ಡೈಲಿ ವಾರ್ತೆ: 24/Feb/2024
– ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ.
ಫೆ. 28, 29 ರಂದು ಕಾನನ ತಪ್ಪಲಿನ ಶ್ರೀ ವರ ಬ್ರಹ್ಮ,ಶ್ರೀ ಸ್ವರ್ಣ ಯಕ್ಷಿ, ಶ್ರೀ ನಾಗ ದೇವತೆ ಮತ್ತು, ಸಹ ಪರಿವಾರ ದೇವರುಗಳ ವಾರ್ಷಿಕ ಜಾತ್ರಾ ಮಹೋತ್ಸವ
ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ 400 ವರ್ಷಗಳ ಇತಿಹಾಸವಿರುವ ಈ ದೇಗುಲ ಕಾನನ ತಪ್ಪಲಿನಲ್ಲಿ ಕರಿ ಜನರು ವಾಸಿಸುವಂತಹ ಪ್ರದೇಶದಲ್ಲಿ ನೆಲೆ ನಿಂತು, ಭಕ್ತರಿಗೆ ಸನ್ಮಂಗಳವನ್ನ ನೀಡುತ್ತಿದ್ದಾಳೆ. ಇಂದಿಗೂ.., ಇತಿಹಾಸವನ್ನು ಮೇಲಕ್ಕೂ ಹಾಕಿದರೆ ಈ ತಾಯಿಯ ಸನ್ನಿಧಾನ ಕರುಗುಡಿ ಎಂಬ ಪ್ರದೇಶದಲ್ಲಿ ಐಕ್ಯವಾಗಿದ್ದೆ ಪವಾಡ ಸದೃಶ್ಯ…., ಅದೇ ರೀತಿ ವರ್ಷಂ ಪ್ರತಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಕರಗುಡಿಯ ಶ್ರೀ ವರಬ್ರಹ್ಮ, ಶ್ರೀ ಸ್ವರ್ಣ ಯಕ್ಷಿ, ನಾಗದೇವತೆ ಸಹ ಪರಿವಾರ ದೇವರುಗಳ ವಾರ್ಷಿಕ ಜಾತ್ರಾ ಮಹೋತ್ಸವವನ್ನು ಆಚರಿಸಲು ಆಡಳಿತ ಮಂಡಳಿ ಕುಟುಂಬಸ್ಥರು ಮತ್ತು ಅರ್ಚಕರು ನಿರ್ಧರಿಸಿದ್ದಾರೆ.
ವರ್ಷಂ ಪ್ರತಿ ಅಂತೆ ನಡೆಯುವ ಜಾತ್ರಾ(ಹಾಲು ಹಬ್ಬ ) ಧಾರ್ಮಿಕ ಕಾರ್ಯಕ್ರಮ ಈ ಬಾರಿ ಫೆಬ್ರವರಿ 28/02/2024 ಬುಧವಾರ ಮತ್ತು 29/02/2024 ಗುರುವಾರ ರಂದು ವಿಜೃಂಭಣೆಯಿಂದ ಜರುಗಲಿದೆ.
ಅದೇ ರೀತಿ ದಿನಾಂಕ 28/02/2024 ಬೆಳಿಗ್ಗೆ ರಂದು ದೇಗುಲದ ಆವರಣದಲ್ಲಿ ಶ್ರೀ ವರಬ್ರಹ್ಮ ಮತ್ತು ನಾಗದೇವತೆಗೆ ಕಲಾ ಹೋಮ ಸೇವೆ., ಅದೇ ದಿನ ಮಧ್ಯಾಹ್ನ ಶ್ರೀ ಸ್ವರ್ಣ ಯಕ್ಷಿ ಮತ್ತು ಸಹ ಪರಿವಾರ ದೇವರುಗಳಿಗೆ ಕಲಾ ಹೋಮ ಪೂಜಾ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ಪಬ್ಲಿಕ್ ಫೈಲ್ ಕನ್ನಡ ಪಕ್ಷಿಕ ಪತ್ರಿಕೆಯ ಆಡಳಿತ ಮಂಡಳಿಯ ತಂಡ ದೇಗುಲದ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ದೇಗುಲಕ್ಕೆ ವಿವಿಧ ರೂಪದಲ್ಲಿ ಸೇವೆ ನೀಡಿದ ಕುಟುಂಬಸ್ಥರನ್ನು ಅಭಿನಂದಿಸುವಲ್ಲಿದ್ದಾರೆ.
ರಾತ್ರಿ 9 ಗಂಟೆಗೆ ಗೆಂಡ ಸೇವೆ, ಪೂಜಾ ಕಾರ್ಯಕ್ರಮ, ವಿವಿಧ ಸ ಪರಿವಾರ ದೇವರುಗಳಿಗೆ ಪೂಜೆ, ದೇವರುಗಳಿಗೆ ಮಹಾಪೂಜೆ, ಹಣ್ಣು ಕಾಯಿ ಪ್ರಸಾದ ವಿನಿಯೋಗ ಹಾಗೂ ಧಾರ್ಮಿಕ ವಿಧಿ ವಿಧಾನದ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಹಾಗೂ 29ರ ಬೆಳಿಗ್ಗೆ 8.00 ಗಂಟೆಗೆ ವರ್ಷಾ ಪ್ರತಿಯಂತೆ ನಡೆಯುವ ಡಮರುಗ ಸೇವೆ( ಡಕ್ಕೆ ಬಲಿ ), ಹರಿಕೆಯಂತೆ ನಡೆಯುವ ತುಲಾಭಾರ ಸೇವೆ, ಹಣ್ಣು ಕಾಯಿ ಸಮರ್ಪಣೆ, ದರ್ಶನ, ನಡೆಯಲಿದೆ. ಎಲ್ಲಾ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ನಂತರ ಕೊನೆಯದಾಗಿ ಕುರಿ ಮತ್ತು ಕೋಳಿ ಬಲಿಕೊಡುವಂತಹ ಸೇವೆ ವರ್ಷಂ ಪ್ರತಿಯಂತೆ ದೇಗುಲದ ಹೊರ ಭಾಗದಲ್ಲಿ ನಡೆಯುತ್ತದೆ. ನಂಬಿದಂತಹ ಕುಟುಂಬಸ್ಥರು ಗ್ರಾಮಸ್ಥರು ಸಂಬಂಧಪಟ್ಟಂತಹ ಎಲ್ಲಾ ಸಾರ್ವಜನಿಕರು, ಈ ದೇಗುಲಕ್ಕೆ ಆಗಮಿಸಿ, ತಾಯಿಯ ದರುಶನವನ್ನ ಪಡೆಯುವುದರೊಂದಿಗೆ ಅಷ್ಟಮಂಗಲ ಸಿದ್ಧಿಯಾಗುವುದರೊಂದಿಗೆ ಜೀವನದುದ್ದಕ್ಕೂ ತಾಯಿ ರಕ್ಷಿಸುತ್ತಾಳೆ, ಪೋಷಿಸುತ್ತಾಳೆ ಎನ್ನುವ ನಂಬಿಕೆ ಇಂದಿಗೂ ಇಲ್ಲಿನ ಜನರ ಮನಸಲ್ಲಿ ಹುದುಗಿ ಹೋಗಿದೆ. ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ವರಬ್ರಹ್ಮ ಸ್ವರ್ಣ ಯಕ್ಷಿ ನಾಗದೇವತೆ ಸಹ ಪರಿವಾರ ದೇವರುಗಳ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಸಮಸ್ತ ಅರ್ಚಕ ವೃಂದ ಕುಟುಂಬಸ್ಥರು ಹಾಗೂ ಧಾರ್ಮಿಕ ಟ್ರಸ್ಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.