ಡೈಲಿ ವಾರ್ತೆ: 10/Mar/2024
ಪಂಚವರ್ಣ 200ನೇ ಸ್ವಚ್ಚತಾ ಆಂದೋಲನದ ಪೂರ್ವಭಾವಿ ಸಭೆ
ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ,ಗೀತಾನಂದ ಫೌಂಡೇಶನ್ ಮಣೂರು,ಸ್ಥಳೀಯಾಡಳಿತದ ಸಹಯೋಗದೊಂದಿಗೆ ಪ್ರತಿ ಭಾನುವಾರದ ಪರಿಸರಸ್ನೇಹಿ ಆಂದೋನಲಕ್ಕೆ 200ನೇ ಭಾನುವಾರದ ಸಂಭ್ರಮ ಈ ಹಿನ್ನೆಲೆಯಲ್ಲಿ ಸಮಾಜಸೇವಕ ಆನಂದ್ ಸಿ ಕುಂದರ್ ಹುಟ್ಟು ಹಬ್ಬದ ಅಮೃತಮಹೋತ್ಸವಕ್ಕೆ ಸಮರ್ಪಿಸುವ ಉದ್ದೇಶದಿಂದ ಮಾ.17ರಂದು ಕೋಡಿ ಗ್ರಾಮಪಂಚಾಯತ್ ಸಂಯೋಜನೆಯೊಂದಿಗೆ ಕೋಡಿ ಗ್ರಾ.ಪಂ ನಿಂದ ಕೋಟ ಗ್ರಾ.ಪಂವರೆಗೆ 4.5ಕಿಮೀ ಬೃಹತ್ ಸ್ವಚ್ಛತಾ ಅಭಿಮಾನ ಕಾರ್ಯಕ್ರಮ ಹಮ್ಮಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಇದರ ಪೂರ್ವಭಾವಿ ಸಭೆ ಕೋಟದ ಪಂಚವರ್ಣ ಕಛೇರಿಯಲ್ಲಿ ಆನಂದ್ ಸಿ ಕುಂದರ್ ಉಪಸ್ಥಿತಿಯಲ್ಲಿ ಜರಗಿತು.
ಈ ಸಂದರ್ಭದಲ್ಲಿ ಮಾತನಾಡಿ ಆನಂದ್ ಸಿ ಕುಂದರ್ ಪರಿಸರ ಜಾಗೃತಿ ಮೂಡಿಸುವ ಸಂಘಟನೆಗಳು ಗ್ರಾಮ ಗ್ರಾಮದಲ್ಲಿ ಹುಟ್ಟಿಕೊಳ್ಳಬೇಕು ಸಮಾಜದ ಜಾಗೃತಿಗೆ ಇಂತಹ ಸಂಘಟನೆಗಳು ಸಹಕಾರಿ 200ನೇ ಸ್ವಚ್ಛತಾ ಅಭಿಯಾನ ಅರ್ಥಪೂರ್ಣವಾಗಿ ನಡೆಯಲಿ ಆ ಮೂಲಕ ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಹೊಸ ಅಧ್ಯಾಯ ಸೃಷ್ಠಿಸಲಿ ಎಂದು ಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು ಕೋಟ ಗ್ರಾಮ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ವಹಿಸಿದ್ದರು.
ಸ್ವಚ್ಛ ಬ್ರಿಗೇಡ್ ಕಾರ್ಕಳ ಇದರ ಸುನೀತಾ,ತೆಕ್ಕಟ್ಟೆ ಗ್ರಾಮಪಂಚಾಯತ್ ಎಸ್‍ಎಲ್‍ಆರ್‍ಎಂ ಘಟಕದ ಮುಖ್ಯಸ್ಥೆ ರೇವತಿ ತೆಕ್ಕಟ್ಟೆ, ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಅಜಿತ್ ಆಚಾರ್,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್,ಹಂದಟ್ಟು ಮಹಿಳಾ ಬಳಗದ ಸ್ಥಾಪಾಕಾಧ್ಯಕ್ಷೆ ಪುಷ್ಬಾ ಕೆ ಹಂದಟ್ಟು, ಇದ್ದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮದಲ್ಲಿ ಪ್ರಾಸ್ತಾವನೆ ಸಲ್ಲಿಸಿ ನಿರೂಪಿಸಿದರು. ಸಂಚಾಲಕಿ ಸುಜಾತ ಬಾಯರಿ ವಂದಿಸಿದರು.