಂಡರು
ಡಾ. ಎ.ಬಿ .ಇಟಗಿ ಅವರು ಪರಿಚಯ ಭಾಷಣ ಮಾಡಿದರು ಪ್ರೊ. ಯಲ್ಲಪ್ಪ ಗುಡೇನ್ನವರ್ ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಸೂಯಲ್ ಪಟೇದಾರ್ ಹಾಗೂ ಸುರೇಖಾ ಇಟಗಿ ನಡಿಸಿದರು ಕುಮಾರಿ ವರ್ಷಾ ಹಿರೇಮಠ ವಂದಿಸಿದರು ಉಪನ್ಯಾಸದಲ್ಲಿ ಕಾಲೇಜಿನ ವಿದ್ಯಾರ್ಥಿ ವೃಂದವು ಪಾಲ್ಗೊಂಡಿತ್ತು.