ಡೈಲಿ ವಾರ್ತೆ: 09/Mar/2024

ಕೋಟ: ಮಲ್ಯಾಡಿಯಲ್ಲಿ ಆಕಸ್ಮಿಕ ಬೆಂಕಿ – ನೂರಾರು ಎಕರೆ ಬೆಂಕಿಗಾಹುತಿ -ಅಗ್ನಿ ಶಾಮಕ ಸಿಬ್ಬಂದಿಗಳಿಂದ ಕಾರ್ಯಾಚರಣೆ

ಕೋಟ: ಏರುತ್ತಿರುವ ಬಿಸಿಲ ತಾಪಮಾನ ಹಾಗೂ ಗಾಳಿಯ ತೀವ್ರತೆಗೆ ಇಲ್ಲಿನ ತೆಕ್ಕಟ್ಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ತೆಕ್ಕಟ್ಟೆ ತೆಂಕಮನೆ ಬೆಟ್ಟು ಬೈಲು, ಪಠೇಲರಮನೆ ಬಯಲು ಪ್ರದೇಶ ಹಾಗೂ ಶಾನುಭೋಗರ ಮನೆ ಪರಿಸರದಿಂದ ಮಲ್ಯಾಡಿ ಆವೆಮಣ್ಣಿನ ಹೊಂಡದಲ್ಲಿ ಬೆಳೆದು ನಿಂತಿರುವ ಅಪಾರ ಪ್ರಮಾಣದ ಗಿಡಗಂಟಿಗಳಿಗೆ ಮಧ್ಯಾಹ್ನ ಗಂಟೆ 12ರ ಸುಮಾರು ಅಗ್ನಿ ಆಕಸ್ಮಿಕವಾಗಿ ಕಾಣಿಸಿಕೊಂಡು ಸುಮಾರು ನೂರಾರು ಎಕರೆ ವಿಸ್ತೀರ್ಣದಲ್ಲಿ ವ್ಯಾಪಕವಾಗಿ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ಸಂಭವಿಸಿದೆ.

ಈ ಸಂದರ್ಭದಲ್ಲಿ ಕುಂದಾಪುರ ಅಗ್ನಿಶಾಮಕ ದಳದ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಕೆ.ಟಿ.ಗೌಡ, ಬಾಲಕೃಷ್ಣ, ನಾಗರಾಜ ಪೂಜಾರಿ, ದೀಪಕ್‌, ಧನುಷ್‌ ಗೌಡ, ಅಭಿಷೇಕ್‌ ಧಂಗ್‌, ಅಭಿಷೇಕ್‌ ಹಾಗೂ ಸ್ಥಳೀಯರಾದ ಮಂಜುನಾಥ ಆಚಾರ್ಯ, ಮಲ್ಯಾಡಿ ನಂದೀಶ್‌ರಾಮ್‌ ಶೆಟ್ಟಿ , ಸುಧೀರ್‌ ಶೆಟ್ಟಿ ಮಲ್ಯಾಡಿ, ಸೀತಾರಾಮ ಶೆಟ್ಟಿ ಪಟೇಲರಮನೆ, ಸದಾಶಿವ ಶೆಟ್ಟಿ, ಅಮಿತ್‌ ಶೆಟ್ಟಿ ಬೆಂಕಿ ನಂದಿಸುವ ಕಾರ್ಯದಲ್ಲಿ ಶ್ರಮಿಸಿದ್ದಾರೆ.