ಡೈಲಿ ವಾರ್ತೆ: 25/Jan/2024

ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ಘಟಕದಿಂದ ಸಾಹಿತ್ಯ ಪ್ರೇರಣೆ

ಕೋಟ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾವಡಿ ಇಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ಘಟಕದಿಂದ ಸಂಪನ್ಮೂಲ ವ್ಯಕ್ತಿಗಳಿಂದ ನಡೆಯಲ್ಪಟ್ಟಿತು. ಕಲಿಕೆಯ ಜೊತೆಯಲ್ಲಿ ಸಾಹಿತ್ಯ ಜೀವನ ಮಾರ್ಗದರ್ಶನ ನೀಡುತ್ತದೆ ಎಂದು ಬ್ರಹ್ಮಾವರ ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ್ ಅವರು ಚಟುವಟಿಕೆಗಳ ಮೂಲಕ ವಿವರಿಸಿದರು.

ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗಳವರು ಚಟುವಟಿಕೆ ಆಧಾರಿತ ಪ್ರೇರಣೆ ನೀಡಿದರು. ನಾಗೇಶ್ ಮಯ್ಯ ಅವರು ಕಥೆ ಕವನ ರಚನೆಯ ಬಗ್ಗೆ ತಿಳಿಸಿದರು.
ಅಚ್ಚುತ ಪೂಜಾರಿಯವರು ಕನ್ನಡ ಗೀತೆ ಹಾಡಿ ಮಾರ್ಗದರ್ಶನ ನೀಡಿದರು.

ನರಸಿಂಹಮೂರ್ತಿಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಶಿಕ್ಷಕಿ ಉಷಾ ಅವರು ಸ್ವಾಗತಿಸಿ ಕಾರ್ಯಕ್ರಮದ ಪರವಾಗಿ ಧನ್ಯವಾದ ನೀಡಿದರು.