ಡೈಲಿ ವಾರ್ತೆ: 08/Mar/2024
ಟೇಕ್ – ಆಫ್ ಆದ ಕೆಲವೇ ಹೊತ್ತಲ್ಲಿ ಕಳಚಿ ಬಿದ್ದ ವಿಮಾನ ಚಕ್ರ – ಹಲವು ಕಾರುಗಳು ಜಖಂ!
ಲಾಸ್ ಏಂಜಲೀಸ್: ಜಪಾನ್‌ಗೆ ಹೊರಟಿದ್ದ ಬೋಯಿಂಗ್ 777 ಜೆಟ್ ಲೈನರ್ ಗುರುವಾರ ಟೇಕಾಫ್ ಆದ ಸ್ವಲ್ಪ ಸಮಯದಲ್ಲೇ ತುರ್ತು ಲ್ಯಾಂಡಿಂಗ್ ಮಾಡಬೇಕಾದ ಪ್ರಸಂಗ ಬಂದಿದೆ. ಇದಕ್ಕೆ ಕಾರಣ ವಿಮಾನದ ಚಕ್ರ ಕಳಚಿ ಬಿದ್ದಿರುವುದು.
ಹೌದು ಪ್ರಯಾಣಿಕರನ್ನು ಹೊತ್ತು ಜಪಾನ್ ಗೆ ಸಾಗಬೇಕಿದ್ದ ಯುನೈಟೆಡ್ ಏರ್ ಲೈನ್ಸ್ ವಿಮಾನ ಟೇಕ್ ಆಫ್ ಆದ ವೇಳೆ ವಿಮಾನದ ಒಂದು ಚಕ್ರ ಕಳಚಿ ಬಿದ್ದಿದೆ ಪರಿಣಾಮ ವಿಮಾನದ ಪೈಲೆಟ್ ತುರ್ತಾಗಿ ವಿಮಾನವನ್ನು ಲ್ಯಾಂಡ್ ಮಾಡಬೇಕಾಯಿತು.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ, ಇಲ್ಲಿ ವಿಮಾನ ಟೇಕ್ ಆಫ್ ಆಗುತ್ತಿದ್ದು ಈ ವೇಳೆ ವಿಮಾನದ ಒಂದು ಚಕ್ರ ಕಳಚಿ ಬೀಳುವುದು ಕಾಣಬಹುದು ಕೂಡಲೇ ಕಾರ್ಯಪ್ರವೃತ್ತರಾದ ಪೈಲೆಟ್ ವಿಮಾನವನ್ನು ತುರ್ತಾಗಿ ಲ್ಯಾಂಡ್ ಮಾಡಿದ್ದಾರೆ.
ಚಕ್ರ ಬಿದ್ದ ಪರಿಣಾಮ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಹಲವಾರು ಕಾರುಗಳು ಜಖಂಗೊಂಡಿರುವುದಾಗಿ ಹೇಳಲಾಗಿದೆ.