ಡೈಲಿ ವಾರ್ತೆ: 24/Jan/2024
ಜ.28 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ‘ಸಮಸ್ತ’ ಶತಮಾನೋತ್ಸವ ಉದ್ಗಾಟನಾ ಸಮ್ಮೇಳನ
ಸಯ್ಯಿದುಲ್ ಉಲಮಾ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸಹಿತ ದೇಶ ವಿದೇಶಗಳ ಗಣ್ಯರು ಭಾಗಿ
ಬಂಟ್ವಾಳ : ‘ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಇದರ ನೂರನೇ ವಾರ್ಷಿಕದ ಉದ್ಘಾಟನಾ ಸಮ್ಮೇಳನವು ಜ. 28 ರಂದು ಬೆಂಗಳೂರು ಅರಮನೆ ಮೈದಾನ ಶಂಸುಲ್ ಉಲಮಾ ನಗರದಲ್ಲಿ ನಡೆಯಲಿದೆ ಎಂದು ಸಮಸ್ತ’ ಕೇಂದ್ರ ಮುಶಾವರ ಸದಸ್ಯ, “ಸಮಸ್ತ’ ದ ಪ್ರಧಾನ ಕಾರ್ಯದರ್ಶಿ ಬಿ.ಕೆ. ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ತಿಳಿಸಿದರು.
ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸಮಸ್ತ’ ದ ಅಧ್ಯಕ್ಷ ಸಯ್ಯಿದುಲ್ ಉಲಮಾ ರವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮ್ಮೇಳನದಲ್ಲಿ ರಾಜ್ಯದ ಮುಖ್ಯ ಮಂತ್ರಿ, ಉಪ ಮುಖ್ಯಮಂತ್ರಿಗಳ ಸಹಿತ ದೇಶ ವಿದೇಶಗಳ ಗಣ್ಯರು, ಉಲಮಾ, ಉಮರಾ ನಾಯಕರು ಭಾಗವಹಿಸುವರು ಎಂದ ಅವರು
1926 ಜೂನ್ 26 ರಂದು ಸಾತ್ವಿಕರಾದ ಉಲಮಾ, ಸಾದಾತ್ ಗಳ ಸಾರಥ್ಯದಲ್ಲಿ ರೂಪುಗೊಂಡ ‘ಸಮಸ್ತ’ ಉಲಮಾ ಸಂಘಟನೆಯು ಆದರ್ಶ ಶುದ್ದಿಯೊಂದಿಗೆ ನೂರನೇ ವರ್ಷಕ್ಕೆ ಕಾಲಿರಿಸಿದ್ದು, 2026 ರಲ್ಲಿ ಶತಮಾನೋತ್ಸವವನ್ನು ಐತಿಹಾಸಿಕವಾಗಿ ಆಚರಿಸಲಿದೆ. ಕಳೆದ 2016 ಫೆಬ್ರುವರಿ ತಿಂಗಳಲ್ಲಿ ಕೇರಳದ ಆಲಪ್ಪುಯದಲ್ಲಿ ನಡೆದ 90 ನೇ ವಾರ್ಷಿಕ ಮಹಾ ಸಮ್ಮೇಳನದಲ್ಲಿ ಮರ್ಹೂಂ ಪಾಣಕ್ಕಾಡ್ ಹೈದರಲಿ ಶಿಹಾಬ್ ತಂಙಳ್ ಅವರು 2026 ರಲ್ಲಿ ‘ಸಮಸ್ತ’ ಶತಮಾನೋತ್ಸವ ಆಚರಿಸುವ ಬಗ್ಗೆ ಘೋಷಿಸಿದ್ದರು.
ಜನವರಿ 28 ರಂದು ಬೆಂಗಳೂರಲ್ಲಿ ನಡೆಯುವ ಉದ್ಗಾಟನಾ ಸಮ್ಮೇಳನದಲ್ಲಿ ನೂರನೇ ವಾರ್ಷಿಕದ ದಿನಾಂಕವನ್ನು ಘೋಷಿಸಲಾಗುವುದು ಎಂದು ತಿಳಿಸಿದರು.
ನೂರು ವರ್ಷಗಳನ್ನು ಪೂರೈಸಿದ ‘ಸಮಸ್ತ’ ಸಂಘಟನೆಯು ಮುಸ್ಲಿಮರ ಅಧಿಕೃತ ಉಲಮಾ ಸಂಘಟನೆಯಾಗಿ ಗುರುತಿಸಿ ಕೊಂಡಿದ್ದು, 40 ಸದಸ್ಯರ ಉನ್ನತ ‘ಮುಶಾವರ’ ಸದಸ್ಯರುಗಳನ್ನು ಹೊಂದಿರುವ ಈ ಸಂಘಟನೆಯ ಅಧೀನದಲ್ಲಿ 14 ಅಂಗ ಸಂಘಟನೆಗಳು ಕಾರ್ಯಾಚರಿಸುತ್ತಿದೆ. ಮೊದಲ ಅಧೀನ ಸಂಘಟನೆಯಾದ ‘ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್’ ನ ಅಧೀನದಲ್ಲಿ ದೇಶ, ವಿದೇಶಗಳಲ್ಲಿ ಒಂದೇ ಪಠ್ಯಕ್ರಮದಲ್ಲಿ ಒಟ್ಟು 10,762 ಮದ್ರಸಗಳು ಕಾರ್ಯ ನಿರ್ವಹಿಸುತ್ತಿದ್ದು, ಬೋಧಕರಾಗಿ ಒಂದು ಲಕ್ಷ ಅಧ್ಯಾಪಕರು ಕಾರ್ಯನಿರ್ವಹಿಸುತ್ತಿದ್ದಾರೆ, ಹನ್ನೆರಡು ಲಕ್ಷಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರಾಥಮಿಕ ಹಂತದಿಂದ ಹನ್ನೆರಡನೆಯ ತರಗತಿ ವರೆಗೆ ಮದ್ರಸ ವ್ಯವಸ್ಥೆ , ಉನ್ನತ ಶಿಕ್ಷಣಕ್ಕಾಗಿ ಗಂಡು ಮತ್ತು ಹೆಣ್ಮಕ್ಕಳಿಗಾಗಿ ನೂರಾರು ಧಾರ್ಮಿಕ -ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆಗಳು ಹಾಗೂ ಇಂಜಿನಿಯರಿಂಗ್ ಕಾಲೇಜ್ ಸಹಿತ ಹಲವಾರು ಬಹುಮುಖ ವಿದ್ಯಾಸಂಸ್ಥೆಗಳು ‘ಸಮಸ್ತ’ ದ ಅಧೀನದಲ್ಲಿ ಕಾರ್ಯಾಚರಿಸುತ್ತಿದೆ.
ನೂರನೇ ವರ್ಷಾಚರಣೆಯ ಅಂಗವಾಗಿ ‘ಸಮಸ್ತ’ದ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸೇವಾ ಕಾರ್ಯ ಚಟುವಟಿಕೆಗಳನ್ನು ಇನ್ನಷ್ಟು ಕ್ಷೇತ್ರಗಳಿಗೆ ವಿಸ್ತರಿಸಲು ಮತ್ತು ಬಲಪಡಿಸಲು ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತದೆ.
ಭಾರತದ ಪ್ರಜಾಸತ್ತಾತ್ಮಕ , ಜಾತ್ಯತೀತ ವ್ಯವಸ್ಥೆ ಗಳನ್ನು ಬಲಪಡಿಸಲು ಮತ್ತು ಕೋಮು ಸೌಹಾರ್ದತೆಯನ್ನು ಉತ್ತೇಜಿಸಲು ‘ಸಮಸ್ತ’ ಸಂಘಟನೆಯು ನಿರಂತರವಾಗಿ ಶ್ರಮಿಸುತ್ತಾ ಬಂದಿದ್ದು, ಇಂದು ದಕ್ಷಿಣ ಭಾರತದಲ್ಲಿ ಕೋಮು ಸೌಹಾರ್ದತೆ ನೆಲೆಸುವಲ್ಲಿ ‘ಸಮಸ್ತ’ ನೀಡಿದ ಕೊಡುಗೆಯೂ ಮಹತ್ತರವಾಗಿದೆ.
ಜನವರಿ 28 ರಂದು ಬೆಂಗಳೂರು ಪ್ಯಾಲೇಸ್ ಗ್ರೌಂಡ್ ಶಂಸುಲ್ ಉಲಮಾ ನಗರದಲ್ಲಿ ನಡೆಯುವ ‘ಸಮಸ್ತ’ ದ ಶತಮಾನೋತ್ಸವ ಉದ್ಗಾಟನಾ ಸಮ್ಮೇಳನದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಲಿದ್ದು, ಕರ್ನಾಟಕ , ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಕಾರ್ಯಕರ್ತರು ಆಗಮಿಸುವರು. ಇತ್ತೀಚೆಗಿನ ದಿನಗಳಲ್ಲಿ ಬೆಂಗಳೂರು ಕಂಡ ಅತೀದೊಡ್ಡ ಜನಸಂದಣಿಗೆ ಅರಮನೆ ಮೈದಾನ ಸಾಕ್ಷಿಯಾಗಲಿದೆ.
ಜನವರಿ 28 ರಂದು ಬೆಳಿಗ್ಗೆ 9 ಗಂಟೆಗೆ ಬೆಂಗಳೂರು ತವಕ್ಕಲ್ ಮಸ್ತಾನ್ ದರ್ಗಾ ಝಿಯಾರತ್ ನೊಂದಿಗೆ ಕಾರ್ಯಕ್ರಮ ಕ್ಕೆ ಚಾಲನೆ ದೊರೆಯಲಿದ್ದು, 10 ಘಂಟೆಗೆ ಸಮ್ಮೇಳನ ನಗರದಲ್ಲಿ ಸ್ವಾಗತ ಸಮಿತಿ ಜನರಲ್ ಕನ್ವೀನರ್ ಮತ್ತು ಕಲ್ಲಿಕೋಟೆ ಖಾಝಿಯೂ ಆಗಿರುವ ಸಯ್ಯಿದ್ ಮುಹಮ್ಮದ್ ಕೋಯ ಜಮುಲ್ಲೈಲಿ ತಂಙಳ್ ಅವರು ಧ್ವಜಾರೋಹಣ ನಡೆಸುವರು. ಸಂಜೆ 5 ಗಂಟೆಗೆ ಐತಿಹಾಸಿಕವಾದ ಸಮ್ಮೇಳನವು ಆರಂಭಗೊಳ್ಳಲಿದ್ದು, ಸ್ವಾಗತ ಸಮಿತಿ ಚೆಯರ್ ಮ್ಯಾನ್ ಎಂ.ಟಿ.ಅಬ್ದುಲ್ಲಾ ಮುಸ್ಲಿಯಾರ್ ಸ್ವಾಗತ ಭಾಷಣ ಮಾಡುವರು, ‘ಸಮಸ್ತ’ ಕೇಂದ್ರ ಮುಶಾವರ ಸದಸ್ಯರು, ದ.ಕ.’ಸಮಸ್ತ’ ದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಪ್ರಸ್ತಾವಿಕ ಭಾಷಣ ಮಾಡಲಿದ್ದು, ‘ಸಮಸ್ತ’ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತು ಕೋಯ ತಂಙಳ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸುವರು, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನವನ್ನು ಉದ್ಗಾಟಿಸುವರು, ಪಾಣಕ್ಕಾಡ್ ಶ್ವಾದಿಖಲಿ ಶಿಹಾಬ್ ತಂಙಳ್ ಮುಖ್ಯಭಾಷಣ ನಡೆಸಲಿದ್ದಾರೆ. ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕರ್ನಾಟಕದ ಎಸ್ಕೆಎಸ್ಸೆಸ್ಸೆಫ್ ನ ತುರ್ತು ಸೇವಾ ತಂಡವಾದ ‘ವಿಖಾಯ’ದ 2500 ಸ್ವಯಂ ಸೇವಕರ ಸಮರ್ಪಣೆಯನ್ನು ಅವರು ನಿರ್ವಹಿಸುವರು. ‘ಸಮಸ್ತ’ ಪ್ರಧಾನ ಕಾರ್ಯದರ್ಶಿ ಶೈಖುಲ್ ಜಾಮಿಆ ಪ್ರೋ.ಅಲಿಕುಟ್ಟಿ ಮುಸ್ಲಿಯಾರ್ ಅವರು, ‘ಸಮಸ್ತ’ ಶತಮಾನೋತ್ಸವದ ಯೋಜನೆಯನ್ನು ಘೋಷಿಸುವರು. ‘ಸಮಸ್ತ’ ಕೋಶಾಧಿಕಾರಿ ಪಿ.ಪಿ.ಉಮರ್ ಮುಸ್ಲಿಯಾರ್ ಕೊಯ್ಯೋಡ್ ಭಾಷಣ ಮಾಡುವರು.
ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್, ಗೃಹ ಸಚಿವ ಜಿ.ಪರಮೇಶ್ವರ್, ವಕ್ಫ್ ಮತ್ತು ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವ ಝಮೀರ್ ಅಹ್ಮದ್ ಖಾನ್, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಚಿವ ಭೈರತಿ ಸುರೇಶ್, ವೈದ್ಯಕೀಯ ಸಚಿವ ಕೆ.ಜಿ.ಜಾರ್ಜ್, ಶಾಸಕರಾದ ಎನ್.ಎ.ಹಾರಿಸ್, ನಸೀರ್ ಅಹ್ಮದ್ , ರಿಝ್ವಾನ್ ಅರ್ಶದ್ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
‘ಸಮಸ್ತ’ ದ ಕೇಂದ್ರ ಮುಶಾವರ ಮುಖಂಡರಾದ ಎಂ.ಕೆ.ಮೊಯ್ದೀನ್ ಕುಟ್ಟಿ ಮುಸ್ಲಿಯಾರ್ , ಎಂ.ಸಿ. ಕುಂಞಹ್ಮದ್ ಮುಸ್ಲಿಯಾರ್ ನೆಲ್ಲಾಯಿ, ಪಿ.ಕೆ.ಮೂಸಕಟ್ಟಿ ಹಝ್ರತ್, ಕೆ.ಉಮರ್ ಫೈಝಿ ಮುಕ್ಕಂ, ಜಮಾಅತ್ ಅಹ್ಲುಸುನ್ನ ಸಂಸ್ಥಾಪಕ ಮೌಲನಾ ಸಯ್ಯಿದ್ ತನ್ವೀರ್ ಹಾಶ್ಮಿ, ಕರ್ನಾಟಕ ಜಮಾಅತ್ ಅಹ್ಲುಸುನ್ನ ಪ್ರಧಾನ ಕಾರ್ಯದರ್ಶಿ ಮೌಲನಾ ಮುಫ್ತಿ ಮುಹಮ್ಮದಲಿ ಮಿಸ್ಬಾಹಿ ಜಮಾಲಿ, ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ರಫೀಕ್ ಹುದವಿ ಕೋಲಾರಿ, ಪಾಣಕ್ಕಾಡ್ ಸಯ್ಯಿದ್ ಅಬ್ಬಾಸಲಿ ಶಿಹಾಬ್ ತಂಙಳ್, ‘ಸಮಸ್ತ’ ಕೇಂದ್ರ ಮುಶಾವರ ಸದಸ್ಯರಾದ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮಂಗಳೂರು, ಕೆ.ಟಿ.ಹಂಝ ಮುಸ್ಲಿಯಾರ್ ವಯನಾಡ್, ಕೆ.ಪಿ.ಸಿ.ತಂಙಳ್ ವಲ್ಲಪುಯ ಪಾಲಕ್ಕಾಡ್, ವಿ.ಮೂಸಕೋಯ ಮುಸ್ಲಿಯಾರ್ , ಟಿ.ಎಸ್.ಇಬ್ರಾಹಿಂ ಕುಟ್ಟಿ ಮುಸ್ಲಿಯಾರ್ ಚೋಕ್ಲಿ, ಮಾಣಿಯೂರ್ ಅಹ್ಮದ್ ಮುಸ್ಲಿಯಾರ್, ಹೈದರ್ ಫೈಝಿ, ಡಾ.ಬಹಾವುದ್ದೀನ್ ನದ್ವಿ ಕೂರಿಯಾಡ್, ಎಂ.ಮೊಯ್ದೀನ್ ಕುಟ್ಟಿ ಮುಸ್ಲಿಯಾರ್ ವಾಕೋಡ್, ಎ.ವಿ.ಅಬ್ದುರ್ರಹ್ಮಾನ್ ಮುಸ್ಲಿಯಾರ್, ಕೆ.ಕೆ.ಪಿ.ಅಬ್ದುಲ್ಲಾ ಮುಸ್ಲಿಯಾರ್ ಕಣ್ಣೂರು, ಇ.ಎಸ್.ಹಸನ್ ಫೈಝಿ ಎರ್ನಾಕುಲಂ, ಸಯ್ಯಿದ್ ಫತ್ಹಾವುಲ್ಲಾ ಕುಂಞಕೋಯ ತಂಙಳ್ ಲಕ್ಷದ್ವೀಪ, ಒಇ.ಕೆ.ಹಂಝ ಕುಟ್ಟಿ ಮುಸ್ಲಿಯಾರ್ ಆದರ್ಶೇರಿ, ಎ.ಬಿ.ಉಸ್ಮಾನ್ ಫೈಝಿ ಎರ್ನಾಕುಲಂ, ಮಾಹಿನ್ ಮುಸ್ಲಿಯಾರ್ ತೊಟ್ಟಿ, ಮುಸ್ತಫಲ್ ಫೈಝಿ ತಿರೂರ್, ಎಂ.ಎಂ.ಅಬ್ದುಲ್ಲಾ ಫೈಝಿ ಕೊಡಗು, ಎನ್.ಕೆ.ಅಬ್ದುಲ್ ಖಾದಿರ್ ಫೈಝಿ, ಪಿ.ಎಂ. ಅಬ್ದುಸ್ಸಲಾಂ ಬಾಖವಿ ತೃಶೂರ್, ಎಂ.ವಿ.ಇಸ್ಮಾಯಿಲ್ ಮುಸ್ಲಿಯಾರ್, ಸಿ.ಕೆ.ಸೈದಾಲಿ ಕುಟ್ಟಿ ಫೈಝಿ, ಅಸ್ಗರ್ ಫೈಝಿ ಪಟ್ಟಿಕ್ಕಾಡ್, ಸಿ.ಜೆ. ಅಬ್ದುರ್ರಹ್ಮಾನ್ ಫೈಝಿ , ಕೆ.ಎಂ. ಉಸ್ಮಾನುಲ್ ಫೈಝಿ ತೋಡಾರ್, ಅಬೂಬಕ್ಕರ್ ದಾರಿಮಿ ವಳವಣ್ಣ, ಪಿ.ವಿ.ಅಬ್ದುಸ್ಸಲಾಂ ದಾರಿಮಿ ಆಲಂಪಾಡಿ, ಸೂಫಿ ಅಬ್ದುಲ್ ಖಾದಿರ್ ಶಾ ವಾಜಿದ್ ಹುಸೈನಿ ಬೆಂಗಳೂರು, ಮೌಲನಾ ಫರೀದ್ ಖಾನ್ ಮಿಸ್ಬಾಹಿ ಗಂಗಾವತಿ, ಮೌಲನಾ ಕಮಲ್ ಪಾಶಾ ನಕ್ಷಬಂದಿ, ಮುಫ್ತಿ ಮುಹಮ್ಮದಲಿ ಖಾದಿರಿ ಹಾಗೂ ‘ಸಮಸ್ತ’ ದ ವಿವಿಧ ಅಂಗ ಸಂಸ್ಥೆಗಳ ದೇಶ, ವಿದೇಶಗಳಲ್ಲಿರುವ ನಾಯಕರು ಭಾಗವಹಿಸುವರು.
ಬೆಳಿಗ್ಗೆ ಗಂಟೆ 10 ರಿಂದ ವೇದಿಕೆ -2 ಖುದ್ದೂಸ್ ಸಾಬೇಬ್ ಮೈದಾನದಲ್ಲಿ ಕರ್ನಾಟಕ ಎಸ್ಕೆಎಸ್ಸೆಸ್ಸೆಫ್ ಸಂಗಮ ನಡೆಯಲಿದೆ. ಎಸ್ಕೆಎಸ್ಸೆಸ್ಸೆಫ್ ಕೇಂದ್ರೀಯ ಅಧ್ಯಕ್ಷ ಪಾಣಕ್ಕಾಡ್ ಸಯ್ಯಿದ್ ಹಮೀದಲಿ ಶಿಹಾಬ್ ತಂಙಳ್ ಉದ್ಘಾಟಿಸುವ ಈ ಸಂಗಮದಲ್ಲಿ ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ದುವಾಶೀರ್ವಚನ ನೀಡುವರು, ಸಿಂಸಾರುಲ್ ಹಖ್ ಹುದವಿ ಸಹಿತ ಎಸ್ಕೆಎಸ್ಸೆಸ್ಸೆಫ್, ಟ್ರೆಂಡ್, ವಿಖಾಯ ನಾಯಕರಿಂದ ತರಗತಿ ನಡೆಯಲಿದೆ.
ಈ ಸಮ್ಮೇಳನದ ಎಲ್ಲಾ ಪೂರ್ವಭಾವಿ ಸಿದ್ಧತೆಗಳು ‘ಸಮಸ್ತ’ ದ ನಾಯಕರ ಮಾರ್ಗದರ್ಶನದಲ್ಲಿ ಈಗಾಗಲೇ ಪೂರ್ಣಗೊಂಡಿದ್ದು, ಎರಡು ತಿಂಗಳ ಹಿಂದೆ ಬೆಂಗಳೂರಿನಲ್ಲಿ ರಚಿಸಲಾದ ಸ್ವಾಗತ ಸಮಿತಿಯು ನಿರಂತರವಾಗಿ ಸಮ್ಮೇಳನದ ಯಶಸ್ವಿಗಾಗಿ ತೊಡಗಿಸಿ ಕೊಂಡಿದೆ. ಕಲ್ಲಿಕೋಟೆ ವರಕ್ಕಲ್ ಮಖಾಂ ನಿಂದ ಪಾಣಕ್ಕಾಡ್ ಸಯ್ಯಿದ್ ಸಾಬಿಖಲಿ ಶಿಹಾಬ್ ತಂಙಳ್ ರವರ ನೇತೃತ್ವದಲ್ಲಿ ಧ್ವಜ ವಾಹಕ ಯಾತ್ರೆ ಬೆಂಗಳೂರು ವರೆಗೆ ಪ್ರಚಾರ ಕಾರ್ಯವನ್ನು ನಡೆಸಿದರೆ, ಕಾಸರಗೋಡು ಮಾಲಿಕುದ್ದಿನಾರ್ ದರ್ಗಾ ವಠಾರದಿಂದ ಮತ್ತೊಂದು ವಾಹನಾ ಪ್ರಚಾರ ರ್‍ಯಾಲಿಯು ಬಂಬ್ರಾಣ ಉಸ್ತಾದ್ ರವರ ನೇತೃತ್ವದಲ್ಲಿ ಜನವರಿ 25 ರಂದು ದ.ಕ.ಜಿಲ್ಲೆಯಲ್ಲಿ ಸಂಚರಿಸಿ ಬೆಂಗಳೂರಿಗೆ ತೆರಳಿ ತವಕ್ಕಲ್ ಮಸ್ತಾನ್ ದರ್ಗಾ ಝಿಯಾರತ್ ನೊಂದಿಗೆ ಸಮಾರೋಪಗೊಳ್ಳಲಿದೆ.
ಕಳೆದ ಜನವರಿ 19 ರಂದು ಮಸೀದಿ ಮೊಹಲ್ಲಾಗಳನ್ನು ಕೇಂದ್ರಿಕರಿಸಿ ‘ಸಮಸ್ತ” ಧ್ವಜ ದಿನಾಚರಣೆ ಆ ನಂತರ ಮದ್ರಸಗಳನ್ನು ಕೇಂದ್ರೀಕರಿಸಿ ವಿದ್ಯಾರ್ಥಿಗಳ ಅಸೆಂಬ್ಲಿ ನಡೆಸಿ ಪ್ರಚಾರ ನಡೆಸಲಾಗಿದೆ, ಅದೇರೀತಿ ಜಿಲ್ಲೆ , ವಲಯ, ರೇಂಜ್ ಮಟ್ಟಗಳಲ್ಲಿ ಸ್ವಾಗತ ಸಮಿತಿಗಳನ್ನು ರಚಿಸಿ ವಿಭಿನ್ನ ರೀತಿಯ ಪ್ರಚಾರ ಕಾರ್ಯಕ್ರಮ ಗಳನ್ನು ನಡೆಸಿದ್ದು, ದ.ಕ.ಜಿಲ್ಲೆಯಿಂದ ಸಹಸ್ರಾರು ಮಂದಿ ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಸ್ತ’ ಕೇಂದ್ರ ಮುಶಾವರ ಸದಸ್ಯರು ಹಾಗೂ ದ.ಕ.ಜಿಲ್ಲಾ ಸ್ವಾಗತ ಸಮಿತಿ ಜನರಲ್ ಕನ್ವೀನರ್ ಕೆ.ಎಂ.ಉಸ್ಮಾನುಲ್ ಫೈಝಿ ತೋಡಾರ್, ದ.ಕ.ಜಿಲ್ಲಾ ‘ಸಮಸ್ತ’ ಸ್ವಾಗತ ಸಮಿತಿ ಉಪಾಧ್ಯಕ್ಷ ಅಬ್ದುರ್ರಶೀದ್ ಹಾಜಿ ಪರ್ಲಡ್ಕ, ದ.ಕ.ಜಿಲ್ಲಾ ‘ಸಮಸ್ತ’ ಸ್ವಾಗತ ಸಮಿತಿ ಮಾಧ್ಯಮ ವಿಭಾಗದ ಅಧ್ಯಕ್ಷ ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ದ.ಕ.ಜಿಲ್ಲಾ ‘ಸಮಸ್ತ’ ಸ್ವಾಗತ ಸಮಿತಿ ಮಾಧ್ಯಮ ವಿಭಾಗದ ಕನ್ವೀನರ್ ಕೆ.ಎಂ.ಎ.ಕೊಡುಂಗಾಯಿ,
ದ.ಕ.ಜಿಲ್ಲಾ ಸ್ವಾಗತ ಸಮಿತಿ ಪ್ರಚಾರ ವಿಭಾಗದ ಕೋರ್ಡಿನೇಟರ್ ಮುಫತ್ತಿಷ್ ಉಮರ್ ದಾರಿಮಿ ಉಪಸ್ಥಿತರಿದ್ದರು.