ಡೈಲಿ ವಾರ್ತೆ: 10/Mar/2024
ಬಾಳೆಕಾಯಿಯಿಂದ ಆರೋಗ್ಯಕ್ಕೆ ಪ್ರಯೋಜನಗಳು?
ಅರೋಗ್ಯ: ಅತ್ಯಂತ ಪೌಷ್ಟಿಕ ರುಚಿಕರ ಹಣ್ಣುಗಳಲ್ಲಿ ಬಾಳೆಹಣ್ಣು ಕೂಡ ಒಂದು. ಹಣ್ಣು ಅಷ್ಟೇಯಲ್ಲ ಬಾಳೆಕಾಯಿ ಇದ್ದಾಗಲೇ ಸೇವಿಸಿದರೆ ಆರೋಗ್ಯಕ್ಕೆ ಪ್ರಯೋಜನಗಳು ಇವೆ.
ಹಳದಿ ಮತ್ತು ಹಣ್ಣಾದ ಬಾಳೆಯನ್ನು ಸಾಮಾನ್ಯವಾಗಿ ಎಲ್ಲರೂ ಸೇವಿಸುತ್ತಾರೆ, ಆದರೆ ಬಾಳೆಕಾಯಿ ಸಿಹಿ ಇಲ್ಲದಿರುವುದರಿಂದ, ಅದು ನಾರಿನಂತಿರುವುದರಿಂದ (fiber) ಹೆಚ್ಚಿನ ಜನ ಸೇವಿಸಲು ಇಷ್ಟಪಡುವುದಿಲ್ಲ. ಅನೇಕರಿಗೆ ಬಾಳೆಕಾಯಿ ಪೌಷ್ಟಿಕಾಂಶಗಳನ್ನು ಹೊಂದಿದ್ದು ಇದು ಬಾಳೆಹಣ್ಣಿಗಿಂತ ಒಳ್ಳೆಯದು ಎಂದು ತಿಳಿದಿರುವುದಿಲ್ಲ.
ಬಾಳೆಕಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಪ್ರಯೋಜನಗಳು:
* ಬಾಳೆಕಾಯಿ ಸೇವನೆಯಿಂದ ಮೂಳೆಗಳು (bones) ಗಟ್ಟಿಯಾಗುತ್ತವೆ.
* ತೂಕ ನಿಯಂತ್ರಣಕ್ಕೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.
* ಬಾಳೆಕಾಯಿ ಚರ್ಮಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದರಲ್ಲಿ ವಿಟಮಿನ್ ಮತ್ತು ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದ್ದು, ಚರ್ಮವು ಹೊಳೆಯುತ್ತದೆ (skin glow).
* ಇದು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
* ಧ್ವನಿಯಲ್ಲಿ (voice) ಏರುಪೇರಾಗಿ ಮಾತನಾಡಲು ಕಷ್ಟವಾದಾಗ ಹಸಿಬಾಳೆಕಾಯಿಯನ್ನು ತಿಂದರೆ ಧ್ವನಿ ಸರಿಯಾಗುತ್ತದೆ.
* ಇದು ಮುಖದ ಮೇಲಿನ ಸುಕ್ಕುಗಳನ್ನು (Wrinkles) ತೆಗೆದುಹಾಕಲು ಸಹಾಯ ಮಾಡುತ್ತದೆ.
* ಬಾಳೆಕಾಯಿಯಲ್ಲಿ ಫೈಬರ್‌ನಲ್ಲಿ ಸಮೃದ್ಧವಾಗಿರುವುದರಿಂದ ಇದು ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ.
* ಬಾಳೆಕಾಯಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಹೆಚ್ಚು ಹಸಿವು (hungry) ಉಂಟಾಗುವುದಿಲ್ಲ.
* ಇದರಲ್ಲಿರುವ ಅತ್ಯುತ್ತಮ ಪ್ರಮಾಣದ ಪೊಟ್ಯಾಶಿಯಂ ಸ್ನಾಯುಗಳ ಸಂಕುಚನಕ್ಕೆ ಅಗತ್ಯವಾಗಿರುವ ಖನಿಜವಾಗಿದೆ. ವಿಶೇಷವಾಗಿ ಹೃದಯದ ಬಡಿತಕ್ಕೆ (heart beat) ಅಗತ್ಯ ಇಂಧನದಂತೆ ಕಾರ್ಯ ನಿರ್ವಹಿಸುತ್ತದೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಡೈಲಿ ವಾರ್ತೆಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.