ಡೈಲಿ ವಾರ್ತೆ: 16/Mar/2024
ಮಾ. 17 ರಂದು ಪರಿಸರಸ್ನೇಹಿ ಅಭಿಯಾನ – ಜಿಲ್ಲೆಯಲ್ಲಿ ಸ್ವಚ್ಛತಾ ಆಂದೋನಕ್ಕೆ ಹೊಸ ಅಧ್ಯಾಯ ಸೃಷ್ಢಿಸಿದ ಕೋಟ ಪಂಚವರ್ಣ ಸಂಸ್ಥೆ
ಕೋಟ: ಮಾ.17ರಂದು 200ನೇ ಭಾನುವಾರ ಪರಿಸರಸ್ನೇಹಿ ಅಭಿಯಾನ
ಕೋಡಿ ಗ್ರಾ.ಪಂ ನಿಂದ ಕೋಟದವರೆಗಿನ 5 ಕಿಮೀ ಬೃಹತ್ ಸ್ವಚ್ಛತಾ ಕಾರ್ಯಕ್ರಮ
ಕೋಟ: ಪ್ರಧಾನಮಂತ್ರಿ ನರೇಂದ್ರ ಮೋದಿಜೀಯವ ಸ್ವಚ್ಛ ಭಾರತ ಪರಿಕಲ್ಪನೆಗೆ ಇಂಬು ನೀಡುವಂತೆ ಇಲ್ಲಿನ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಗಿಳಿಯಾರು ಗ್ರಾಮದಲ್ಲಿ ಪರಿಸರಸ್ನೇಹಿ ಸಂಘಟನೆಯೊಂದು ನಿರಂತರ ವಾರಗಳ ಕಾರ್ಯಕ್ರಮಗಳಿಂದ ಮನೆಮಾತಾಗಿ ಬೆಳೆದು ನಿಂತ ಸಂಸ್ಥೆಯೇ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ.
1997ರಲ್ಲಿ ಜನ್ಮ ತಳೆದ ಈ ಸಂಸ್ಥೆ ನಿರಂತವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡುತ್ತ ಇತ್ತೀಚಿಗಿನ ವರ್ಷಗಳಲ್ಲಿ ಪರಿಸರಸ್ನೇಹಿಯಾಗಿ ಗುರುತಿಸಿಕೊಂಡಿದೆ.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳ ಮೂಲಕ ಸಾಧಕರನ್ನು ಗುರುತಿಸಿ ,ಅಶಕ್ತರಿಗೆ ನೆರವು,ಇನ್ನಿತರ ಕಾರ್ಯಕ್ರಮಗಳ ನಡುವೆ 2018ರ ಡಿಸೆಂಬರ್ ತಿಂಗಳಲ್ಲಿ ಸ್ವಚ್ಛಭಾರತದ ಪರಿಕಲ್ಪನೆಗೆ ಟೊಂಕ ಕಟ್ಟಿತು.
ಪ್ರತಿ ಭಾನುವಾರ ತನ್ನ ಇಡೀ ತಂಡದೊಂದಿಗೆ ಗಲ್ಲಿ ಗಲ್ಲಿಗಳಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕಸ ಕಡ್ಡಿಗಳನ್ನು ಸ್ವಚ್ಛಗೊಳಿಸಿ ಪ್ಲಾಸ್ಟಿಕ್ ಮುಕ್ತ ತ್ಯಾಜ್ಯ ಮುಕ್ತ ಸಮಾಜಕ್ಕಾಗಿ ಶ್ರಮಿಸುತ್ತಿದೆ ಕೋಟ ಕೋಟತಟ್ಟು, ಸಾಲಿಗ್ರಾಮ, ತೆಕ್ಕಟ್ಟೆ ,ಪಾಂಡೇಶ್ಚರ ,ಐರೋಡಿ,ಕೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ, ವಿವಿಧ ಒಳ ರಸ್ತೆಗಳು ಸೇರಿದಂತೆ ಪಾರಂಪಳ್ಳಿ ಪಡುಕರೆ, ಕೋಟತಟ್ಟು ಪಡುಕರೆ,ಕೋಟ ಮಣೂರು ಪಡುಕರೆ,ತೆಕ್ಕಟ್ಟೆಯ ಕೊಮೆ ಬೀಚ್ ಗಳನ್ನು ಸ್ವಚ್ಛಗೊಳಿಸುವುದು ಸೇರಿದಂತೆ ಸೀತಾ ನದಿಯ ತಟವನ್ನು ತ್ಯಾಜ್ಯ ಮುಕ್ತಮಾಡಲು ಪಣತೊಟ್ಟು ಕಾರ್ಯೋನ್ಮುಖವಾಗಿದೆ.ಅದು ಅಲ್ಲದೆ ಕೋಟ ಹೋಬಳಿ ಮಟ್ಟದಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಪ್ಲಾಸ್ಟಿಕ್ ಮುಕ್ತ ಹಸಿರು ಕ್ರಾಂತಿ ಸೃಷ್ಠಿಸುವ ಕುರಿತಂತೆ ಪ್ರಭಂಧ ಸ್ಪರ್ಧೆಯನ್ನು ಏರ್ಪಡಿಸುವ ಕಾರ್ಯಕ್ರಮಗಳು,ಹೋಬಳಿ ಮಟ್ಟದ ಶಾಲಾ ಕಾಲೇಜುಗಳಲ್ಲಿ ಸಂಪನ್ಮೂಲ ವ್ಯಕ್ತಿಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿದೆ.
ಪ್ಲಾಸ್ಟಿಕ್ ಮುಕ್ತ ಜಾತ್ರೆ ಹಸಿರು ಕ್ರಾಂತಿ ಯೋಜನೆ
ಪಂಚವರ್ಣ ಸಂಸ್ಥೆಯ ಜತೆ ವಿವಿಧ ಸಂಘಸಂಸ್ಥೆಗಳ ಹಾಗೂ ಗೀತಾನಂದ ಫೌಂಡೇಶನ್ ಮೂಲಕ ಪರಿಸರದಲ್ಲಿ ಗಿಡನೆಟ್ಟು ಪೋಷಿಸುವ ಕಾರ್ಯಕ್ರಮ ಪ್ರತಿವರ್ಷದ ಜೂನ್ ನಿಂದ ಅಗಸ್ಟ್ ವರೆಗೆ ಅಯೋಜಿಸಲಾಗುತ್ತಿದೆ.ಇದರ ಭಾಗವಾಗಿ ಕೋಟ ಸೇರಿದಂತೆ ವಿವಿಧ ರಸ್ತೆ,ಪರಿಸರದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿರುವ ಸಸ್ಯ ಸಂಕುಲವೇ ಸಾಕ್ಷಿ,ಪ್ಲಾಸ್ಟಿಕ್ ಮುಕ್ತ ಜಾತ್ರೆಯ ಭಾಗವಾಗಿ ಪರಿಸರದ ದೇಗುಲಗಳ ಜಾತ್ರಾ ಸಂದರ್ಭದಲ್ಲಿ ಪ್ಲಾಸ್ಟಿಕ್ ಮುಕ್ತ ಜಾಗೃತಿ ಆಂದೋಲನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ,
ನಮ್ಮ ಸಂಸ್ಥೆ ಕನ್ನಡಪರ ಕಾರ್ಯಕ್ರಮಗಳ ಮೂಲಕ ಬೆಳಕಿಗೆ ಬಂದು ಇದೀಗ ಸಾಮಾಜಿಕ ವಿವಿಧ ಕಾರ್ಯಕ್ರಮಗಳ ನಡುವೆ ಪರಿಸರಸ್ನೇಹಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಪ್ರತಿ ಭಾನುವಾರ ಒಂದಲ್ಲ ಒಂದು ಸ್ಥಳದಲ್ಲಿ ಸ್ವಚ್ಛಗೊಳಿಸುವ ಕಾರ್ಯಕ್ರಮಗಳನ್ನು ಇಟ್ಟುಕೊಂಡು ಬರುತ್ತಿದೆ. ಪ್ಲಾಸ್ಟಿಕ್ ಮುಕ್ತ ,ಹಸಿರು ಕ್ರಾಂತಿ ಹಾಗೂ ನೀರಿನ ಸದ್ಭಳಕೆಯ ಕಾರ್ಯಕ್ರಮಗಳ ರೂಪು ರೇಖೆಗಳನ್ನು ಸಿದ್ಧಪಡಿಸಿ ಅನುಷ್ಠಾನ ಕೈಗೊಂಡಿದೆ. ಸ್ಥಳೀಯ ಸಾಕಷ್ಟು ಸಂಘಸಂಸ್ಥೆಗಳು ,ಸ್ಥಳೀಯಾಡಳಿತಗಳು,ಸಮಾಜಸೇವಕರು ಸಹಕಾರ ನೀಡುತ್ತಿದ್ದಾರೆ ಇದೀಗ ೨೦೦ನೇ ಭಾನುವಾರದ ಕಾರ್ಯಕ್ರಮಗಳನ್ನು ಈ ಸಮಾಜಕ್ಕೆ ಹಾಗೂ ಸಮಾಜಸೇವಕ ಆನಂದ್ ಸಿ ಕುಂದರ್ ರವರಿಗೆ ಅರ್ಪಿಸುತ್ತಿದ್ದೇವೆ.
ಅಜಿತ್ ಆಚಾರ್ ಅಧ್ಯಕ್ಷರು ಪಂಚವರ್ಣ ಯುವಕ ಮಂಡಲ ಕೋಟ.