ಡೈಲಿ ವಾರ್ತೆ: 14/Feb/2024

ವರದಿ : ವಿದ್ಯಾಧರ ಮೊರಬಾ

ಸಹಕಾರ ಸಂಘವು ತನ್ನ ಕ್ಷೇತ್ರದ ಆರ್ಥಿಕ ಬೆಳವಣಿಗೆಗೆ ತನ್ನದೆ ಆದ ಕೊಡುಗೆ ನೀಡಿದೆ : ವಿನೋದ ನಾಯಕ

ಅಂಕೋಲಾ : ಇಂದಿನ ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಸಹಕಾರ ಸಂಘಗಳ ಪ್ರಧಾನ ಪಾತ್ರ ವಹಿಸುವ ಜತೆ ಸಹಕಾರ ಕ್ಷೇತ್ರದ ಆರ್ಥಿಕ ಬೆಳವಣ ಗೆಗೆ ತನ್ನದೆ ಆದ ಕೊಡುಗೆಯನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಸಹಕಾರ ಸಂಘಗಳು ಬದಲಾಗುತ್ತಿರುವ ಕಾಯಿದೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೆಚ್ಚು ಕ್ರಿಯಾ ಶೀಲರಾಗಿ ಮುಂದುವರೆದರೆ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯ ಎಂದು ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ನಿ., ಕುಮಟಾ ನಿರ್ದೇಶಕ ವಿನೋದ ಬಿ. ನಾಯಕ ಬಾಸಗೋಡ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿ., ಬೆಂಗಳೂರು, ಉ.ಕ.ಜಿಲ್ಲಾ ಸಹಕಾರ ಯೂನಿಯನ್ ನಿ., ಕುಮಟಾ ಮತ್ತು ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಅಂಕೋಲಾ ಅರ್ಬನ್ ಬ್ಯಾಂಕಿನಲ್ಲಿ ಬುಧವಾರ ಹಮ್ಮಿಕೊಂಡ ಅಂಕೋಲಾ ಮತ್ತು ಕಾರವಾರ ತಾಲೂಕಿನ ಎಲ್ಲಾ ಸಹಕಾರ ಸಂಘಗಳ ಅಧ್ಯಕ್ಷರು, ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳಿಗೆ ನೀಡುವ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತರಬೇತಿ ಕಾರ್ಯಕ್ರಮದಲ್ಲಿ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಿದ್ದು, ತಮ್ಮ ಸಂಸ್ಥೆಗಳ ಅಡಾವೆ ಪತ್ರ, ಲಾಭ-ಹಾನಿ ಮತ್ತು ಸಹಕಾರಿ ಸಂಘಗಳ ಚುನಾವಣೆಯ ಮೀಸಲಾತಿ ಕುರಿತು ಸೇರಿದಂತೆ ಇನ್ನಿತರ ವಿಷಯಗಳನ್ನು ತರಬೇತಿಯಲ್ಲಿ ಪಡೆದುಕೊಂಡು ಅನುಭವ ಪಡೆದುಕೊಳ್ಳಿ ಎಂದರು.
ಅಂಕೋಲಾ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಭಾಸ್ಕರ ನಾರ್ವೇಕರ್ ಅಧ್ಯಕ್ಷತೆವಹಿಸಿ, ಸಹಕಾರಿ ಸಂಘಗಳು ಗ್ರಾಮೀಣ ಪ್ರದೇಶದಲ್ಲಿ ರೈತರ ಆರ್ಥಿಕ ಬೆಳವಣ ಗೆಗೆ ಸಹಕಾರಿಯಾಗಿದೆ. ಎಲ್ಲ ಸಮಾಜದ ಬಡ, ಮಧ್ಯ ಮ ವರ್ಗದವರಿಗೆ ಅತಿ ಸರಳ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವ ಮೂಲಕ ಸಹ ಕಾರ ಸಂಘಗಳು ಮಾಡುತ್ತಿರುವ ನಿಶ್ವಾರ್ಥ ಸೇವೆ ನಿಜಕ್ಕೂ ಶ್ಪಾಘನೀಯ ಎಂದರು.

ಅಂಕೋಲಾ ಅರ್ಬನ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ವೈದ್ಯ ಮಾತನಾಡಿ, ನಮ್ಮ ಬ್ಯಾಂಕಿನ 7ನೇ ಶಾಖೆ ಕುಮಟಾದಲ್ಲಿ ಫೆ.22 ಗುರುವಾರ ಸಂಜೆ 4.30ಕ್ಕೆ ಉದ್ಘಾಟನೆಗೊಳ್ಳಲಿದೆ. ತಾವು ಎಲ್ಲರೂ ಆಗಮಿಸಿ ಶುಭ ಹಾರೈಸಿಬೇಕು ಎಂದರು. ಉಪಾಧ್ಯಕ್ಷ ಗೋಂವಿದ್ರಾಯ ನಾಯ್ಕ, ಹಿಚ್ಕಡ ವ್ಯವಸಾಯ ಸಹಕಾರಿ ಸಂಘದ ವ್ಯವಸ್ಥಾಪಕ ಕೇಶವ ಟಿ. ಗೌಡ ಮಾತನಾಡಿದರು.
ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ನಿವೃತ ಉಪನಿರ್ದೇಶಕ ಜಿ.ಕೆ.ರಾಮಪ್ಪ ತರಬೇತಿ ದಾರರಿಗೆ ಉಪನ್ಯಾಸ ನೀಡಿದರು. ಈ ವೇಳೆ ಹಿಚ್ಕಡ ವ್ಯ.ಸೇವಾ ಸಹಕಾರಿ ಸಂಘದ ವತಿಯಿಂದ ಸಹಕಾರ ರತ್ನ ಪುರಸ್ಕøತ ವಿನೋದ ಬಿ.ನಾಯಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅರ್ಬನ ಬ್ಯಾಂಕಿನ ನಿರ್ದೇಶಕರಾದ ಗೋಪಾಲಕೃಷ್ಣ ನಾಯಕ, ಪ್ರಕಾಶ ಕುಂಜಿ, ಹಿಚ್ಕಡ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ರಾಮದಾಸ ನಾಯಕ, ಕಾಮದೇನು ಕೋ-ಆಪ್ ಸೊಸೈಟಿ ವ್ಯವಸ್ಥಾಪಕ ರಾಜು ಹರಿಕಂತ್ರ ಬೇಲೇಕೇರಿ ವ್ಯ.ಸಹಕಾರಿ ಸಂಘದ ಕಾರ್ಯದರ್ಶಿ ನಿತ್ಯಾನಂದ ನಾಯಕ ಇತರರು ಉಪಸ್ಥಿತರಿದ್ದರು. ಉ.ಕ.ಜಿಲ್ಲಾ ಸಹಕಾರ ಯೂನಿಯನ್ ಕಾರ್ಯದರ್ಶಿ ದರ್ಶನ ಗಾಂವಕರ, ಸಿಬ್ಬಂದಿ ಲಕ್ಷ್ಮೀನಾರಾಯಣ ಕೊಚರೇಕರ್ ನಿರ್ವಹಿಸಿದರು.