


ಡೈಲಿ ವಾರ್ತೆ: 16/Mar/2024


ಕಂಡ್ಲೂರು SDPI ವತಿಯಿಂದ CAA ಕಾಯ್ದೆ ವಿರುದ್ದ ಪ್ರತಿಭಟನೆ!
ಕುಂದಾಪುರ: ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ CAA ಕಾನೂನು ಜಾರಿ ವಿರೋಧಿಸಿ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ ಕಂಡ್ಲೂರು ಪಂಚಾಯತ್ ಸಮಿತಿಯ ಎಸ್ ಡಿ ಪಿ ಐ ವತಿಯಿಂದ ಕಂಡ್ಲೂರಿನ ಜೆ. ಎಮ್. ರಸ್ತೆ ವಠಾರದಲ್ಲಿ ಬಿತ್ತಿ ಪತ್ರದೊಂದಿಗೆ ಪ್ರತಿಭಟನೆ ಮಾಡಲಾಯಿತು.
ಈ ಸಾಂಕೇತಿಕ ಪ್ರತಿಭಟನೆಯಲ್ಲಿ ಕಂಡ್ಲೂರಿನ ಹಿರಿಯರು , ರಾಜಕೀಯ ಮುಖಂಡರು , ಉಲಮಾಗಳು, ಮಹಿಳೆಯರು, ಜಮಾತ್ ಮುಖಂಡರು ಹಾಗೂ ಯುವಕರು ಪಾಲ್ಗೊಂಡಿದ್ದರು.