ಡೈಲಿ ವಾರ್ತೆ: 24/Jan/2024

ಬೋಳಂಗಡಿ : ಅಮ್ಮ ಸ್ವೀಟ್ಸ್ ಸೇವಾ ಟ್ರಸ್ಟ್ ವತಿಯಿಂದ ವಿಕಲಚೇತನ ಮಕ್ಕಳಿಗೆ ಸಹಾಯಧನ ವಿತರಣೆ

ಬಂಟ್ವಾಳ : ಪಾಣೆಮಂಗಳೂರು ಸಮೀಪದ ಬೋಳಂಗಡಿಯ ಅಮ್ಮ ಸ್ವೀಟ್ಸ್ ಸೇವಾ ಟ್ರಸ್ಟ್ ಇದರ 15 ನೇ ವಾರ್ಷಿಕೋತ್ಸವದ ಪ್ರಯುಕ್ತ ವಿಕಲಚೇತನ ಮಕ್ಕಳಿಗೆ ಸಹಾಯಧನ ವಿತರಣಾ ಕಾರ್ಯಕ್ರಮ ಬೋಳಂಗಡಿ ಅಮ್ಮ ಸ್ವೀಟ್ಸ್ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಮಾತನಾಡಿ, ಅಮ್ಮ ಸ್ವೀಟ್ಸ್ ನ ದಿನದ ವ್ಯವಹಾರದಲ್ಲಿ ರೂಪಾಯಿ 350 ರಂತೆ ಉಳಿಸಿ ವಾರ್ಷಿಕ ಸುಮಾರು 1.30 ಲಕ್ಷದಷ್ಟು ಹಣವನ್ನು ಜಾತಿ ಮತ ಭೇದವಿಲ್ಲದೆ ಬೇಡ ರೋಗಿಗಳಿಗೆ ನೆರವು ನೀಡುತ್ತಿರುವ ಜನಾರ್ದನ ಅವರ ಸೇವೆ ಶ್ಲಾಘನೀಯವಾಗಿದೆ ಎಂದರು.

ಅಮ್ಮ ಸ್ವೀಟ್ಸ್ ನ ಮಾಲಕ ಜನಾರ್ದನ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಇದೇ ವೇಳೆ 13 ವಿಕಲಚೇತನರಿಗೆ ವೀಲ್ ಚೇರ್ ಹಾಗೂ ಸಹಾಯಧನ ವಿತರಿಸಲಾಯಿತು.

ಕಲ್ಲಡ್ಕ ಕೆ.ಎನ್. ಬೇಕರಿ ಮಾಲಕ ಕೆ.ಎನ್.ನವಾಝ್, ಎಂ.ಎನ್. ಕುಮಾರ್ ಮೆಲ್ಕಾರ್, ಶಿವಾನಂದ ಬೋಳಂಗಡಿ, ಸುರೇಶ್ ಕುಲಾಲ್ ಮೆಲ್ಕಾರ್ ಅತಿಥಿಗಳಾಗಿ ಭಾಗವಹಿಸಿದ್ದರು.

ನಿತಿನ್ ಶೆಟ್ಟಿ ಶಂಭೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.