ಡೈಲಿ ವಾರ್ತೆ: ಫೆ./22/2026

ಬಗ್ವಾಡಿಯಲ್ಲಿ ಗುಡುಗುಡಿ ಜೂಜಾಟಕ್ಕೆ ಪೊಲೀಸ್ ದಾಳಿ: ನಗದು ಸೇರಿ ನಾಲ್ವರು ವಶ

ಕುಂದಾಪುರ, ಫೆ.22: ಕುಂದಾಪುರ ತಾಲೂಕಿನ ದೇವಲ್ಕುಂದ ಗ್ರಾಮದ ಬಗ್ವಾಡಿ ಚಕ್ರ ನದಿಯ ಬದಿಯ ಹಾಡಿಯಲ್ಲಿ ಗುಡುಗುಡಿ (ಗರಗರ ಮಂಡಲ) ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕುಂದಾಪುರ ರೂರಲ್ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ದಿನಾಂಕ 21.02.2026 ರಂದು ಬೆಳಗ್ಗೆ 11:10 ಗಂಟೆಗೆ ಪಿ.ಎಸ್‌.ಐ ನಾಸೀರ್ ಹುಸೇನ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 1) ಹರೀಶ್ (41) ನೂಜಾಡಿ ಗ್ರಾಮ, 2) ಗಣೇಶ ಎನ್ (31) ಬಗ್ವಾಡಿ, 3) ರಾಘವೇಂದ್ರ (37) ನೂಜಾಡಿ ಗ್ರಾಮ, 4) ಪ್ರವೀಣ್ ಎಮ್ (32) ದೇವಲ್ಕುಂದ ಗ್ರಾಮ ನಿವಾಸಿಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ಹಣವನ್ನು ಪಣವಾಗಿಟ್ಟು ತಮ್ಮ ಸ್ವಂತ ಲಾಭಕ್ಕಾಗಿ ಗುಡುಗುಡಿ ಆಟ ಆಡುತ್ತಿರುವುದು ದಾಳಿಯಲ್ಲಿ ಪತ್ತೆಯಾಗಿದೆ. ಸ್ಥಳದಿಂದ 7,630 ರೂ. ನಗದು, ಸೂರ್ಯ, ಚಂದ್ರ, ಡೈಮಂಡ್‌, ಕಳವಾರ, ಆಟಿನ್‌, ಇಸ್ಪೀಟ್ ಚಿತ್ರಗಳಿರುವ ಪ್ಲಾಸ್ಟಿಕ್ ಬ್ಯಾನರ್-01, ದಾಳ-03, ಪ್ಲಾಸ್ಟಿಕ್ ಡಬ್ಬ-01 ಹಾಗೂ ಮರದ ಹಲಗೆಯ ತುಂಡು-01 ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ಸಂಬಂಧ ಕುಂದಾಪುರ ರೂರಲ್ ಪೊಲೀಸ್ ಸ್ಟೇಷನ್ ಯಲ್ಲಿ ಅಪರಾಧ ಕ್ರಮಾಂಕ 10/2026ರಂತೆ ಕಲಂ 87 KP Act ಅಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.