ಡೈಲಿ ವಾರ್ತೆ: 12/Mar/2024
ಬೈಂದೂರು: ವಕ್ಪ್ ಆಸ್ತಿಯಲ್ಲಿನ ಸ್ವತ್ತು ನಾಶ – ದೂರು ದಾಖಲು!
ಬೈಂದೂರು: ಉಡುಪಿ ಜೆಲ್ಲೆಯ ಬೈಂದೂರು ತಾಲೂಕಿನ ಜಾಮಿಯಾ ಮಸೀದಿಗೆ ಸಂಬಂಧಿಸಿದ ಯಡ್ತರೆ ಗ್ರಾಮದ ಸರ್ವೇ ನಂಬ್ರ:- 80/5 (6 ಸೆಂಟ್ಸ್) ಸ್ಥಳದಲ್ಲಿರುವ ಫಲ ನೀಡುವ ತೆಂಗಿನಮರಕ್ಕೆ ಬೆಂಕಿಯಿಟ್ಟು ನಾಶ ಪಡಿಸಿದ ಘಟನೆ ಮಾ. 8 ರಂದು ಶುಕ್ರವಾರ ನಡೆದಿದೆ.
ಆರೋಪಿ ಫೈಝುಲ್ ಬ್ಯಾರಿ ಎಂಬುವರು ಈ ದುಷ್ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಆತನ ವಿರುದ್ಧ ದೂರು ದಾಖಲಾಗಿದೆ.
ಆರೋಪಿ ಫೈಝುಲ್ ಬ್ಯಾರಿವು ಶುಕ್ರವಾರ ಬೆಳಿಗ್ಗೆ
7 ಗಂಟೆ ಸಮಯದಲ್ಲಿ ಫಲ ನೀಡುವ ತೆಂಗಿನಮರಕ್ಕೆ ಬೆಂಕಿಯಿಟ್ಟು ನಾಶ ಪಡಿಸಿರುತ್ತಾರೆ. ಸದ್ರಿ ಆಸ್ತಿಯು ವಕ್ಪ್ ಮಂಡಳಿ ಅಧೀನದಲ್ಲಿದ್ದು , ಸರಕಾರಿ ಸಾರ್ವಜನಿಕ ಆಸ್ತಿ ಆಗಿರುತ್ತದೆ. ಈ ಹಿಂದೆಯು ಕೂಡ ವಕ್ಪ್ ಆಸ್ತಿ ಯಲ್ಲಿರುವ ಮನೆಯ ಬೀಗ ಒಡೆದು ಅತಿಕ್ರಮ ಪ್ರವೇಶ ಮಾಡಿ ಅಕ್ರಮ ವಾಸವಾಗಿರುವ ಕುರಿತು ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.
ಇದೀಗ ಎರಡನೇ ಬಾರಿಗೆ ವಕ್ಪ್ ಆಸ್ತಿಯಲ್ಲಿರುವ ಫಲ ನೀಡುವ ತೆಂಗಿನಮರಕ್ಕೆ ಬೆಂಕಿಯಿಟ್ಟು ನಾಶ ಪಡಿಸಿ ಸರಕಾರಿ ಸಾರ್ವಜನಿಕ ಆಸ್ತಿಗೆ ನಷ್ಟ ಉಂಟು ಮಾಡಿರುತ್ತಾರೆ. ಈ ಬಗ್ಗೆ ಉಡುಪಿ ಜಿಲ್ಲಾ ವಕ್ಪ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ಮುತಾಲಿರವರು ಬೈಂದೂರು ಪೋಲಿಸ್ ಠಾಣೆಗೆ ದೂರು ನೀಡಿರುತ್ತಾರೆ. ಈ ದೂರಿನ ಅನ್ವಯ ಎಫ್ಐಆರ್ ದಾಖಲಾಗಿರುತ್ತದೆ.