


ಡೈಲಿ ವಾರ್ತೆ: 06/Feb/2024


ಫರಂಗಿಪೇಟೆ : ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿ ಅಬ್ದುಲ್ ಜಬ್ಬಾರ್ ಮಾರಿಪಳ್ಳ ಪುನರಾಯ್ಕೆ

ಬಂಟ್ವಾಳ : ಫರಂಗಿಪೇಟೆ ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ರಿ. ಇದರ 2024 – 25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಬ್ದುಲ್ ಜಬ್ಬಾರ್ ಮಾರಿಪಳ್ಳ ಪುನರಾಯ್ಕೆಗೊಂಡಿದ್ದಾರೆ.
ಬಿ.ಸಿ ರೋಡ್ – ತಲಪಾಡಿಯ ಡೈಮಂಡ್ ಕ್ಯಾಂಪಸ್ ನಲ್ಲಿ ನಡೆದ ಟ್ರಸ್ಟ್ ನ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಮಹಾಸಭೆಯ ಅದ್ಯಕ್ಷತೆ ವಹಿಸಿದ್ದ ಟ್ರಸ್ಟ್ ನ ಸಲಹೆಗಾರ ಹನೀಫ್ ಖಾನ್ ಕೊಡಾಜೆ ಮಾತನಾಡಿ ಕಳೆದ 11 ವರ್ಷಗಳಿಂದ ಸಂಸ್ಥೆಯು ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯಗಳನ್ನು ಒದಗಿಸುತ್ತಾ ಬಂದಿದೆ. ಅಲ್ಲದೇ ಹಿಜಾಮ, ಬೃಹತ್ ರಕ್ತದಾನ ಶಿಬಿರ, ಡ್ರಗ್ಸ್ ಮುಕ್ತ ಜನ ಜಾಗೃತಿ ಅಭಿಯಾನದಂತಹ ಕಾರ್ಯಕ್ರಮಗಳಲ್ಲಿ ಯಶಸ್ವಿಯನ್ನು ಕಂಡಿರುವುದು ಶ್ಲಾಘನೀಯ ಎಂದರು. ಟ್ರಸ್ಟ್ ಸದಸ್ಯ ರಝಾಕ್ ಬಲ್ಲಾಳ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಗೌರವಾಧ್ಯಕ್ಷರಾಗಿ ಎಸ್.ಎಂ ಬಾಷ, ಸಲಹಾ ಸಮಿತಿ ಸದಸ್ಯರಾಗಿ ಹನೀಫ್ ಖಾನ್ ಕೋಡಾಜೆ, ಅಬ್ದುಲ್ ಖಾದರ್ ಅರಫಾ, ಶಬೀರ್ ಕೆಂಪಿ ಅವರನ್ನು ಆರಿಸಲಾಯಿತು.
ಉಪಾಧ್ಯಕ್ಷರಾಗಿ ಅಬ್ದುಲ್ ಲತೀಫ್ ಅರಫಾ, ರಝಾಕ್ ಬಲ್ಲಾಳ್, ಪ್ರಧಾನ ಕಾರ್ಯದರ್ಶಿಯಾಗಿ ಡೈಮಂಡ್ ಅಲ್ತಾಫ್ ಫರಂಗಿಪೇಟೆ, ಜೊತೆ ಕಾರ್ಯದರ್ಶಿಯಾಗಿ ಮಲಿಕ್ ಕುಂಪನಮಜಲು, ಆರೋಗ್ಯ ವಿಭಾಗದ ಕಾರ್ಯದರ್ಶಿಯಾಗಿ ಹಾಶೀರ್ ಪೇರಿಮಾರ್, ಶಿಕ್ಷಣ ವಿಭಾಗದ ಕಾರ್ಯದರ್ಶಿಯಾಗಿ ಇಕ್ಬಾಲ್ ಅರಫಾ, ಕ್ರೀಡಾ ವಿಭಾಗ ಕಾರ್ಯದರ್ಶಿಯಾಗಿ ಗಪೂರ್ ಹಸನ್ ಪುಂಚಮೆ, ಮೂಲ ಸೌಕರ್ಯ ವಿಭಾಗದ ಕಾರ್ಯದರ್ಶಿಯಾಗಿ ಇಮ್ರಾನ್ ಮಾರಿಪಳ್ಳ, ಕೋಶಾಧಿಕಾರಿಯಾಗಿ ಮುಸ್ತಫ ಮೇಲ್ಮನೆ, ಸಂಘಟನಾ ಕಾರ್ಯದರ್ಶಿಯಾಗಿ ಸಲಾಂ ಸುಜೀರ್, ಸಂಚಾಲಕರಾಗಿ ಅಸೀಫ್ ಬಜಾಲ್ ಆಯ್ಕೆಯಾದರು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅಸೀಫ್ ಮೇಲ್ಮನೆ, ಶಾಹುಲ್ ಹಮೀದ್, ಹಕೀಂ ಮಾರಿಪಳ್ಳ, ಹರ್ಷದ್ ವಳವೂರು, ಜಾಫರ್ ಟಿ.ಎಚ್, ಅಶ್ರಫ್ ಮಲ್ಲಿ, ಅನೀಸ್ ಮಾರಿಪಳ್ಳ, ರಿಯಾಝ್ ಕುಂಪನಮಜಲು ಅವರನ್ನು ಆರಿಸಲಾಯಿತು.
ಹಾಶೀರ್ ಪೇರಿಮಾರ್ ಸ್ವಾಗತಿಸಿ, ಸಲಾಂ ಸುಜೀರ್ ವಾರ್ಷಿಕ ವರದಿ ವಾಚಿಸಿದರು, ಡೈಮಂಡ್ ಅಲ್ತಾಫ್ ವಂದಿಸಿದರು.