ಡೈಲಿ ವಾರ್ತೆ: 28/Feb/2024

ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಆಗುವ ಆರೋಗ್ಯಕ್ಕೆ ಪ್ರಯೋಜನಗಳು.!

ಅರೋಗ್ಯ: ನಾವು ಊಟ ಮಾಡುವಾಗ ಲಿಂಬು, ಹಸಿ ಈರುಳ್ಳಿ ತುಂಡುಗಳು, ಸೌತೆಕಾಯಿ, ಕ್ಯಾರೆಟ್, ಮೂಲಂಗಿ ಹೀಗೆ ಇಡಲಾಗುತ್ತದೆ.
ಅದರಲ್ಲಿಯೂ ರೊಟ್ಟಿಯ ಜೊತೆಗೆ ಹಸಿ ಈರುಳ್ಳಿ ತಿನ್ನುವುದು ಹೆಚ್ಚು ರೂಢಿಯಲ್ಲಿದೆ. ಈರುಳ್ಳಿ ಪ್ರಿಯರು ಪ್ರತಿ ಋತುವಿನಲ್ಲಿ ಮತ್ತು ಪ್ರತಿ ಊಟದಲ್ಲಿ ಹಸಿ ಈರುಳ್ಳಿ ತಿನ್ನಲು ಇಷ್ಟ ಪಡುತ್ತಾರೆ.

ಪ್ರಾಚೀನ ಕಾಲದಿಂದಲೂ ಈರುಳ್ಳಿಯನ್ನು ಕೇವಲ ಆಹಾರಕ್ಕೆ ಮಾತ್ರವಲ್ಲದೆ, ಔಷಧೀಯ ಗುಣಗಳನ್ನು ಹೊಂದಿದೆ ಎಂದು ಗುರುತಿಸಲಾಗಿದೆ. ಇದು ತಲೆನೋವು, ಹೃದ್ರೋಗ, ಬಾಯಿ ಹುಣ್ಣುಗಳಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತದೆ.

* ಈರುಳ್ಳಿಯನ್ನು ತಿನ್ನುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದಂತೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ, ಈರುಳ್ಳಿಯಲ್ಲಿ ಕಂಡುಬರುವ ನಿರ್ದಿಷ್ಟ ಸಂಯುಕ್ತಗಳಾದ ಕ್ವೆರ್ಸೆಟಿನ್‌ ಮತ್ತು ಸಲ್ಪರ್‌ (Quercetin and Sulphur) ಸಂಯುಕ್ತಗಳು ಮಧುಮೇಹ ವಿರೋಧಿಯಾಗಿವೆ.

* ಈರುಳ್ಳಿಯಲ್ಲಿರುವ ವಿಟಮಿನ್ ಸಿ ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಆಹಾರದಲ್ಲಿ ಈರುಳ್ಳಿಯನ್ನು ಬಳಸುತ್ತಾ ಬರುವುದರಿಂದ ಸುಂದರವಾದ ತ್ವಚೆ ಮತ್ತು ಕೂದಲನ್ನು‌ (Skin and hair) ಪಡೆಯಬಹುದು.

* ಫ್ಲೇವನಾಯ್ಡ್‌ಗಳು ಮತ್ತು ಥಿಯೋಸಲ್ಫಿನೇಟ್‌ಗಳು ಈರುಳ್ಳಿಯಲ್ಲಿ ಸಮೃದ್ಧವಾಗಿದೆ. ಈ ಅಂಶಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ ಅನ್ನು (bad cholesterol) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಈರುಳ್ಳಿಯಲ್ಲಿನ ಈ ಥಿಯೋಸಲ್ಫಿನೇಟ್‌ಗಳು ರಕ್ತವನ್ನು ತೆಳುವಾಗುವಂತೆ ಮಾಡಿ, ರಕ್ತದ ಸ್ಥಿರತೆಯನ್ನು ಕಾಪಾಡುತ್ತದೆ.

* ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬೇಯಿಸಿದ ಈರುಳ್ಳಿಯ ಬದಲಾಗಿ ಹಸಿ ಈರುಳ್ಳಿಯ ಸೇವನೆ ಮಾಡಬೇಕು. ಮುಖ್ಯವಾಗಿ ಈರುಳ್ಳಿಯಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ರಾಸಾಯನಿಕ ಸಂಯೋಜನೆಯು (Chemical composition) ತುಂಬಾ ಪ್ರಬಲವಾಗಿದೆ.

* ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಈರುಳ್ಳಿ ತುಂಬಾ ಪ್ರಯೋಜನಕಾರಿಯಾಗಿದೆ. ಒಂದು ವೇಳೆ ನಿಮ್ಮ ಸಂಗಾತಿಯು ನಿಮಿರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ಈರುಳ್ಳಿಯನ್ನು ಆಹಾರದಲ್ಲಿ ಸೇರಿಸಿ. ಏಕೆಂದರೆ ಇದರಲ್ಲಿರುವ ಪೋಷಕಾಂಶವು ಟೆಸ್ಟೋಸ್ಟೆರಾನ್‌ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

* ಈರುಳ್ಳಿಯಲ್ಲಿರುವ ಸೆಲೆನಿಯಮ್‌ ವಿಟಮಿನ್‌ ಇ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ನೋವಿನಿಂದ ಕೂಡಿರುವ ಕಣ್ಣುಗಳಿಗೆ (eyes) ಚಿಕಿತ್ಸೆ ನೀಡುತ್ತದೆ.