ಡೈಲಿ ವಾರ್ತೆ: 23/Jan/2024

ರಾಜ್ಯಮಟ್ಟದ ಹರಿಹರ ಶ್ರೀ ಪ್ರಶಸ್ತಿ ಪ್ರದಾನ ಹಾಗೂ ಸಾಧಕರಿಗೆ ಸಂಗಮ ಶ್ರೀ ಪ್ರದಾನ ಸಮಾರಂಭ

ಬೆಳಗಾವಿ: ದಿನಾಂಕ 20.01.2024ರ ಶನಿವಾರದಂದು ಸಾಹಿತ್ಯ ಸಂಗಮ( ರಿ) ಹರಿಹರ ಈ ಸಂಘಟನೆಯ ವತಿಯಿಂದ 2021ರ ಸಾಲಿನ ರಾಜ್ಯಮಟ್ಟದ ಹರಿಹರ ಶ್ರೀ ಪ್ರಶಸ್ತಿ ಪ್ರದಾನ ಹಾಗೂ ಸಾಧಕರಿಗೆ ಸಂಗಮ ಶ್ರೀ ಪ್ರದಾನ ಸಮಾರಂಭ ಅದ್ದೂರಿಯಾಗಿ ಹರಿಹರದ ಶ್ರೀಶೈಲ ಶಿಕ್ಷಣ ಮಹಾವಿದ್ಯಾಲಯ ಹರಿಹರದಲ್ಲಿ ನೆರವೇರಿಸಿದರು.

2021ರ ರಾಜ್ಯಮಟ್ಟದ ಹರಿಹರ ಶ್ರೀ ಪ್ರಶಸ್ತಿ ಪುರಸ್ಕೃತ ಬೆಳಗಾವಿಯ ಡಾ ಅನ್ನಪೂರ್ಣ ಹಿರೇಮಠ್ ಅವರ ಭಾವಸಿರಿ ಚೊಚ್ಚಲ ಕವನ ಸಂಕಲನಕ್ಕೆ ದೊರಕಿದ್ದು ಸಂತಸದ ಸಂಗತಿ.ದಾವಣಗೇರಿಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮಾತನಾಡಿ ಇದೊಂದು ಉತ್ತಮ ಸಾಹಿತಿಗಳಿಗೆ ಮಾತ್ರ ದೊರಕುವ ಶ್ರೇಷ್ಠವಾದ ಮತ್ತು ಅತ್ಯಂತ ಪಾರದರ್ಶಕವಾಗಿ ಸಿಗುವಂತಹ ಪ್ರಶಸ್ತಿ ಎಂದು ಹೇಳಿದರು.

ಹರಿಹರ ಶ್ರೀ ಪ್ರಶಸ್ತಿ ಪುರಸ್ಕೃತರ ಕುರಿತು ಡಾ. ನಾಗಾರ್ಜುನ್ ಅವರು ಮಾತನಾಡಿ ಇಂತಹ ಮೌಲ್ಯಯುತ ಸಾಹಿತ್ಯಕ್ಕೆ ದೊರಕಬಹುದಾದ ಪ್ರಶಸ್ತಿ ಇದು. ಸಾಹಿತ್ಯ ಸಂಗಮ ಸಂಘಟನೆ 30 ವರ್ಷಗಳಿಂದ ವರ್ಷಕ್ಕೆ ಒಬ್ಬ ಶ್ರೇಷ್ಠ ಸಾಹಿತಿಯ ಪುಸ್ತಕ ಆಯ್ಕೆ ಮಾಡುತ್ತ, ನುರಿತ ಸಾಹಿತಿಗಳಿಂದ ಅಭಿಪ್ರಾಯ ತೆಗೆದುಕೊಂಡು ಆಯ್ಕೆ ಮಾಡುತ್ತಾರೆ ಎಂದು ಹೇಳಿದರು. ಪ್ರೊಫೆಸರ್ ಮಾರುತಿ ಸಿಡ್ಲಾಪುರ ಸಾಹಿತಿಗಳು ಹಾನಗಲ್ ಇವರು ಮಾತನಾಡಿ ಉತ್ತಮ ಕವನ ಸಂಕಲನ ಭಾವಸರಿ, “ಭಾವನೆಗಳ ಬಿತ್ತಿಯಿದು ,ಸಮಾಜಕ್ಕೆ ಸಂದೇಶ ಸಾರುವಂತಹ ವಿಭಿನ್ನ ವಿಷಯ ವಸ್ತುಗಳನ್ನು ಆಧರಿಸಿದ ಕವನಗಳಿಂದ ಕೂಡಿದೆ. ಉತ್ತಮ ಕವನ ಸಂಕಲನವಿದು, ಇನ್ನೂ ಉನ್ನತ ಪ್ರಶಸ್ತಿಗಳು ಸಿಗಲಿ ಕವಯಿತ್ರಿಗೆ ಎಂದು ಹಾರೈಸಿದರು. ಇಂತಹ ಕವಿಗಳು ಈಗಿನ ಕಾಲದಲ್ಲಿ ಅಪರೂಪ ಎಂದರು. ಸಾಹಿತ್ಯ ಸಂಗಮದ ರಾಜ್ಯಾಧ್ಯಕ್ಷರು ಬಿ, ಜಿ. ಕೊಟ್ರೇಶಪ್ಪನವರು ಮಾತನಾಡಿ ,ನಾವು ಬಹಳ ಪಾರದರ್ಶಕವಾಗಿ ನಾಡಿನ ನೂರಕ್ಕಿಂತ ಹೆಚ್ಚು ಪುಸ್ತಕಗಳನ್ನು ಪ್ರಶಸ್ತಿಗಾಗಿ ತರಿಸಿ, ಬೇರೆ ಬೇರೆ ಉತ್ತಮ ವಿಮರ್ಶಕರಿಗೆ ಕೊಟ್ಟು ಅತ್ಯಂತ ಮುತುವರ್ಜಿವಹಿಸಿ ಆಯ್ಕೆ ಮಾಡಿದ್ದೇವೆ ಎಂದು ಹೇಳಿದರು. ಇಂತಹ ಉತ್ತಮ ಕವನ ಸಂಕಲನ ಆಯ್ಕೆಯಾದದ್ದು ನನಗೆ ಸಂತಸ ತಂದಿದೆ ಎಂದರು. ಡಾಕ್ಟರ್ ಅನ್ನಪೂರ್ಣ ಹಿರೇಮಠ ಅವರು ಮಾತನಾಡುತ್ತಾ” ಕವಿತ್ವ ಎನ್ನುವುದು ಭಾವಜೀವಿಯ ಹೃದಯವಂತರಾಳದಲ್ಲಿ ಹುದುಗಿರುವ ಭಾವನೆಗಳಿಗೆ ನವಿರಾದ ಭಾವದೆ ಪದಪುಂಜಗಳಿಂದ ಹೆಣೆದು ಪೊಣಿಸುವ ಸುಂದರ ಕಲೆ ಸಾಹಿತ್ಯ “ಮನ ತಟ್ಟುವ ವಿಷಯ ವಸ್ತುಗಳ ಹೊಂದಾಣಿಕೆ,ಎನ್ನುತ್ತಾ ತಮ್ಮ ಸಾಹಿತ್ಯ ಪಯಣದ ಹೆಜ್ಜೆಗಳನ್ನು ದಾವಣಗೆರೆ ಜಿಲ್ಲೆಯ ಒಳ್ಳೆಯ ಸಾಹಿತಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಸಾಹಿತ್ಯಾಸಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮ ಉತ್ತಮವಾಗಿ ನೆರವೇರಿತು.