ಡೈಲಿ ವಾರ್ತೆ: 08/Feb/2024
ಸಾಲಿಗ್ರಾಮ: ಇಂದಿರಾ ಕ್ಯಾಂಟೀನ್ ಸ್ಥಳ ಪರಿಶೀಲನೆ, ಸೂಚನೆ
ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್ ರಚಿಸುವ ಕುರಿತಂತೆ ಕೋಟ ಬ್ಲಾಕ್ ಕಾಂಗ್ರೆಸ್ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿತು. ಅದರ ಅನುಷ್ಠಾನದ ಕುರಿತಂತೆ ಸರಕಾರ ಆದೇಶದ ಹೊರತಾಗಿಯೂ ಸ್ಥಳೀಯಾಡಳಿತ ಸ್ಥಳದ ನೆಪವೊಡ್ಡಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ವಿಘ್ನ ತಂದಿತ್ತು ಇದೀಗ ಪಟ್ಟಣ ಪಂಚಾಯತ್ ಆಡಳಿತಾಧಿಕಾರಿ ಬ್ರಹ್ಮಾವರ ತಹಶಿಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆಗೆ ಕೋಟ ಬ್ಲಾಕ್ ಕಾಂಗ್ರೆಸ್ ಶೀಘ್ರ ಅನುಷ್ಠಾನಕ್ಕೆ ಸ್ಥಳ ಪರಿಶೀಲಿಸಿ ನಿರ್ಮಾಣಕ್ಕೆ ಮನವಿ ಸಲ್ಲಿಸಿ ಎರಡೆ ದಿನದಲ್ಲೆ ಸ್ಥಳ ಪರಿಶೀಲನೆಗೆ ತಹಶಿಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ ಗುರುವಾರ ಭೇಟಿ ನೀಡಿದ್ದು ಸಾಲಿಗ್ರಾಮ ಮುಖ್ಯ ಪೇಟೆಯ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಶೌಚಾಲಯವನ್ನು ಆಯ್ಕೆಗೊಳಿಸಿ ಅದಕ್ಕೆ ಬೇಕಾದ ತಯಾರಿಗಳನ್ನು ಮಾಡಿಕೊಳ್ಳಲು ಸ್ಥಳೀಯ ಪಟ್ಟಣ ಪಂಚಾಯತ್ ಮುಖಾಧಿಕಾರಿ ಶಿವ ಎಸ್ ನಾಯ್ಕ್ ರವರಿಗೆ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಕೋಟ ಹೋಬಳಿ ಕಂದಾಯ ಅಧಿಕಾರಿ ಮಂಜು ಬಿಲ್ಲವ, ಸಾಲಿಗ್ರಾಮ ವಿ.ಎ ಹರೀಶ್, ಸಾಲಿಗ್ರಾಮ ಪಟ್ಟಣಪಂಚಾಯತ್ ವಿಪಕ್ಷ ನಾಯಕ ಶ್ರೀನಿವಾಸ್ ಅಮೀನ್,ಪಟ್ಟಣಪಂಚಾಯತ್ ಸದಸ್ಯರಾದ ರವೀಂದ್ರ ಕಾಮತ್, ಪುನಿತ್ ಪೂಜಾರಿ, ಕಾಂಗ್ರೆಸ್ ಮುಖಂಡರಾದ ಗಣೇಶ್ ನೆಲ್ಲಿಬೆಟ್ಟು, ರತ್ನಾಕರ್ ಶ್ರೀಯಾನ್, ಲೆಕ್ಕಸಹಾಯಕ ಮಂಜುನಾಥ ನಾಯರಿ ಇದ್ದರು.