ಡೈಲಿ ವಾರ್ತೆ: 29/Feb/2024

ಕೋಟತಟ್ಟು ಗ್ರಾಮ ಪಂಚಾಯತ್ ಗೆ ಅಧಿಕಾರಿಗಳ ಭೇಟಿ

ಕೋಟ: ಕುಂದಾಪುರ ವಿಧಾನಸಭಾ ಕ್ಷೇತ್ರ ಕೋಟ ಹೋಬಳಿಯ ಕೋಟತಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯ ಮತದಾನ ಕೇಂದ್ರ164,165,166 ರ ಮತ್ತು ಮತದಾನ ವ್ಯಾಪ್ತಿಯ ಬಗ್ಗೆ ಸಾರ್ವತ್ರಿಕ ಲೋಕಸಭಾ ಚುನಾವಣೆ 2024 ರ ಚುನಾವಣೆ ಪೂರ್ವ ಭಾವಿ ಪರಿಶೀಲನೆ ನಡೆಸಲಾಯಿತು.

ಮತಗಟ್ಟೆಯನ್ನು ಪರಿಶೀಲಿಸಿ ಮತದಾರರ ಕುಂದು ಕೊರತೆ ಬಗ್ಗೆ ವಿಚಾರಿಸಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿಗಳಾದ ಡಾ. ವಿದ್ಯಾ ಕುಮಾರಿ ಐಎಎಸ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣ್ ಕುಮಾರ್ ಐಪಿಎಸ್ , ಉಪ ವಿಭಾಗ ಅಧಿಕಾರಿ ಕುಂದಾಪುರ ರಶ್ಮಿ ಎಸ್ ಆರ್ ಕೆಎಎಸ್ , ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಸತೀಶ್ ಕುಂದರ್ ಬಾರಿಕೆರೆ , ಸದಸ್ಯ ವಾಸು ಪೂಜಾರಿ, ತೇಜಸ್ವಿ ಕೋಟ ಪೊಲೀಸ್ ಉಪನಿರೀಕ್ಷಕರು, ಮಂಜುನಾಥ್ ಬಿಲ್ಲವ ರೆವಿನ್ಯೂ ಇನ್ಸ್ಪೆಕ್ಟರ್, ರಾಘವೇಂದ್ರ ಗ್ರಾಮ ಆಡಳಿತ ಅಧಿಕಾರಿ ಕೋಟ, ಪಂಚಾಯತ್ ಕಾರ್ಯದರ್ಶಿ ಸುಮತಿ ಅಂಚನ ಉಪಸ್ಥಿತರಿದ್ದರು.