ಡೈಲಿ ವಾರ್ತೆ: 24/Feb/2024
ಅರೋಗ್ಯ: ಸಪೋಟಾ(ಚಿಕ್ಕು) ಹಣ್ಣಿನ ಆರೋಗ್ಯ ಪ್ರಯೋಜನಗಳು.!
ಅರೋಗ್ಯ: ಚಿಕ್ಕು ಅಥವಾ ಸಪೋಟಾ ತುಂಬಾ ರುಚಿಕರವಾದ ಮತ್ತು ಆರೋಗ್ಯಕರ ಹಣ್ಣು. ದೇಹದಲ್ಲಿ ನೀರಿನ ಕೊರತೆ ಇರುವ ಸಮಯದಲ್ಲಿ ಈ ಹಣ್ಣನ್ನು ತಿನ್ನಲು ವೈದ್ಯರು ಶಿಫಾರಸು ಮಾಡುತ್ತಾರೆ.
ಇನ್ನು ಭಾರತದಲ್ಲಿ ಸಪೋಟ ಹಣ್ಣನ್ನು ಹೆಚ್ಚಾಗಿ ಕರ್ನಾಟಕ, ಗುಜರಾತ್, ಮಹಾರಾಷ್ಟ್ರ , ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಬೆಳೆಯುತ್ತಾರೆ. ಸಪೋತ ಹಣ್ಣಿನ ಜ್ಯೂಸ್, ಜಾಮ್, ಸ್ಮೂಥಿ, ಸಿಹಿ ತಿಂಡಿಗಳು ಇತ್ಯಾದಿಗಳನ್ನು ತಯಾರಿಸುವರು.
100 ಗ್ರಾಂ ಸಪೋಟ ದಲ್ಲಿ 83 ಕ್ಯಾಲರಿ ಇದೆ. ಆಹಾರದ ನಾರಿನಾಂಶವನ್ನು ಹೊಂದಿರುವಂತಹ ಇದು ವಿರೇಚಕ ಗುಣವನ್ನು ಹೊಂದಿದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ, ಎ, ನಿಯಾಸಿನ್, ಫಾಲಟೆ ಮತ್ತು ಖನಿಜಾಂಶ ಗಳಾಗಿರುವಂತಹ ಕಬ್ಬಿನಾಂಶ, ಪೊಟಾಶಿಯಂ ಮತ್ತು ತಾಮ್ರವಿದೆ. ಆಂಟಿಆಕ್ಸಿಡೆಂಟ, ಉರಿಯೂತ ಶಮನಕಾರಿ, ವೈರಲ್ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳು ಕೂಡ ಇದರಲ್ಲಿ ಇದೆ.
* ಶೀತ ಮತ್ತು ಕೆಮ್ಮು ಗುಣಪಡಿಸುವುದು.
* ಶಿಲೀಂದ್ರ (ಫಂಗಲ್) ಬೆಳವಣಿಗೆಯನ್ನು ತಡೆಯುತ್ತದೆ.
* ಮುಖದ ಮೇಲಿನ ಸುಕ್ಕುಗಳನ್ನು (Wrinkles) ಕಡಿಮೆ ಮಾಡುವುದು
* ಮೂಳೆಗಳ ಬಲ ಹೆಚ್ಚಿಸುವುದು.
* ಕೂದಲು ಉದುರುವುದನ್ನು ತಡೆಯುತ್ತದೆ
* ಚರ್ಮ ಹೊಳೆಯುವಂತೆ ಮಾಡುವುದು
* ಮೂತ್ರವಿಸರ್ಜನೆಯ ಮೂಲಕ ದೇಹದಿಂದ ತ್ಯಾಜ್ಯವಸ್ತುಗಳನ್ನು ತೆಗೆದುಹಾಕುತ್ತದೆ.
* ತೂಕ ನಷ್ಟಕ್ಕೆ ಉಪಯುಕ್ತ.
* ಮೂತ್ರಪಿಂಡ ರೋಗಗಳ ವಿರುದ್ಧ ರಕ್ಷಣೆ ನೀಡುವುದು
* ನಿದ್ರಾಹೀನತೆ, ಆತಂಕ ಮತ್ತು ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ತುಂಬಾನೇ ಒಳ್ಳೆಯದು.
* ತಲೆಹೊಟ್ಟಿನ (dandruff) ನಿವಾರಣೆ.
* ಮಲಬದ್ಧತೆಗೆ ಪರಿಹಾರ.
* ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಸಹಾಯ ಮಾಡುವುದು.
* ಅನ್ನನಾಳದ ಉರಿಯೂತ, ಕರುಳಿನ ಉರಿಯೂತ, ಕೆರಳಿಸುವ ಕರುಳಿನ ಸಹ ಲಕ್ಷಣಗಳು ಮತ್ತು ಜಠರದ ಉರಿಯೂತಗಳಂತಹ ರೋಗಗಳನ್ನು ತಡೆಗಟ್ಟಿ ಜೀರ್ಣಾಂಗದ ಪರಿಸ್ಥಿತಿಯನ್ನು ಉತ್ತಮಗೊಳಿಸುವುದು.
* ಕಣ್ಣುಗಳಿಗೆ (eye’s) ಒಳ್ಳೆಯದು.
* ಕೂದಲನ್ನು ಮೃದುವಾಗಿಸುವುದು.