



ಡೈಲಿ ವಾರ್ತೆ: 07/Feb/2024


ಕೋಟ: ಫೆ. 11, 12 ರಂದು ಉಡುಪ ಸಂಸ್ಮರಣೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ಮನೆಯಲ್ಲಿ ಕಲೋತ್ಸವ

ಕೋಟ: ಸಾಲಿಗ್ರಾಮ ಮಕ್ಕಳ ಮೇಳ (ರಿ) ಕೋಟ ಹಾಗೂ ಪಟೇಲರ ಮನೆ ಕೋಟ ಇದರ ಆಯೋಜನೆಯಲ್ಲಿ ಪೆಬ್ರವರಿ 11 ಮತ್ತು 12 ರಂದು ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣೆ ಪ್ರಶಸ್ತಿ ಪ್ರದಾನ ಹಾಗೂ ಎರಡು ದಿನಗಳ ಕಲೋತ್ಸವ ಕಾರ್ಯಕ್ರಮವು ಕೋಟ ಪಟೇಲರ ಮನೆಯ ಆವರಣದಲ್ಲಿ ನಡೆಯಲಿದೆ.
ಎರಡು ದಿವಸ ಬೇರೆ ಬೇರೆ ನಿಗದಿತ ಸಮಯದಲ್ಲಿ ನಿನಾದ- ಲಘು ಸಂಗೀತ, ನೃತ್ಯ ಸಂಭ್ರಮ, ಪೆರ್ಡೂರು ಮೇಳದ ಯಕ್ಷಗಾನ ಬಯಲಾಟ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಯೋಜಕರು ಪ್ರಕಟಿಸಿದ್ದಾರೆ.