ಡೈಲಿ ವಾರ್ತೆ: 04/Mar/2024
ನಿಗಮ ಮಂಡಳಿಗೆ ತಪ್ಪಿದ ಅವಕಾಶ: ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಅಭಿಮಾನಿಗಳಿಂದ ಸಾಮೂಹಿಕ ರಾಜೀನಾಮೆಗೆ ನಿರ್ಧಾರ!
ಕೋಟ: ಕೋಟ ಕಾಂಗ್ರೆಸ್ ನ ಅಧ್ಯಕ್ಷರಾದ ಶಂಕರ್ ಎ ಕುಂದರ್ ರವರು ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಪಕ್ಷದಲ್ಲಿ ತೊಡಗಿಸಿಕೊಂಡು 2018 ಮತ್ತು 2023 ವಿಧಾನಸಭಾ ಚುನಾವಣೆಯಲ್ಲಿ ಕುಂದಾಪುರ ಮತ್ತು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದು ಎರಡು ಬಾರಿ ಟಿಕೆಟ್ ವಂಚಿತರಾಗಿರುತ್ತಾರೆ.
ಹಾಗೆ ಕಳೆದ 2013ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ನಿಗಮ ಮಂಡಳಿ ಸ್ಥಾನಕ್ಕೆ ಇವರು ಆಕಾಂಕ್ಷಿಯಾಗಿದ್ದು ಕೊನೆಗಳಿಗೆನಲ್ಲಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೈ ತಪ್ಪಿರುತ್ತದೆ. ಅಂದು ಪಕ್ಷದ ನಾಯಕರ ಮೇಲೆ ಬೇಸರಗೊಂಡಿದ್ದ ಶಂಕರ್ ಎ ಕುಂದರವರನ್ನು ಸಮಾಧಾನ ಪಡಿಸುವಲ್ಲಿ ಅವರ ನಾಯಕರಾದ ಓಸ್ಕರ ಫೆರ್ನಾಂಡಿಸ್ ರವರು ಯಶಸ್ವಿಯಾಗಿದ್ದರು, ಹಾಗೆ ಮುಂದಿನ ದಿನಗಳಲ್ಲಿ ನಿಮಗೆ ಸರ್ಕಾರದಲ್ಲಿ ಉನ್ನತ ಸ್ಥಾನಮಾನ ನೀಡುವುದಾಗಿ ಭರವಸೆ ಇಟ್ಟಿದ್ದರು. ಈ ಬಾರಿ ಕೂಡ ನಿಗಮ ಮಂಡಳಿಯಲ್ಲಿ ಆಕಾಂಕ್ಷಿಯಾಗಿದ್ದ ಶಂಕರ್ ಎ ಕುಂದರವರರಿಗೆ ನೀಡದಿದ್ದನ್ನು ಖಂಡಿಸಿ ಅವರ ಅಭಿಮಾನಿಗಳು ಹಾಗೂ ಕೋಟ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಬರುವ ಕೋಡಿ ಗ್ರಾಮೀಣ ಸಮಿತಿ ಅಧ್ಯಕ್ಷರಾದ ಶಂಕರ್ ಬಂಗೇರ, ರಾಜ್ಯ ಮೀನುಗಾರ ಕ್ರಿಯಾ ಸಮಿತಿಯ ಕಾರ್ಯದರ್ಶಿಗಳಾದ ರಮೇಶ್ ತಿಂಗಳಾಯ, ಕೋಡಿ ಗ್ರಾಮೀಣ ಸಮಿತಿ ಮಾಜಿ ಅಧ್ಯಕ್ಷರಾದ ಮಹೇಶ್ ಪೂಜಾರಿ, ಕೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಂತೋನಿ ಡಿಸೋಜ ಸಾಮೂಹಿಕ ರಾಜೀನಾಮೆಗೆ ನಿರ್ಧಾರ ಕೈಗೊಂಡರು.
ಈ ಸಂದರ್ಭದಲ್ಲಿ ಭಾಸ್ಕರ್ ಕಾಂಚನ್, ವಿಶ್ವನಾಥ್ ಪೂಜಾರಿ, ಶಂಕರ್ ಪೂಜಾರಿ ಕನ್ಯಾನ, ಸತೀಶ್ ತಿಂಗಳಾಯ ಕನ್ಯಾನ, ಕೃಷ್ಣಪ್ಪ ಬಂಗೇರ ಹೊಸಬೆಂಗ್ರೆ, ದಯಾನಂದ ಕರ್ಕೇರ ಕೋಡಿ ಕನ್ಯಾನ, ಕರುಣಾಕರ್ ಖಾರ್ವಿ ಹೊಸ ಬೆಂಗ್ರೆ, ರವೀಂದ್ರ ಕೋಡಿ, ಮಾಜಿ ಕೋಡಿ ಪಂಚಾಯತ್ ಸದಸ್ಯರಾದ ನಾಗೇಶ್ ಖಾರ್ವಿ, ಝಕ್ರಿಯ, ಅನಂತ ಪೂಜಾರಿ ಕೋಡಿ, ಬಡಿಯ ಪೂಜಾರಿ ಕೋಡಿ, ಮಹೇಶ್ ಕುಮಾರ್ ಕೋಡಿ ಬೆಂಗ್ರೆ, ಸಂತೋಷ್ ಬಂಗೇರ ಕೋಡಿ, ಬಚ್ಚ ಪೂಜಾರಿ ಕನ್ಯಾನ, ಹರೀಶ್ ಮೆಂಡನ್ ಕನ್ಯಾನ, ಹರೀಶ್ ಕುಂದರ್ ಕೊಡಿ ಬೆಂಗ್ರೆ, ಮೋಹನ್ ಸುವರ್ಣ ಕೋಡಿ ಬೆಂಗ್ರೆ, ಸತೀಶ್ ತಿಂಗಳಾಯ ಕೋಡಿ, ಕೇಶವ ಬಂಗೇರ ಹೊಸಬೆಂಗ್ರೆ, ತಿಮ್ಮಪ್ಪ ಪೂಜಾರಿ ಕೋಡಿ, ತಿಲಕ್ ಕೋಡಿ ಬೆಂಗ್ರೆ, ರಮೇಶ್ ಕೋಟ್ಯನ್ ಹಾಗೂ ಕೋಡಿ ಬೆಂಗ್ರೆಯ ಗ್ರಾಮೀಣ ಸಮಿತಿಯ ಎಲ್ಲ ಸದಸ್ಯರು ಸಭೆ ಸೇರಿ ಕಾಂಗ್ರೆಸ್ ಪಕ್ಷ ಸಾಮೂಹಿಕ ರಾಜೀನಾಮೆ ನೀಡುವ ನಿರ್ಧಾರವನ್ನು ಕೈಗೊಂಡರು, ಕೋಟ ಬ್ಲಾಕ್ ಕಾಂಗ್ರೆಸ್ ನ ಹಿಂದುಳಿದ ಘಟಕದ ಅಧ್ಯಕ್ಷರಾದ ದಿನೇಶ್ ಬಂಗೇರ ಗುಂಡ್ಮಿ, ಗಣೇಶ್ ಕೆ ನೆಲ್ಲಿಬೆಟ್ಟು ಉಪಸ್ಥಿತರಿದ್ದರು.