ಡೈಲಿ ವಾರ್ತೆ: 29/Jan/2024

ಗೂಗಲ್ ಮ್ಯಾಪ್ ಬಳಸಿ ಕಾರು ಚಾಲಕನ ಅವಾಂತರ: ರಸ್ತೆ ಬಿಟ್ಟು ಗುಡ್ಡದ ಮೇಲೆ ಚಲಿಸಿದ ಕಾರು!

ತಮಿಳುನಾಡು: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಗೂಗಲ್ ಮ್ಯಾಪ್ ಬಳಸಿ ಸಂಚರಿಸುವುದು ಕಾಮನ್ ಆಗಿ ಬಿಟ್ಟಿದೆ. ಈಗಿನ ವಾಹನಗಳಲ್ಲಿ ಗೂಗಲ್ ಮ್ಯಾಪ್ ತಂತ್ರಜ್ಞಾನವನ್ನು ಅಳವಡಿಲಾಗಿದೆ ಹಾಗಾಗಿ ಯಾವುದೇ ಗೊತ್ತಿಲ್ಲದ ಊರಿಗೆ ಹೋಗುವುದಾದರೂ ಗೂಗಲ್ ಮ್ಯಾಪ್ ತೋರಿಸಿದ ಮಾರ್ಗದ ಮೂಲಕ ಸುಲಭ ರೀತಿಯಲ್ಲಿ ಪ್ರಯಾಣಿಕರು ಸಾಗುತ್ತಾರೆ. ಆದರೆ ಇಲ್ಲೊಬ್ಬ ಕಾರು ಚಾಲಕ ಗೂಗಲ್ ಮ್ಯಾಪ್ ಬಳಸಿ ಸುಲಭ ಮಾರ್ಗ ಬಳಸಲು ಹೋಗಿ ತಗಲಾಕೊಂಡ್ಡಿದ್ದಾನೆ.

ಹೌದು ಕರ್ನಾಟಕದ ತಂಡವೊಂದು ವೀಕೆಂಡ್ ಗೆ ತಿರುಗಾಡಲು ತಮ್ಮ ಕಾರಿನಲ್ಲಿ ತಮಿಳುನಾಡಿನ ಊಟಿಗೆ ತೆರಳಿದೆ. ಬಳಿಕ ಅಲ್ಲಿ ಸುತ್ತಾಡಿ ವಾಪಸು ಊರಿಗೆ ಹೊರಟಿದೆ ಈ ವೇಳೆ ಕಾರು ಚಾಲಕ ಗೂಗಲ್ ಮ್ಯಾಪ್ ಬಳಸಿ ವೇಗದ ಮಾರ್ಗವನ್ನು ಬಳಸಿಕೊಂಡು ಕರ್ನಾಟಕಕ್ಕೆ ಹೊರಟಿದ್ದಾನೆ ಅದರಂತೆ ಗೂಗಲ್ ಮ್ಯಾಪ್ ತೋರಿಸಿದ ಶಾರ್ಟ್ ಕಟ್ ಮಾರ್ಗದಲ್ಲೇ ಬಂದು ಸೀದಾ ತಮಿಳುನಾಡಿನ ಗುಡಲೂರು ಗುಡ್ಡದ ಮೇಲೆ ಹೋಗಿ ನಿಂತಿದೆ, ಎದುರು ನೋಡಿದರೆ ರಸ್ತೆ ಇಲ್ಲ ಬದಲಾಗಿ ಇರುವುದು ಮೆಟ್ಟಿಲು, ಕಾರು ಚಾಲಕನ ವೇಗಕ್ಕೆ ಮೆಟ್ಟಿಲ ಮಾರ್ಗದಲ್ಲೇ ಕಾರು ಚಾಲನೆ ಮಾಡಿ ಅರ್ಧ ದಾರಿಯಲ್ಲಿ ಕಾರು ಸಿಲುಕಿಕೊಂಡಿದೆ.
ಹಿಂದೆಯೂ ಹೋಗದೆ ಮುಂದೆಯೂ ಹೋಗದೆ ಮೆಟ್ಟಿಲುಗಳಲ್ಲಿ ಕಾರು ಸಿಲುಕಿದ್ದು ಬಳಿಕ ಸಾರ್ವಜನಿಕರು ಹಾಗೂ ಪೊಲೀಸರ ಸಹಕಾರದಿಂದ ಕಾರನ್ನು ಮುಖ್ಯ ರಸ್ತೆಗೆ ತರಲು ಸಹಕರಿಸಲಾಯಿತು.
ಗೂಗಲ್ ಮ್ಯಾಪ್ ಬಳಸಿ ಅದೆಷ್ಟೋ ಮಂದಿ ದಾರಿ ತಪ್ಪಿ ಕಾರು ಹೊಳೆಗೆ ಬಿದ್ದ ಘಟನೆ, ಜೊತೆಗೆ ದಾರಿ ತಪ್ಪಿ ಬೇರೆ ಎಲ್ಲೋ ಹೋಗಿರುವ ಅದೆಷ್ಟೋ ಘಟನೆಗಳನ್ನು ನಾವು ಕೇಳಿದ್ದೇವೆ ಅದಕ್ಕೆ ಇದ್ದೊಂದು ಸೇರ್ಪಡೆ.