ಡೈಲಿ ವಾರ್ತೆ: 05/Feb/2024

ಶ್ರೀ ವರಬ್ರಹ್ಮ, ಶ್ರೀ ಸ್ವರ್ಣ ಯಕ್ಷಿ, ನಾಗದೇವತೆ, ಸ- ಪರಿವಾರ ದೇವಸ್ಥಾನ ಕರಗುಡಿ-ಮೊಳಹಳ್ಳಿ : ಪೂರ್ವಭಾವಿ ಸಭೆ…!’

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ 400 ವರ್ಷಗಳ ಇತಿಹಾಸವಿರುವ ಮೊಳಹಳ್ಳಿ ಕರುಗುಡಿ ದೇಗುಲದ 2024 ಸಾಲಿನ ವಾರ್ಷಿಕ ಜಾತ್ರಾ ಮಹೋತ್ಸವ ಫೆಬ್ರವರಿ 28/02/2024 ಬುಧವಾರ ಮತ್ತು 29/02/2024 ಗುರುವಾರ ರಂದು ವಿಶೇಷವಾಗಿ ಜರುಗಲಿದೆ.

ಅದೇ ಪ್ರಯುಕ್ತ,
ದಿನಾಂಕ 11/02/2024 ಭಾನುವಾರ ಸಂಜೆ 3.30 ಯಕ್ಷಮ್ಮ ದೇಗುಲದ ಆವರಣದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆಯನ್ನ ಕರೆಯಲಾಗಿದೆ. ಭಕ್ತಾಭಿಮಾನಿಗಳು ಕುಟುಂಬದವರು ಮನೆಗೊಬ್ಬರಂತೆ ಸಭೆಯಲ್ಲಿ ಹಾಜರಾಗಿ ದೇಗುಲದ ವಿಚಾರ ವಿನಿಮಯ ಮಾಡಲಾಗುತ್ತದೆ. ಅದೇ ರೀತಿ ಅನ್ನದಾನ ಸೇವೆ, ಹೂವಿನ ಅಲಂಕಾರ, ಡಮರುಗ ಸೇವೆ,ಬೆಳಕಿನ ಅಲಂಕಾರ, ಶಾಮಿಯಾನ, ಗೆಂಡದ ಕೊಂಡದ ನವೀಕರಣ ಬಗ್ಗೆ ಅದೇ ಸಭೆಯಲ್ಲಿ ಚರ್ಚಿಸಲಾಗುತ್ತಿದೆ. ಸಂಬಂಧಪಟ್ಟಂತಹ ಕುಟುಂಬಸ್ಥರು ಕಡ್ಡಾಯವಾಗಿ ಸಭೆಯಲ್ಲಿ ಹಾಜರಿದ್ದು, ಜಾತ್ರೆ ಪ್ರಯುಕ್ತ ಮಾಹಿತಿಯನ್ನು ಪಡೆದುಕೊಳ್ಳಬೇಕಾಗಿ ವಿನಂತಿ. ಅಧ್ಯಕ್ಷರು ಮತ್ತು ಸಮಸ್ತ ಪದಾಧಿಕಾರಿಗಳು, ಅರ್ಚಕರು, ವರಬ್ರಹ್ಮ -ಸ್ವರ್ಣ ಯಕ್ಷಿ -ನಾಗದೇವತೆ ಸ. ಪರಿವಾರ ದೇವಸ್ಥಾನ ಕರಗುಡಿ, ಮೊಳಹಳ್ಳಿ ಕುಂದಾಪುರ ತಾಲೂಕು ಇವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.