ಡೈಲಿ ವಾರ್ತೆ: 13/Feb/2024

ಡೈಲಿ ವಾರ್ತೆ.
ವರದಿ: ಶಿವಾನಂದಸ್ವಾಮಿ ಆರ್.ಬಿದರಕುಂದಿ ದೊರೆ.

ಕರ್ನಾಟಕ ಪರಿಶಿಷ್ಟ ಜಾತಿ, ವಾಲ್ಮೀಕಿ ರಾಜ್ಯ ಯುವ ಘಟಕದಿಂದ ಜಿಲ್ಲಾ ಘಟಕದ ಪದಾಧಿಕಾರಿಗಳ ನೇಮಕ


ವಿಜಯಪುರ:ಫೆ.13. ಸಂಘಟನೆಗಳು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ಶ್ರಮವಹಿಸಬೇಕು, ನಮ್ಮ ಸಮುದಾಯದ ಸಂಘಟನೆಗಳು ಸಾಕಷ್ಟು ಇರಬಹುದು. ಆದರೆ ನೊಂದವರ ಧ್ವನಿಯಾಗಿ ಕರ್ನಾಟಕ ಪರಿಶಿಷ್ಟ ಜಾತಿ, ವಾಲ್ಮೀಕಿ ಯುವ ಘಟಕ ಕೆಲಸ ಮಾಡುತ್ತಿದೆ ಎಂದು ಸಂಘಟನೆಯ ರಾಜ್ಯ ಯುವ ಘಟಕದ ಅಧ್ಯಕ್ಷ ಮಹೇಶ ಶೀಗಿಹಳ್ಳಿ ಹೇಳಿದರು.

ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ, ವಾಲ್ಮೀಕಿ ರಾಜ್ಯ ಯುವ ಘಟಕದಿಂದ ಜಿಲ್ಲಾ ಘಟಕದ ಪದಾಧಿಕಾರಿಗಳ ನೇಮಕ ಸಭೆಯಲ್ಲಿ ಮಾತನಾಡಿದ ಅವರು ನೊಂದವರ ಪರವಾಗಿ ಕೆಲಸ ಮಾಡಬೇಕು, ಸಂಘಟನೆಗಳು ನಿಂತು ನೀರಾಗದೆ ನಿರಂತರವಾಗಿ ಕಾರ್ಯ ಮಾಡುತ್ತಿರಬೇಕು, ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವರ ಪರವಾಗಿ ನಿಲ್ಲಬೇಕು ಎಂದರು.

ನಂತರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ನೇಮಕಗೊಂಡ ಅಂಬರೇಶ ಉಪ್ಪಲದಿನ್ನಿ ಮಾತನಾಡಿ ನೂತನವಾಗಿ ನಮ್ಮ ಜಿಲ್ಲೆಯಲ್ಲಿ ಸಂಘಟನೆಯನ್ನು ಮಾಡಲು ಪ್ರಾರಂಬಿಸಿದ್ದೇವೆ, ರಾಜ್ಯ ಯುವ ಘಟಕದ. ಅಣತಿಯಂತೆ ಈಗಾಗಲೇ ಪ್ರತಿಯೊಂದು ತಾಲೂಕಿನ ಅಧ್ಯಕ್ಷರನ್ನು ನೇಮಕ ಮಾಡಿಕೊಂಡಿದ್ದಾಗಿದೆ, ಇನ್ನೂ ಅನೇಕ ಭಾಗಗಳಲ್ಲಿ ಸಂಘಟನೆ ಕೆಲಸ ಚುರುಕಾಗಬೇಕಿದೆ , ಕೂಡಲೇ ಸಂಘಟಿತ ಆಯಾ ತಾಲ್ಲೂಕಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಂಘಟನೆ ಮಾಡಲು ತಯಾರಾಗಬೇಕು ಎಂದು ಕರೆ ನೀಡಿದರು.

ಇದಕ್ಕೂ ಮೊದಲು ಜಿಲ್ಲೆಯ ತಾಲೂಕಿನ ಅಧ್ಯಕ್ಷರುಗಳಿಗೆ ಆದೇಶ ಪತ್ರವನ್ನು ರಾಜ್ಯದ್ಯಕ್ಷರು ವಿತರಣೆ ಮಾಡಿದರು.
ಈ ಸಂಧರ್ಭದಲ್ಲಿ ಜಿಲ್ಲೆಯ ಉಪಾಧ್ಯಕ್ಷರಾಗಿ ರಾಮು ದಳವಾಯಿ, ಜಿಲ್ಲಾ ಕಾರ್ಯದರ್ಶಿಯಾಗಿ ಸಿದ್ದು ತಳಹಳ್ಳಿ,ಸಂಘಟನೆ ಕಾರ್ಯದರ್ಶಿ ಚಂದ್ರು ನಾಯಕಮಕ್ಕಳ, ಸಹ ಕಾರ್ಯದರ್ಶಿಯಾಗಿ ಪರಶುರಾಮ ದಳವಾಯಿ, ಮುದ್ದೇಬಿಹಾಳ ತಾಲ್ಲೂಕಿನ ಅಧ್ಯಕ್ಷರಾಗಿ ಸಂತೋಷ ನಾಯಕಮಕ್ಕಳ, ಉಪಾಧ್ಯಕ್ಷರಾಗಿ ಆನಂದ ದಡ್ಡೇನವರ, ಇಂಡಿ ತಾಲ್ಲೂಕಿನ ಅಧ್ಯಕ್ಷರಾಗಿ ನಾಗಪ್ಪ ನಾಯ್ಕೋಡಿ, ಸಿಂದಗಿ ಅಧ್ಯಕ್ಷರಾಗಿ ಯಮನಪ್ಪ ನಾಯ್ಕೋಡಿ, ಬ ಬಾಗೇವಾಡಿ ಅಧ್ಯಕ್ಷರಾಗಿ ರವಿ ನಾಯ್ಕೋಡಿ ನೇಮಕ ಮಾಡಲಾಯಿತು.