ಡೈಲಿ ವಾರ್ತೆ: 13/Feb/2024

ಡೈಲಿ ವಾರ್ತೆ.
ವರದಿ: ಶಿವಾನಂದಸ್ವಾಮಿ ಆರ್.ಬಿದರಕುಂದಿ ದೊರೆ.

ಅಕ್ರಮ ಮಧ್ಯ ಮಾರಾಟ ತಡೆಗೆ ಅಗ್ರಹಿಸಿ ಸಾಮಾಜಿಕ ಹೋರಾಟಗಾರ ಅಶೋಕ್ ನಿಡಗುಂದಿ ಅವರಿಂದ ತಹಸೀಲ್ದಾರರಿಗೆ ಮನವಿ


ವಿಜಯಪುರ:13. ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಅಕ್ರಮ, ನಕಲಿ ಮದ್ಯವನ್ನು ಸೇವಿಸಿ ಒಂದು ವರ್ಷದಲ್ಲಿ ಸುಮಾರು 10 ಜನರು ಲೀವರ್ ಪೇಲಾಗಿ ಮೃತರಾಗಿದ್ದಾರೆ, ಇನ್ನೂ10 ಜನರು ಸಾವು ಬದುಕಿನ ಮಧ್ಯ ಹೋರಾಟ ನಡೆಸಿದ್ದಾರೆ. ಮೃತ ವ್ಯಕ್ತಿಗಳಿಗೆ ಮುಖ್ಯಮಂತ್ರಿ ನಿದಿಯಿಂದ 10 ಲಕ್ಷ ಪರಿಹಾರವನ್ನು ಘೋಷಣೆ ನೀಡಬೇಕು, ಸದ್ಯ ಅಕ್ರಮವಾಗಿ ಮಧ್ಯ ಮಾರಾಟ ಮಾಡುವರ ಮೇಲೆ ತುರ್ತು ಗತಿಯಲ್ಲಿ ಬಂದಿಸಿ ತನಿಖೆಗೆ ಒಳಪಡಿಸಬೇಕು ಎಂದು ತಂಗಡಗಿ ಗ್ರಾಮದ ಸಾಮಾಜಿಕ ಹೋರಾಟಗಾರ ಅಶೋಕ ನಿಡಗುಂದಿ ಸರಕಾರಕ್ಕೆ ಒತ್ತಾಯಿಸಿದರು.

ಪಟ್ಟಣದ ತಹಶಿಲ್ದಾರರ ಕಚೇರಿಯಲ್ಲಿ ಸೋಮವಾರ ಸಾಮಾಜಿಕ ಹೋರಾಟಗಾರ ಅಶೋಕ ನಿಡಗುಂದಿ ಅಕ್ರಮ ಮಧ್ಯ ಮಾರಾಟ ತಡೆಯಿಡಿಯಲು ಆಗ್ರಹಿಸಿ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದರು.

ಸುಮಾರು 15 ವರ್ಷಗಳಿಂದ ನಮ್ಮೂರಾದ ತಂಗಡಗಿಯಲ್ಲಿ ಅಕ್ರಮ , ನಕಲಿ ಮಧ್ಯ ಮಾರಾಟವನ್ನು ತಡೆಹಿಡಿಯಲು ಸಾಕಷ್ಟು ಬಾರಿ ಸಂಭಂದಿಸಿದ ತಾಲೂಕಿನ ಅಧಿಕಾರಿಗಳನ್ನು ಹಿಡಿದುಕೊಂಡು ಬೆಂಗಳೂರಿನ ಶಾಂತಿನಗರದಲ್ಲಿರುವ ಅಬಕಾರಿ ಇಲಾಖೆಗೆ ಮನವಿಯನ್ನು ಸಲ್ಲಿಸಿದರು. ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದೇ ಇರುವದು ದುರಂತ ಎಂದು ಅವರು ಗ್ರಾಮೀಣ ಪ್ರದೇಶಗಳಲ್ಲಿ ಮಧ್ಯ ಮಾರಾಟ ಮಾಡಬಾರದು ಎಂದು ನಿಯಮ ಇದೆ ಎಂದು ಹೇಳುತ್ತಾರೆ, ಅದರೆ ನಮ್ಮೂರಿಗೆ ಪಟ್ಟಣದಿಂದ ಬೈಕ್ ಮುಖಾಂತರ ಮಧ್ಯ ಮಾರಾಟವನ್ನು ಮಾಡುವ ಢಾಬಾಗಳಿಗೆ ಪೂರೈಸಲು ಬರುತ್ತಾರೆ, ಮಧ್ಯದಿಂದ ಸರಕಾರಕ್ಕೆ ಲಾಭ ಇದೆ ಎನ್ನುವದಾದರೇ ಜನರ ಜೀವನ ಹಾಳಾಗುವದಕ್ಕೆ ಸರಕಾರವೇ ನೇರ ಕಾರಣ,ಎಂದು ಆಕ್ರೋಶ ವ್ಯಕ್ತಪಡಿಸಿ ಒಂದು ವರ್ಷದಲ್ಲಿ ಅಕ್ರಮ , ನಕಲಿ ಮಧ್ಯ ಕುಡಿದು ಮೃತರಾದವರ ಹೆಸರನ್ನು ಬಹಿರಂಗ ಪಡಿಸಿದರು. ಮುತ್ತಪ್ಪ ಮಂಕಣಿ, ರಾಜಶೇಖರ ಪಿಚಗಲ್, ಶೇಖಪ್ಪ ಸಜ್ಜನ, ಪ್ರವೀಣ ಮಂಕಣಿ, ರಾಜಪ್ಪ ಚಲವಾದಿ, ಗುರಸಂಗಪ್ಪಗೌಡ ಗರಸಂಗಿ, ಚನ್ನಪ್ಪ ಉಂಡಿ, ಶರಣಯ್ಯಾ ಸರಗಣಾಚಾರಿ, ಗುರುಸಿದ್ದಯ್ಯಾ ಪರುತಮಠ, ಸಂಗಪ್ಪ ಇಸ್ಲಾಂಪುರ ಇವರೇಲ್ಲರು ಅಕ್ರಮ ಮಧ್ಯ ಸೇವನೆ ಮಾಡಿ ಲೀವರ ಸಮಸ್ಯೆಯಿಂದ ಬಳಲಿ ಮೃತರಾದರು ಎಂದು ಮತ್ತೋಮ್ಮ ಆರೋಪ ಮಾಡಿದರು.