



ಡೈಲಿ ವಾರ್ತೆ: 08/Feb/2024


ಮಾದಕ ವಸ್ತುಗಳ (ಎಂಡಿಎಂಎ) ಮಾರಾಟ – ಬಂಟ್ವಾಳ ಪೊಲೀಸರ ಕಾರ್ಯಾಚರಣೆ ಇಬ್ಬರ ಬಂಧನ ಓರ್ವ ಪರಾರಿ
ಬಂಟ್ವಾಳ : ಮಾದಕ ವಸ್ತುಗಳ (ಎಂಡಿಎಂಎ) ಮಾರಾಟ ಮಾಡಲು ಬೈಕಿನಲ್ಲಿ ತೆರಳುತ್ತಿದ್ದ ಮೂವರ ಪೈಕಿ ಇಬ್ಬರನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬ್ರಹ್ಮರಕೊಟ್ಲು ಎಂಬಲ್ಲಿ ಬಂಧಿಸಿದ್ದು ಇನ್ನೋರ್ವ ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ.
ಮಂಚಿ ಗ್ರಾಮದ ನಿವಾಸಿ ಅಬ್ದುಲ್ ರಹೀಜ್ , ದಾವುದುಲ್ ಅಮೀರ್ ಮಂಚಿ ಬಂಧಿತರಾಗಿದ್ದು ಇನ್ನೋರ್ವ ಆರೋಪಿ ಬಂಟ್ವಾಳ ನಿವಾಸಿ ನಝೀರ್ ಎಂಬಾತ ಪರಾರಿಯಾಗಿದ್ದಾನೆ ,
ಬಂಧಿತರಿಂದ ಸುಮಾರು 4 ಸಾವಿರ ರೂ ಮೌಲ್ಯದ 4 ಗ್ರಾಂ 04 ಮಿ.ಗ್ರಾಂ ತೂಕದ ನಿದ್ರಾಜನಕ ಎಂಡಿಎಂಎ ಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಟ್ವಾಳ ನಗರ ಠಾಣಾಧಿಕಾರಿ ರಾಮಕೃಷ್ಣ ನೇತ್ರತ್ವದ ತಂಡ ಬ್ರಹ್ಮರಕೋಟ್ಲು ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿರುವ ವೇಳೆ ನಂಬರ್ ಪ್ಲೇಟ್ ಇಲ್ಲದೆ ತ್ರಿಬಲ್ ರೈಡಿನಲ್ಲಿ ಬರುತ್ತಿದ್ದ ದ್ಬಿಚಕ್ರವಾಹನವೊಂದನ್ನು ನಿಲ್ಲಿಸಿ ಎಂದು ಸೂಚನೆ ನೀಡಿದಾಗ ಅದರಲ್ಲಿ ಓರ್ವ ಹಾರಿ ಪರಾರಿಯಾಗಿದ್ದ.
ಈ ಸಂದರ್ಭದಲ್ಲಿ ಸಂಶಯಗೊಂಡ ಎಸ್.ಐ. ಉಳಿದ ಇಬ್ಬರನ್ನು ವಿಚಾರಣೆ ನಡೆಸಿ ದಾಗ ಇವರು ನಿದ್ರಾಜನಕ ಮಾದಕವಸ್ತು ವನ್ನು ಸೇವನೆ ಮಾಡಿರುವುದು ಗಮನಕ್ಕೆ ಬಂದಿದೆ. ವಾಹನ ತಪಾಸಣೆ ನಡೆಸಿದಾಗ ಅದರಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಇರಿಸಲಾಗಿದ್ದ ಮಾದಕವಸ್ತು ಕಂಡು ಬಂದಿದ್ದು ,ಇವರ ಮೇಲೆ ಪ್ರಕರಣ ದಾಖಲಿಸಲಾಗಿದೆ.